This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ದೇಶ್ಯಶ್ರೀ-
ಈ ರಾಗವು ೫೮ನೆಯ ಮೇಳಕರ್ತ ಹೇಮವತಿಯ ಒಂದು
 

ಜನ್ಯರಾಗ,
 

 

ಸ ರಿ ಗ ಮ ದ ನಿ ದ ಸ

ಅ ಸ ನಿ ದ ಮ ಗ ರಿ ಸ
 
೫೫೯
 
ದೊರೆಸ್ವಾಮಿಯವರು
 

 
ದೊರೆ ಸ್ವಾಮಿ ಎಂ. ಆರ್. (೧೯೨೨)

ದೊರೆಸ್ವಾಮಿಯವರು
ಕರ್ಣಾಟಕದ ಚಿಕ್ಕಮಗಳೂರಿನಲ್ಲಿ ಜನಿಸಿದರು. ಇವರ ತಂದೆ ರಾಮಚಂದ್ರಯ್ಯ

ಇವರು ಮಗುವಾಗಿದ್ದಾಗಲೇ ಕಾಲವಾದುದರಿಂದ ಚಿಕ್ಕಪ್ಪ ಹಳೇ ಮೈಸೂರಿನ ನಿವೃತ್ತ

ಚೀಫ್ ಎಂಜಿನಿಯರ್ ರಂಗಯ್ಯನವರ ಆಶ್ರಯದಲ್ಲಿ ಬೆಳೆದರು ಬೆಂಗಳೂರಿನಲ್ಲಿದ್ದಾಗ

ಪಕ್ಕದ ಮನೆಯಲ್ಲಿ ಹಾಕುತ್ತಿ ದ್ದಾ ಮಾವೋನ್ ರಿಕಾರ್ಡುಗಳಲ್ಲಿ ಹಾಡನ್ನು ಕೇಳಿ

ಆ ಹಾಡುಗಳನ್ನು ಶೀಟಿಯ ಮೂಲಕ ಅನುಕರಣೆ ಮಾಡುತ್ತಿದ್ದರು. ೧೯೩೩ರಲ್ಲಿ

ಪಲ್ಲಡಂ ನಂಜೀವರಾಯರ ಶಿಷ್ಯ ನರಸಿಂಗರಾಯರ ಮುಂದೆ ಅದೇ ರೀತಿ ಶೀಟಿ ಹಾಕಿ

ಮೆಚ್ಚುಗೆ ಪಡೆದು ಅವರ ಶಿಷ್ಯರಾಗಿ ಮೂರು ವರ್ಷಗಳ ಕಾಲ ವೇಣುವಾದನವನ್ನು

ಕಲಿತು ೧೯೩೮ರಲ್ಲಿ ಪ್ರಥಮ ಕಚೇರಿಯನ್ನು ಮಾಡಿದರು. ನಂತರ ಮದ್ರಾಸಿನ

ಸಂಗೀತದ ಕಾಲೇಜಿನ ಪರೀಕ್ಷೆಯಲ್ಲಿ ಪ್ರಧಮ ಶ್ರೇಣಿಯಲ್ಲಿ ಉತ್ತೀರ್ಣರಾದರು.

ಬೆಂಗಳೂರಿನಲ್ಲಿ ಹಲವು ಕಚೇರಿಗಳಲ್ಲಿ ನುಡಿಸಿ ಹೆಸರುವಾಸಿಯಾದರು. ೧೯೫೨ರಲ್ಲಿ

ಬೆಂಗಳೂರಿನಲ್ಲಿ ಚೌಡಯ್ಯನವರ ಅಯ್ಯನಾರ್ ಕಲಾಶಾಲೆಯಲ್ಲಿ ಅಧ್ಯಾಪಕರಾದರು

೧೯೫೪ರಲ್ಲಿ ಭಾರತದ ಸಾಂಸ್ಕೃತಿಕ ನಿಯೋಗದ ಜೊತೆಯಲ್ಲಿ ರಷ್ಯಕ್ಕೆ ಹೋಗಿ

ಬಂದರು. ಇವರ ವೇಣುವಾದನದಲ್ಲಿ ಮಾಧುರ, ಲಯಜ್ಞಾನ, ಉತ್ತಮ

ಮನೋಧರ್ಮ ಅಪಾರವಾಗಿದೆ. ಇವರಿಗೆ ಶಿಷ್ಯರು ಅನೇಕ.
 

 
ದೊರೆಸ್ವಾಮಿ ಆರ್. ಎನ್. (೧೯೧೬)
ದೊರೆಸ್ವಾಮಿಯವರು ಅನೇಕ

ಖ್ಯಾತ ಸಂಗೀತಗಾರರ ಹುಟ್ಟೂರಾದ ಹಾಸನ ಜಿಲ್ಲೆಯ ರುದ್ರ ಪಟ್ಟಣದಲ್ಲಿ

ಜನಿಸಿದರು. 'ಇವರಿಗೆ ಉತ್ತಮ ಶಾರೀರವಿದ್ದುದನ್ನು ಗಮನಿಸಿದ ಇವರ ತಂದೆ

ಪ್ರಾರಂಭದಲ್ಲಿ ಶತಾವಧಾನಿ ವೆಂಕಟರಾಮಯ್ಯನವರಲ್ಲಿ ಪ್ರಾರಂಭದ ಶಿಕ್ಷಣ

ಕೊಡಿಸಿದರು. ನಂತರ ಬೆಟ್ಟದಪುರದ ಸೂರ್ಯನಾರಾಯಣರಾಯರಲ್ಲಿ ಕಲಿತು

ಹೈಸ್ಕೂಲು ವಿದ್ಯಾಭ್ಯಾಸವನ್ನು ಮುಗಿಸಿ

ಅಣ್ಣಾ ಮಲೆ ವಿಶ್ವವಿದ್ಯಾ
 
ಚಿದಂಬರದ
 

ನಿಲಯದ ಸಂಗೀತದ ಕಾಲೇಜಿಗೆ ಉನ್ನತ ಶಿಕ್ಷಣಕ್ಕಾಗಿ ಸೇರಿ, ಸೇಲಂ ದೊರೆಸ್ವಾಮಿ

ಅಯ್ಯಂಗಾರರಲ್ಲಿ ಮೂರು ವರ್ಷಗಳ ಕಾಲ ಕಲಿತರು. ಆದರೆ ಶಾರೀರವು ಒಡೆದು

ಹೋದುದರಿಂದ ಊರಿಗೆ ಹಿಂತಿರುಗಿದರು. ನಂತರ ಚೆನ್ನ ಕೇಶವಯ್ಯನವರಲ್ಲಿ

ವೀಣಾವಾದನವನ್ನೂ, ಚಿಕ್ಕರಾಮರಾಯರಲ್ಲಿ ಗಾಯನವನ್ನೂ ಸ್ವಲ್ಪ ಕಾಲ ಕಲಿತು

೧೯೩೯ ರಿಂದ ೧೨ ವರ್ಷಗಳ ಕಾಲ ವೆಂಕಟಗಿರಿಯಪ್ಪನವರಲ್ಲಿ ವೀಣೆಯಲ್ಲಿ ಶಿಕ್ಷಣ

ಪಡೆದು ೧೯೪೨ರಲ್ಲಿ ಅವರ ಜೊತೆಯಲ್ಲಿ ಪ್ರಥಮ ಕಚೇರಿಯಲ್ಲಿ ನುಡಿಸಿದರು

ನಂತರ ಆಕಾಶವಾಣಿಯ ಕೇಂದ್ರಗಳಲ್ಲೂ, ಭಾರತದ ಪ್ರಮುಖ ಸ್ಥಳಗಳಲ್ಲಿ