This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ದೇಶಾಕ್ಷಿರಿ
ಈ ರಾಗವು ೩೫ನೆ ಮೇಳಕರ್ತ ಶೂಲಿನಿಯ ಒಂದು ಜನ್ಯರಾಗ

ವೆಂದು ಗಾನವಿದ್ಯಾ ಪ್ರಕಾಶಿನಿ ಎಂಬ ಗ್ರಂಥದಲ್ಲಿ ಹೇಳಿದೆ.
ಸ ರಿ ಗ ಮ ದ ಸ
 

ಸ ರಿ ಗ ಮ ದ ಸ
ಸ ನಿ ದ ಪ ಮ ಗ ಮ ರಿ ಸ
 
೫೫೪
 

 
09:
 

 
ದೇಶಾಖ್ಯ-
ಸಂಗೀತರತ್ನಾಕರ ಮತ್ತು ಸಂಗೀತಸಮಯಸಾರ ಎಂಬ ಗ್ರಂಥ

ಗಳಲ್ಲಿ ಉಕ್ತವಾಗಿರುವ ಒಂದು ರಾಗ,
 

 
ದೇಶಾವಾಳಿ -
ಈ ರಾಗವು ೫೫ನೆ ಮೇಳಕರ್ತ ಶ್ಯಾಮಲಾಂಗಿಯ ಒಂದು

ಜನ್ಯರಾಗ,

ಸ ರಿ ಗ ಮ ದ ನಿ ದ ಸ

ಸ ನಿ ದ ಮ ಗ ರಿ ಸ
 

 
ದೇಶಾಶಂ -
ಪುರಾತನ ಗ್ರಂಥಗಳಲ್ಲಿ ಉಕ್ತವಾಗಿರುವ ಆರು ಮುಖ್ಯ

ರಾಗಗಳಲ್ಲಿ ಒಂದು ರಾಗ,
 

 
ದೇಶಾಂಗರಾಗ
ಮಧ್ಯಯುಗದಲ್ಲಿ
 
ಭಾಷಾಂಗರಾಗಕ್ಕೆ
 
ಪ್ರಚಲಿತವಿದ್ದ
 

 
ದೇಶಿಕಾಚಾರ್ ವಿ. (೧೯೨೪)-
ದೇಶಿಕಾಚಾರರು ಆಸ್ಥಾನ ವಿದ್ವಾಂಸ

ರಾಗಿದ್ದ ಎಂ. ವೆಂಕಟೇಶ ಅಯ್ಯಂಗಾರರ ಪುತ್ರನಾಗಿ ಮೈಸೂರಿನಲ್ಲಿ ಜನಿಸಿದರು.

ನಾಡಿನ ಪ್ರಮುಖ ವೈಣಿಕರಾದ ವಿ. ದೊರೆಸ್ವಾಮಿ ಅಯ್ಯಂಗಾರರ

ಸಹೋದರ. ಕೊಳಲಿನಲ್ಲಿ ತಂದೆಯವರಿಂದ ಶಿಕ್ಷಣ ಪಡೆದರು. ಮತ್ತು ವೀಣಾ

ವಾದನವನ್ನು ವೈಣಿಕ ಪ್ರವೀಣ ವೆಂಕಟಗಿರಿಯಪ್ಪನವರಲ್ಲಿ ಕಲಿತರು. ಮೊಟ್ಟ

ಮೊದಲು ಮೈಸೂರು ಕೃಷ್ಣಜಯಂತಿ ಉತ್ಸವದಲ್ಲಿ ವಿದ್ವಾಂಸರಿದ್ದ ಸಭೆಯಲ್ಲಿ

ಕಚೇರಿಯಲ್ಲಿ ನುಡಿಸಿ ಯಶಸ್ವಿಯಾಗಿ ಅಲ್ಲಿಂದ ಮುಂದೆ ಮೈಸೂರು, ಬೆಂಗಳೂರು,

ಮದ್ರಾಸ್ ಮುಂತಾದ ಬಾನುಲಿ ಕೇಂದ್ರಗಳಲ್ಲ, ಬೆಂಗಳೂರು, ಬೊಂಬಾಯಿ,

ದೆಹಲಿ ಮುಂತಾದ ಕಡೆಗಳಲ್ಲೆಲ್ಲಾ ಕೊಳಲು ಕಚೇರಿಗಳಲ್ಲಿ ನುಡಿಸಿ ಕೀರ್ತಿಶಾಲಿ

ಗಳಾಗಿದ್ದಾರೆ. ನಾದಮಾಧುರ, ಉತ್ತಮ ಮನೋಧರ್ಮ, ಕುಶಲತೆಯಿಂದ

ಕೂಡಿದ ಸ್ವರಕಲ್ಪನೆ ಮುಂತಾದುವು ಇವರ ವೇಣುವಾದನದ ಪ್ರಮುಖ ಅಂಶಗಳು.

ಇವರು ವೇಣುವಾದನದಲ್ಲಿ ಹೇಗೆ ವಿಶಾರದರೋ ಅಂತೆಯೇ ವೈಣಿಕರೂ ಆಗಿದ್ದಾರೆ.

ಮೈಸೂರಿನ

ಲಲಿತಕಲಾ ಕಾಲೇಜಿನಲ್ಲಿ ಕೊಳಲು ಅಧ್ಯಾಪಕರಾಗಿ ಸೇವೆ

ಸಲ್ಲಿಸುತ್ತಿದ್ದಾರೆ.
 

 
ದೇಶಿಕಿನ್ನರಿ -
ಸಂಗೀತರತ್ನಾಕರದಲ್ಲಿ ಉಕ್ತವಾಗಿರುವ ಒಂದು ಬಗೆಯ

ಕಿನ್ನರಿವಾದ್ಯ.
 

 
ದೇಶಿನೀ-
ನಾರದನ ಸಂಗೀತಮಕರಂದವೆಂಬ ಗ್ರಂಥದಲ್ಲಿ ಉಕ್ತವಾಗಿರುವ

ಒಂದು ರಾಗ.
 
ಹೆಸರು.
 
-