This page has not been fully proofread.

೫೫೩
 
ಸಂಗೀತ ಪಾರಿಭಾಷಿಕ ಕೋಶ
 
ದೇಶಖ-ಹಂಸವಿಲಾಸವೆಂಬ ಗ್ರಂಧದಲ್ಲಿ ಉಕ್ತವಾಗಿರುವ ಒಂದು ರಾಗ.
ದೇಶರಂಜನಿ-ಈ ರಾಗವು ೩೧ನೆ ಮೇಳಕರ್ತ ಯಾಗಪ್ರಿಯದ ಒಂದು
 
ಜನ್ಯರಾಗ,
 
ಸ ರಿ ಮ ಪ ದ ನಿ ಸ
ಸ ನಿ ದ ಸ ಮ ರಿ ಸ
 
ದೇಶಲಗೌಡ-ಸಂಗೀತಸಮಯಸಾರವೆಂಬ ಗ್ರಂಥದಲ್ಲಿ ಉಕ್ತವಾಗಿರುವ
 
ಒಂದು ಔಡವರಾಗ.
 
ದೇಶ ಲಂ-ತಿರುಪತಿಯ ತಾಳ್ಳಪಾಕಂ ವಾಗ್ಗೇಯಕಾರರ (೧೫ನೆ ಶ.)
ಕೃತಿಗಳಲ್ಲಿ ಕಂಡುಬರುವ ಒಂದು ರಾಗ,
 
ದೇಶವರಾಳಿ ಒಂದು ತೆಲುಗು ಗ್ರಂಥದಲ್ಲಿರುವ ಗೀತ ಗೋವಿಂದದ ೨೦
ನೆಯ ಅಷ್ಟ ಪದಿಯ ರಾಗ.
 
ದೇಶವಾಳ-ಗೌಡರಾಗದ ಒಂದು ಉಪಾಂಗರಾಗದ ಹೆಸರು.
 
ದೇಶ್-
ಸ ರಿ ಮ ಪ ನಿ ಸ
 
ಸ ನಿ ದ ಪ ಮ ಗ ರಿ ಸ
 
ದೇಶ-ರಘುನಾಥನಾಯಕನ ಸಂಗೀತಸುಧಾ ಎಂಬ ಗ್ರಂಥದಲ್ಲಿ ಉಕ್ತ
ವಾಗಿರುವ ೨೦ ಶುದ್ಧರಾಗಗಳಲ್ಲಿ ಒಂದು ರಾಗ,
 
ದೇಶದೇಶಾಖ ನಾರದನ ಸಂಗೀತಮಕರಂದವೆಂಬ ಗ್ರಂಥದಲ್ಲಿ ಉಕ್ತ
ವಾಗಿರುವ ಒಂದು ರಾಗಾಂಗರಾಗ
 
ದೇಶಾಕ್ಷರಿ - ಭರತ ಶಾಸ್ತಿರಂ ಎಂಬ ತಮಿಳು ಗ್ರಂಥದಲ್ಲಿ ಉಕ್ತವಾಗಿರುವ
ಒಂದು ರಾಗ.
 
ದೇಶಾಕ್ಕರಿ ಪುರಾತನ ತಮಿಳು ಸಂಗೀತದ ಪಾಲೈಯಾನ ೨೧
ಜನ್ಯಗಳಲ್ಲಿ ಒಂದು ರಾಗ
 
ದೇಶಾಕ್ಷಿ-ಈ ರಾಗವು ೨೯ನೆ ಮೇಳಕರ್ತ ಧೀರಶಂಕರಾಭರಣದ ಒಂದು
 
ಜನ್ಯರಾಗ,
 
ಸ ರಿ ಗ ಪ ದ ಸ
 
ಸ ನಿ ದ ಪ ಮ ಗ ರಿ ಸ
 
ಎಂಬುದು ರಂಜಕ
 
ಇದರಲ್ಲಿ ಗ ಗ ಗ ಗ ರಿ ಸ ರಿ ಗ ರಿ ಸ - ಸ ನಿ ನಿ ದ ಸ

ಪ್ರಯೋಗ, ಸ ನಿ ದ ಸ ಎಂಬಲ್ಲಿ ಕೈಶಿಕಿ ನಿಷಾದವು ಅನ್ಯಸ್ವರವಾಗಿ ಬರುತ್ತದೆ.
ಇದೊಂದು ಪುರಾತನವಾದ ಪ್ರಾತಃಕಾಲದ ರಾಗ, ಜಯದೇವನ ಗೀತ ಗೋವಿಂದದ
೯ನೆ ಅಷ್ಟಪದಿಯನ್ನು ಈ ರಾಗದಲ್ಲಿ ಹಾಡಲಾಗುವುದು. ಈ ರಾಗವು ನಾರದನ
ಸಂಗೀತಮಕರಂದ ಮತ್ತು ಇತರ ಗ್ರಂಥದಲ್ಲಿ ಉಕ್ತವಾಗಿದೆ.