This page has been fully proofread once and needs a second look.

ಕಳಲೆ
 
ಅ :
 
ಸ ರಿ ಗ ಮ ದ ನಿ ಸ

ಸ ನಿ ದ ಮ ಗ ರಿ ಸ

 
ದೇವರನಾಮ
 
ಸಂಗೀತ ಪಾರಿಭಾಷಿಕ ಕೋಶ
 
ನಾಲ್ಕು
 

ಪಲ್ಲವಿ, ಅನುಪಲ್ಲವಿ ಮತ್ತು ಒಂದು ಅಥವಾ ಅನೇಕ

ಚರಣಗಳೆಂಬ ಮೂರು ಭಾಗಗಳಿರುವ, ಕೃತಿಯನ್ನು ಮಾತು ಮತ್ತು ಧಾತುವಿನಲ್ಲಿ

ಹೋಲುವ ಹರಿದಾಸರ ಹಾಡುಗಳಿಗೆ ದೇವರನಾಮವೆಂದು ಹೆಸರು. ಇದು ಕತಿಯ

ಸ್ವರೂಪಕ್ಕೆ ಮೂಲವಾದುದು. ಕ್ರಿ. ಶ. ಹದಿನಾಲ್ಕನೆ ಶತಮಾನದಲ್ಲಿದ್ದ ನರಹರಿ

ತೀರ್ಥರಿಂದ ಇಲ್ಲಿಯವರೆಗೆ ಕನ್ನಡನಾಡಿನ ವ್ಯಾಸಕೂಟ ಮತ್ತು ದಾಸಕೂಟದ

ಸಂತರು ಕನ್ನಡದಲ್ಲಿ ರಚಿಸಿರುವ ದೇವರನಾಮಗಳು ಅನೇಕ ಸಾವಿರ ಇವೆ.

ಪಾದಗಳಿರುವ ಚರಣಗಳೇ ದೇವರನಾಮಗಳಲ್ಲಿ ಹೆಚ್ಚು. ಕೆಲವಲ್ಲಿ ಹನ್ನೆರಡರವರೆಗೆ

ಪಾದಗಳಿರುತ್ತವೆ. ಇಪ್ಪತ್ತನ್ನು ಮಾರಿದ ಚರಣಗಳುಳ್ಳ ದೇವರನಾಮಗಳೂ ಇವೆ.

ಕೊನೆಯ ಚರಣದಲ್ಲಿ ವಾಗ್ಗೇಯಕಾರನ ಅಂಕಿತವಿರುತ್ತದೆ. ಭಕ್ತಿಯೇ ಇವುಗಳ

ಮುಖ್ಯರಸ, ನೀತಿ, ತತ್ವ, ಸಮಾಜ ಸುಧಾರಣೆ, ಆಚಾರಸಂಹಿತೆ, ಸ್ತುತಿ, ಪ್ರಾರ್ಥನೆ,

ವೈರಾಗ್ಯ, ಮುಮುಕುತ್ವ, ಲೋಕರೀತಿವರ್ಣನ, ವೇದೋಪನಿಷತ್ತುಗಳ, ಶ್ರುತಿ

ಸ್ಮೃತಿಗಳ,

ಪುರಾಣೇತಿಹಾಸಗಳ ಸಾರವೇ ಇವುಗಳಲ್ಲಿದೆ. ನರಹರಿತೀರ್ಥ,

ಶ್ರೀಪಾದರಾಜರು, ವ್ಯಾಸರಾಯರು, ಪುರಂದರದಾಸರು, ಕನಕದಾಸರು, ವೈಕುಂಠ

ದಾಸರು, ವಾದಿರಾಜರು, ವಿಜಯದಾಸರು, ಜಗನ್ನಾಥದಾಸರು, ರಾಘವೇಂದ್ರ

ಸ್ವಾಮಿಗಳು, ಪ್ರಸನ್ನ ವೆಂಕಟದಾಸರು, ಮಹೀಪತಿದಾಸರು, ಸುರಪುರದ ಆನಂದ

ದಾಸರು, ಗೋಪಾಲದಾಸರು, ಮೋಹನದಾಸರು, ಹೆಳವನಕಟ್ಟೆ ಗಿರಿಯಮ್ಮ

ಮುಂತಾದ ಪ್ರಮುಖರೂ ಇವರ ಪರಂಪರೆಯಲ್ಲಿ ನೂರಾರು ಇತರ ವಾಗ್ಗೇಯಕಾರರು

ದೇವರನಾಮಗಳನ್ನು ರಚಿಸಿದ್ದಾರೆ. ದಾಸಕೂಟವು ಇಂದಿಗೂ ಜೀವಂತವಾಗಿದ್ದು

ಹಲವು ಆಧುನಿಕ ವಾಗ್ಗೇಯಕಾರರು ಇಂದಿಗೂ ದೇವರನಾಮಗಳನ್ನು ರಚಿಸುತ್ತ

ಬಂದಿದ್ದಾರೆ
ರೆ.
 

 
 
ದೇವಮಣಿ,
ಈ ರಾಗವು ೩೩ನೆಯ ಮೇಳಕರ್ತ ಗಾಂಗೇಯ ಭೂಷಣಿಯ

ಒಂದು ಜನ್ಯರಾಗ.
 

ಸ ರಿ ಗ ಪ ದ ನಿ ಸ
 

ಸ ನಿ ದ ಪ ಗ ರಿ ಸ
 

 
ದೇವಮನೋಹರಿ-
ಈ ರಾಗವು ೨೨ನೆಯ ಮೇಳಕರ್ತ ಖರಹರಪ್ರಿಯದ

ಒಂದು ಜನ್ಯರಾಗ,
 

ಸ ರಿಮ ಪ ದ ನಿ ಸ

ಸ ನಿ ದ ನಿ ಪ ಮ ರಿ ಸ
 

ಉಫಾಂಗರಾಗ : ರಿ, ಮ, ನಿ ಗಳು ಜೀವಸ್ವರಗಳು, ಸಾರ್ವಕಾಲಿಕರಾಗ,
 
ತ್ರಿಸ್ಥಾಯಿರಾಗ,