This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ಆಶಯ, ಆಸೆ, ಕ್ರೋಧ, ರೋಷ, ಮರಣ, ವ್ಯಾಧಿ ಮೊದಲಾದ ಅನೇಕ ಸಂದರ್ಭ

ಗಳಲ್ಲಿ, ಬೇಕು ಬೇಡಗಳಲ್ಲಿಯೂ

ಕಣ್ಣೀರಿಡುವುದುಂಟು. ಇದಕ್ಕೆ

ಅಶ್ರುವೆಂದು ಹೆಸರು. ಇವು ಸಾತ್ವಿಕ ಭಾವವಿಭೇದಗಳು.
 
ಕೂಡ
 
೫೦
 

 
ಅಹೋಬಲ (೧೭ನೆ ಶ)-
ಅಹೋಬಲನು ಸಂಗೀತ ಪಾರಿಜಾತವೆಂಬ

ಗ್ರಂಧವನ್ನು ಸು. ೧೬೫೦ರಲ್ಲಿ ರಚಿಸಿದನು. ಇವನ ತಂದೆಯ ಹೆಸರು ಶ್ರೀ ಕೃಷ್ಣ,

ಇವನು ದಕ್ಷಿಣ ಭಾರತೀಯನೆಂದೂ, ಉತ್ತರ ಭಾರತಕ್ಕೆ ಹೋಗಿ ನೆಲೆಸಿದನೆಂದೂ

ಹೇಳುವರು. ವೀಣೆಯ ತಂತಿಯ ಉದ್ದವನ್ನು ಅನುಸರಿಸಿ ಸ್ವರಗಳನ್ನು ವಿವರಿಸಿರುವ

ಲಾಕ್ಷಣಿಕರಲ್ಲಿ ಇವನೇ ಮೊದಲಿಗನು. ಇವನು ಬರೆದಿರುವ ಗ್ರಂಥವು ಸಂಸ್ಕೃತ

ಭಾಷೆಯಲ್ಲಿರುವ ಹಿಂದೂಸ್ಥಾನಿ ಸಂಗೀತಕ್ಕೆ ಸಂಬಂಧಿಸಿದ ಒಂದು ಚಿಕ್ಕ ಗ್ರಂಧ.
ಅಂಕ-

 
ಅಂಕ
ಇದು ೯ನೆಯ ಸ್ವರಸ್ಥಾನವಾದ ಶುದ್ಧ ಧೈವತವನ್ನು ಸೂಚಿಸುವ

ಸಂಜ್ಞಾ ಸೂಚಕಪದ.

ಇದು ೯ನೆ ಸಂಖ್ಯೆಯನ್ನು ಸೂಚಿಸುತ್ತದೆ. ಸ್ವರಾರ್ಣವ

ವೆಂಬ ಗ್ರಂಥದಲ್ಲಿ ಉಕ್ತವಾಗಿದೆ.
 

 
ಅಂಕಣ್ಣನ್-
ಇವನು ೨೦ನೆ ಶತಮಾನದ ಆದಿಭಾಗದಲ್ಲಿದ್ದ ತಮಿಳುನಾಡಿನ

ತಂಜಾವೂರಿನ ಒಬ್ಬ ಪ್ರಖ್ಯಾತ ಮೃದಂಗ ವಿದ್ವಾಂಸ
 

 
ಅಂಕೀ
ಉದ್ದವಾಗಿ ಹಾಗೂ ಸಣ್ಣದಾಗಿರುವ ಒಂದು ಚರ್ಮವಾದ್ಯ.

 
ಅಂಕಿಯಗೀತಗಳು-
ಅಸ್ಸಾಂ ರಾಜ್ಯದ ನಾಟಕಗಳಲ್ಲಿ ಬರುವ ಕಥಾ
 

ಗೀತಗಳು.
 

 
ಅಂಕುರ-
(೧) ಭರತಮುನಿಯು ಹೇಳಿರುವ ಆಂಗಿಕಾಭಿನಯದ ಆರು ವಿಧ

ಗಳಲ್ಲಿ ಇದೊಂದು ಬಗೆಯ ಅಭಿನಯ, ವಾಕ್ಯದಲ್ಲಿ ಸೇರಿರುವ ವಸ್ತುವನ್ನು ಅಥವಾ

ವಿಷಯವನ್ನು ಆಂಗಿಕಾಭಿನಯದಿಂದ ಚಮತ್ಕಾರವಾಗಿ ವ್ಯಕ್ತಪಡಿಸುವುದು.
 

ಅಂಗ-ಸಂಗೀತ ರಚನೆಯ ಒಂದು ಭಾಗಕ್ಕೆ ಅಂಗವೆಂದು ಹೆಸರು. ಕೃತಿ

ಯಲ್ಲಿ ಪಲ್ಲವಿ, ಅನುಪಲ್ಲವಿ, ಚರಣವೆಂಬ ಮೂರು ಅಂಗಗಳಿವೆ. ಸಪ್ತ ಸ್ವರಗಳಲ್ಲಿ

ಮೊದಲಿನ ನಾಲ್ಕು ಸ್ವರಗಳಾದ 'ಸರಿಗಮ'ವು ಪೂರ್ವಾಂಗ, ನಂತರದ ( ಪದನಿಸವು

ಉತ್ತರಾಂಗ,
 

(೨) ತಾಳದ ಕ್ರಿಯೆಗಳಿಗೆ ಅಂಗಗಳೆಂದು ಹೆಸರು.
 

(೩) ಭರತನಾಟ್ಯಶಾಸ್ತ್ರದಂತೆ ತಲೆ, ಹಸ್ತ, ಎದೆ, ಪಕ್ಕೆಗಳು, ಪೃಷ್ಣ, ಪಾದ
ಗಳು.
ಈ ಆರನ್ನು ಅಂಗಗಳೆಂದು ಕರೆಯಲಾಗಿದೆ.
 
ಗಳು.
 

 
ಅಂಗತಾಳ-
ಭರತನಾಟ್ಯಶಾಸ್ತಿರಂ ಎಂಬ ೧೭ನೆ ಶತಮಾನದ ತಮಿಳು ಗ್ರಂಧ

ದಲ್ಲಿ ಉಕ್ತವಾಗಿರುವ ಒಂದು ತಾಳ ವಿಶೇಷ.
 

 
ಅಂಗತಾಳಗಳು -
ಪುರಾತನ ಕಾಲದ ೧೦೮ ತಾಳಗಳ ಹೆಸರು.
 
ಅಂಗ

 
ಅಂಗ ಪ್ಪೈ
ಕಿನ್ನರಿ-
ಕಮಾನಿನಿಂದ ನುಡಿಸಲ್ಪಡುವ ಏಕ ತಂತಿಯ ಒಂದು

ಗ್ರಾಮಾಣವಾದ್ಯ. ತೆಂಗಿನ ಅರ್ಧಕರಟ ಒಂದರ ಮೇಲೆ ಚರ್ಮವನ್ನು ಎಳೆದು