This page has been fully proofread once and needs a second look.

ಸಂಗೀತ ಪಾರಿಭಾಷಿತ ಕೋಶ
 
ಗಾಯಕಿಯರನ್ನೂ ನೇಮಿಸಿಕೊಂಡಿದ್ದನು. ಸಂಗೀತವನ್ನು ಪೋಷಿಸಿದ ಕೊನೆಯ

ಚಕ್ರವರ್ತಿ ಮಹಮದ್ ಷಾನ ಆಸ್ಥಾನದಲ್ಲಿ ಖ್ಯಾತ ವಿದ್ವಾಂಸರಾಗಿದ್ದ ಆದಾರಂಗ್

ಮತ್ತು ಸಾದಾರಂಗ್ ಇದ್ದರು.
 

 
ದೆಹಾಳಿ-
ಈ ರಾಗವು ೧೬ನೆಯ ಮೇಳಕರ್ತ ಚಕ್ರವಾಕದ ಒಂದು ಜನ್ಯರಾಗ,
ಸ ರಿ ಸ ದ ನಿ ಸ
 
ಸ ನಿ ದ ಸ ರಿ ಸ
 

ಸ ರಿ ಸ ದ ನಿ ಸ
ಸ ನಿ ದ ಸ ರಿ ಸ
 
ದೇವಕಾಂತ,
ಈ ರಾಗವು ೫೮ನೆ ಮೇಳಕರ್ತ ಹೇಮವತಿಯ ಒಂದು
 

 
ಅ :
 

ಜನ್ಯರಾಗ,
 

 
ದೇವ ಕೇಳಿ-
ಬೃಹದ್ಧರ್ಮ ಪುರಾಣದಲ್ಲಿ ಉಕ್ತವಾಗಿರುವ ವಸಂತ ರಾಗದ
 

ರಾಗಿಣಿಗಳ ಒಂದು ದಾಸಿರಾಗ
 

 
ದೇವಕೋಟಿ-
ಈ ರಾಗವು ೫೦ನೆ ಮೇಳಕರ್ತ ನಾಮನಾರಾಯಣಿಯ

ಒಂದು ಜನ್ಯರಾಗ
 
ಆ .

ಸ ರಿ ಮ ಗ ಮ ಪ ನಿ ಸ
 

 

ಸ ದ ಪ ಮ ರಿ ಗ ಸ
 

 
ದೇವಕ್ರಿ-
ನಾರದನ ಸಂಗೀತ ಮಕರಂದ ಮತ್ತು ಸೋಮನಾಥನ ರಾಗ

ವಿಬೋಧ ಎಂಬ ಗ್ರಂಥಗಳಲ್ಲಿ ಉಕ್ತವಾಗಿರುವ ಒಂದು ರಾಗ

 
ದೇವಕ್ರಿಯ-
(೧) ಈ ರಾಗವು ೨೨ನೆ ಮೇಳಕರ್ತ ಖರಹರಪ್ರಿಯದ

ಒಂದು ಜನ್ಯರಾಗ
 
ಸ ಗ ರಿ ಗ ಮ ಪ ದ ನಿ ದ ಸ
ಸ ನಿ ದ ಸ ಮ ಗ ರಿ ಗ ಸ
 

 

ಸ ನಿ ದ ಸ ಮ ಗ ರಿ ಗ ಸ
ಸ ಗ ಮ ಪ ದ ಸ ನಿ ಸ
ಸ ದ ಸ ಮ ರಿ ಸ
 

 

ಸ ದ ಸ ಮ ರಿ ಸ
ಇದೊಂದು ಉಪಾಂಗರಾಗ, ತ್ಯಾಗರಾಜರ "ನಾಟಿ ಮಾಟ ಮರಚಿತಿವೊ' ಎಂಬ

ರಚನೆಯು ಈ ರಾಗದ ಪ್ರಸಿದ್ಧ ಕೃತಿ.
 

(೨) ಇದೇ ಹೆಸರಿನ ಮತ್ತೊಂದು ರಾಗವು ೩೦ನೆ ಮೇಳಕರ್ತ ನಠಭೈರವಿಯ

ಒಂದು ಜನ್ಯರಾಗವಾಗಿದೆ.
 
ಸ ರಿ ಗ ಮ ನಿ ದ ನಿ
 

ಸ ರಿ ಗ ಮ ನಿ ದ ನಿ
ಪ ದ ಮ ಗ ರಿ ಸ ನಿ
 

(೩) ದೀಕ್ಷಿತರ ಪಂಧದಲ್ಲಿ ಶುದ್ಧ ಸಾವೇರಿ ರಾಗಕ್ಕೆ ದೇವಕ್ರಿಯ ಎಂದು ಹೆಸರು.

ಶ್ರೀ ಗುರುಗುಹ ತಾರ ಯಾಶುಮಾಂ ಎಂಬ ದೀಕ್ಷಿತರ ಕೃತಿಯು ಈ ರಾಗದಲ್ಲಿದೆ.
 

 
ದೇವಕೃತಿ-
ಸಂಗೀತರತ್ನಾಕರವೆಂಬ ಗ್ರಂಥದಲ್ಲಿ ಉಕ್ತವಾಗಿರುವ ಕೈಯಾಂಗ

ರಾಗಗಳಲ್ಲಿ ಇದೊಂದು ರಾಗ ಇದು ಸಂಗೀತ ಸುಧಾ' ಎಂಬ ಗ್ರಂಥದಲ್ಲಿ ಉಕ್ತವಾಗಿದೆ.