This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
೧೯೬೩ರಲ್ಲ, ಕೇಂದ್ರದ ಪ್ರಶಸ್ತಿ ೧೯೬೪ರಲ್ಲ
 
ದೊರಕಿವೆ. ೧೯೭೧ರಲ್ಲಿ

ಬೆಂಗಳೂರಿನ ಗಾಯನ ಸಮಾಜವು ಸಂಗೀತ ಕಲಾರತ್ನ' ಎಂಬ ಬಿರುದನ್ನೂ,

ಮಹಾರಾಜರು ಗಾನವಿಶಾರದ ಎಂಬ ಬಿರುದನ್ನೂ ನೀಡಿ ಸನ್ಮಾನಿಸಿದರು.

ಇವಲ್ಲದೆ ರಾಗಾಲಾಪನಚತುರ' ಮುಂತಾದ ಹಲವಾರು ಬಿರುದುಗಳು ಬಂದಿವೆ.

ಇವಲ್ಲದೆ ೧೯೭೨ರಲ್ಲಿ ಮೈಸೂರು ವಿಶ್ವವಿದ್ಯಾನಿಲಯವು ಇವರಿಗೆ ಡಾಕ್ಟರೇಟ್'

ಪದವಿಯನ್ನು ಕೊಟ್ಟು ಗೌರವಿಸಿದೆ.
 

ದೇವೇಂದ್ರಪ್ಪನವರು ಮಾರುತಿಯ ಪರಮಭಕ್ತರಾಗಿ ಸುಮಾರು ೪೮ ವರ್ಷ

ಗಳಿಂದ ಹನಮಜ್ಜಯಂತಿ ಉತ್ಸವವನ್ನು ಮೈಸೂರಿನಲ್ಲಿ ತಮ್ಮ ಮನೆಯಲ್ಲಿ ನಡೆಸಿ

ಕೊಂಡು ಬರುತ್ತಿರುವುದಲ್ಲದೆ ಸಂಗೀತ ವಿದ್ವಾಂಸರಿಗೆ ಬಿರುದನ್ನಿತ್ತು ಸನ್ಮಾನಿಸುತ್ತ

ಬಂದಿದ್ದಾರೆ.
 
೫೫೨
 
ಇವರಿಗೆ ಶಿಷ್ಯರು ಅನೇಕ. ಚಕ್ರಕೋಡಿ ನಾರಾಯಣಶಾಸ್ತ್ರಿ, ಎ. ಬಿ.

ರಮಾನಂದ್, ಎ. ಬಿ. ಉಮಾಪತಿ, ಪರಮಶಿವನ್, ಎಂ. ಎಸ್. ಗೋವಿಂದಸ್ವಾಮಿ,

ಜಿ. ಆರ್. ದಾಸಪ್ಪ, ಎಂ. ಎಸ್. ರಾಮಯ್ಯ, ಪಿಟೀಲು ಶಿವರಾಮಯ್ಯ,
 
ಎಂ. ಎಸ್. ಸುಬ್ರಹ್ಮಣ್ಯ ಪುತ್ರರಾದ ವೇಣುಗೋಪಾಲ್, ಲಕ್ಷ್ಮಣ್

ಮುಂತಾದವರು ಇವರಲ್ಲಿ ಪ್ರಮುಖರು.
 

 
ದೇವೇಂದ್ರ ಮುರುಡೇಶ್ವರ್-ಮು
ಮೂ
ರುಡೇಶ್ವರರ ಜನ್ಮಸ್ಥಳ ದಕ್ಷಿಣ ಕನ್ನಡ

ಜಿಲ್ಲೆಯ ಕುಮಟಾ ತಾಲ್ಲೂಕಿನ ಮಸೂರ್, ಕಾರವಾರದ ಹೈಸ್ಕೂಲಿನ ವಿದ್ಯಾಭ್ಯಾಸದ

ನಂತರ ಬೊಂಬಾಯಿಗೆ ಹೆಚ್ಚಿನ ವ್ಯಾಸಂಗಕ್ಕೆ ಹೋದರು. ಅಲ್ಲಿ ಫಯಾಜ್‌ಖಾನ್,

ಅಬ್ದುಲ್ ಕರೀಂಖಾನ್ ಮುಂತಾದವರ ಸಂಗೀತದಿಂದ ಪ್ರಭಾವಿತರಾಗಿ ಆರಂಭದ

ಶಿಕ್ಷಣವನ್ನು ಮಾಸ್ಟರ್ ನವರಂಗ್‌ರವರಲ್ಲಿ ಪಡೆದು ಉಸ್ತಾದ್ ಅಹಮದ್

ಹುರ್ಸೇಖಾನರಲ್ಲಿ ತಬಲಾವನ್ನು ಕಲಿತು ಪ್ರವೀಣರಾದರು.

ಪನ್ನಾಲಾಲ್ ಘೋಷರ ವೇಣುವಾದನಕ್ಕೆ ಮಾರು ಹೋಗಿ ಅವರ

ಎರಡು ವರ್ಷಗಳ ಕಾಲ ಕಲಿತರು. ೧೯೫೦ರಲ್ಲಿ ದೆಹಲಿ ಆಕಾಶವಾಣಿಯ ಕಲಾವಿದ

ರಾದರು. ಪನ್ನಾಲಾಲ್‌ರ ಅಳಿಯಂದಿರಾದರು.

ಯಲ್ಲಿ ಕಲಾವಿದರಾಗಿ ಬಂದರು

ಇಂಪಾಗಿ ಮೈ ಮರೆಸುವಂತಹುದು. ಈಗ ಇವರಿಗೆ ಸುಮಾರು ೫೮ ವರ್ಷ ವಯಸ್ಸು.

 
ದೇಶಕಾಕು
ಒಂದು ರಾಗದಲ್ಲಿ ಅನ್ಯಸ್ವರದ ಛಾಯೆಯನ್ನು ಕೊಟ್ಟು

ಆ ರಾಗದ ಸೌಂದರ್ಯವನ್ನು ಪ್ರಕಾಶಗೊಳಿಸುವ ವಿಧಾನ,
 

೧೯೪೧ರಲ್ಲಿ
ಶಿಷ್ಯರಾಗಿ
 
ನಂತರ ಮುಂಬಯಿ ಆಕಾಶವಾಣಿ

ಇವರ ಕೊಳಲು ವಾದನವು ತುಂಬುನಾದದಿಂದ
 

 
ದೇಶಕಾರ್-
ಇದು ಹಿಂದೂಸ್ಥಾನಿ ಪದ್ಧತಿಯಲ್ಲಿ ಭಾವಭಟ್ಟನ ೨೦ ಥಾಟ್

ಗಳಲ್ಲಿ ಒಂದು ಮೇಳರಾಗ,
 

 
ದೇಶಕಾರಿ -
ಹನುಮಾನ್ ಮತದಂತೆ ಪುರುಷರಾಗವಾದ ಮೇಘರಾಗದ

ಐದು ರಾಗಗಳಲ್ಲಿ ಇದೊಂದು ರಾಗದ ಹೆಸರು.