This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
೫೫೧
 

 
ಸ ಗ ಮ ಪ ನಿ ದ ನಿ ಸ

ಸ ನಿ ದ ನಿ ಪ ಮ ಗ ರಿ ಸ
 
ಸೇರಿದ ಒಂದು ರಾಗ,
 

 
ದೇವಾರವರ್ಧನಿ-
ಈ ರಾಗವು ಮಧ್ಯಯುಗದ ತಮಿಳು ಸಂಗೀತಕ್ಕೆ

ಸೇರಿದ ಒಂದು ರಾಗ,
ಇದು ಸಂಗೀತರತ್ನಾಕರ'ವೆಂಬ ಗ್ರಂಥದಲ್ಲಿ ಉಕ್ತವಾಗಿದೆ.

 
ದೇವಾಳ-
ಸಂಗೀತರತ್ನಾಕರ ಮತ್ತು ಸಂಗೀತಸುಧಾ ಎಂಬ ಗ್ರಂಥಗಳಲ್ಲಿ

ಉಕ್ತವಾಗಿರುವ ಒಂದು ಉಪಾಂಗರಾಗ,
 

 
ದೇವಾಶ್ರಮ-
ಈ ರಾಗವು ೫೩ನೆ ಮೇಳಕರ್ತ ಗಮನಶ್ರಮದ ಒಂದು
 

ಜನ್ಯರಾಗ,
 

ಸ ರಿ ಗ ಮ ದ ನಿ ಸ

ಸ ನಿ ದ ಮ ಗ ರಿ ಸ

 
ದೇವುಡು ಅಯ್ಯರ್
 

ಪ್ರಸಿದ್ಧ ವಾಗ್ಗೇಯಕಾರ ಕರೂರು ದಕ್ಷಿಣಾಮೂರ್ತಿ

ಶಾಸ್ತ್ರಿಗಳ ಬಂಧು ಮತ್ತು ಪಿಟೀಲು ವಿದ್ವಾಂಸರು, 'ಗರ್ಭಪುರಿ' ಎಂಬ ಅಂಕಿತವಿರುವ

ರಚನೆಗಳನ್ನು ಇವರಿಬ್ಬರೂ ಸೇರಿ ರಚಿಸಿದರು. ಶಾಸ್ತ್ರಿಗಳ ಸಾಹಿತ್ಯಕ್ಕೆ ದೇವುಡು

ಅಯ್ಯರ್ ಧಾತುವನ್ನು ಒದಗಿಸಿದರು.

ಕರೂರು ತಮಿಳುನಾಡಿನ ತಿರುಚಿರಪ್ಪಳ್ಳಿ

ಜಿಲ್ಲೆಯ ಒಂದು ಸ್ಥಳ.
 

 
ದೇವೇಂದ್ರಪ್ಪ ಬಿ. (೧೮೯೯)
ದೇವೇಂದ್ರಪ್ಪನವರು ಶಿವಮೊಗ್ಗ ಜಿಲ್ಲೆಯ

ಆಯನೂರಿನಲ್ಲಿ ಜನಿಸಿದರು. ಇವರ ತಂದೆ ಬಿ. ಎಸ್. ರಾಮಯ್ಯನವರು ಸ್ವಯಂ

ಸಂಗೀತಗಾರರು ಮತ್ತು ಭರತನಾಟ್ಯದಲ್ಲಿ ಪರಿಣತರು ಆಗಿದ್ದರು. ದೇವೇಂದ್ರಪ್ಪ

ನವರಿಗೆ ಗಾಯನ ಮತ್ತು ವಾದ್ಯದಲ್ಲಿ ಅವರ ತಂದೆಯಿಂದ ಶಿಕ್ಷಣ ದೊರಕಿತು.

ನಂತರ ತಿಟ್ಟೆ ನಾರಾಯಣ ಅಯ್ಯಂಗಾರರಲ್ಲಿ ತಮ್ಮ ವಿದ್ಯಾಭ್ಯಾಸವನ್ನು

ಮುಂದುವರಿಸಿದರು. ಬಿಡಾರಂ ಕೃಷ್ಣಪ್ಪನವರಲ್ಲಿ ಕಲಿಯಬೇಕೆಂಬ ಇಚ್ಛೆಯಿಂದ

ಅವರ ಭಾವಚಿತ್ರವನ್ನು ಎದುರಿನಲ್ಲಿಟ್ಟುಕೊಂಡು ಕಟ್ಟುನಿಟ್ಟಾದ ಸಾಧನೆ ಮಾಡಿ

ದರು. ಇವರ ೨೨ನೆ ವಯಸ್ಸಿನಲ್ಲಿ ಮಹಾರಾಜರ ವರ್ಷ ವರ್ಧಂತಿಯ ಸಂದರ್ಭ

ದಲ್ಲಿ ಅರಮನೆಯಲ್ಲಿ ಜಲತರಂಗನ್ನು ಅದ್ಭುತವಾಗಿ ನುಡಿಸಿದರು

ಒಡೆಯರು ಯಾರಲ್ಲಿ

ಕೇಳಿದಾಗ ಅಲ್ಲೇ
 
ಪಾಠವೆಂದು
 
ಕೃಷ್ಣರಾಜ
 
ಬಿಡಾರಂ
 
ಕುಳಿತಿದ್ದ
 

ಕೃಷ್ಣಪ್ಪನವರನ್ನು ತೋರಿಸಿದರು.
 
ಕೃಷ್ಣಪ್ಪನವರು ತಬ್ಬಿಬ್ಬಾಗಿ ಅಂದಿನಿಂದ
 
ದಿಲ್ ರುಬಾ
 
ಇವರನ್ನು ಶಿಷ್ಯನನ್ನಾಗಿ ಸ್ವೀಕರಿಸಿ ಶಿಕ್ಷಣವನ್ನು ಮುಂದುವರಿಸಿದರು ದೇವೇಂದ್ರಪ್ಪ

ನವರು ಹಿರಿಯ ಗಾಯಕರು ಮಾತ್ರವಲ್ಲದೆ ವೀಣೆ, ಪಿಟೀಲು, ಗೋಟು

ವಾದ್ಯ, ಜಲತರಂಗ್, ಸಿತಾರ್,

ಮುಂತಾದ ವಾದ್ಯಗಳನ್ನು

ನುಡಿಸುವುದರಲ್ಲಿ ಪ್ರವೀಣರು. ೧೯೫೩ರಲ್ಲಿ ಚೀಣಾ ದೇಶಕ್ಕೆ ಸಾಂಸ್ಕೃತಿಕ ನಿಯೋಗದ

ಸದಸ್ಯರಾಗಿ ಹೋಗಿ ಅಲ್ಲಿ ಹಲವು ಪ್ರಮುಖ ಸ್ಥಳಗಳಲ್ಲಿ ಜಲತರಂಗ್ ವಾದ್ಯವನ್ನು

ನುಡಿಸಿದರು. ಇವರಿಗೆ ರಾಜ್ಯದ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿಯು