2023-06-28 06:52:52 by jayusudindra
This page has been fully proofread once and needs a second look.
ನಂತಹುದು
ಅಸಂಯುತ ಮತ್ತು ಸಂಯುತ ಹಸ್ತ ಭೇದಗಳು, ಒಂದು ಕೈಯಿಂದ ತೋರು
ಸಂಯುತ ಇದರಲ್ಲಿ ಪತಾಕ, ತ್ರಿಪತಾಕ, ಅರ್ಧಪತಾಕ,
ಕರ್ತರೀಮುಖ, ಮಯೂರ, ಅರ್ಧಚಂದ್ರ, ಅರಾಳ, ಶುಕತುಂಡ, ಮುಷ್ಟಿ, ಶಿಖರ,
ಕಪಿತ್ಥ, ಕಟಕಾಮುಖ, ಸೂಚಿ, ಚಂದ್ರಕಲ, ಪದ್ಮಕೋಶ, ಸರ್ಪಶಿರ, ಮೃಗಶಿರ,
ಸಿಂಹಮುಖ, ಕಾಂಗೂಲ, ಅಲಪದ್ಮ, ಚತುರ, ಭ್ರಮರ, ಹಂಸಾಸ್ಯ, ಹಂಸಪಕ್ಷ,
ಸಂದಂಶ, ಮುಕುಳ, ತಾಮ್ರ ಚೂಡ, ತ್ರಿಶೂಲ ಎಂಬ ಇಪ್ಪತ್ತೆಂಟು ವಿಧಗಳಿವೆ
ಹೆಸರು
ಅಶ್ವ
ಇದು ಪುರಾತನ ಷಡ್ಡ ಗ್ರಾಮದ ಗಾಂಧಾರ ಮೂರ್ಛನದ
ಇದು ಕರ್ಣಾಟಕ ಸಂಗೀತದ ಕಲ್ಯಾಣಿಮೇಳವನ್ನು ಹೋಲುತ್ತದೆ.
ಅಶ್ವತಾನ
ಇದು ಮನೋಧರ್ಮ ಸಂಗೀತದ ಒಂದು ಬಗೆಯ ತಾನ. ಇದ
ರಲ್ಲಿ ಸಪ್ತ ಸ್ವರ ಸಮೂಹಗಳನ್ನು ಮುಖ್ಯವಾಗಿ ಬಳಸುವರು
ಅಶ್ವರೂಢಾ
ಬೃಹದ್ಧರ್ಮ ಪುರಾಣದಲ್ಲಿ ಉಕ್ತವಾಗಿರುವ ಪ್ರಮುಖವಾದ
ವಸಂತರಾಗದ ಆರು ರಾಗಿಣಿಗಳಲ್ಲಿ ಒಂದು ರಾಗಿಣಿಯ ಹೆಸರು.
ಅಶ್ವತಿ ತಿರುನಾಳ್ (೧೭೫೬-೧೭೮೮)
ತಿರುವಾಂಕೂರಿನ ರಾಜಮನೆತನಕ್ಕೆ
ಸೇರಿದ ಅಶ್ವತಿ ತಿರುನಾಳ್ ಸಂಸ್ಕೃತ ವಿದ್ವಾಂಸರಾಗಿದ್ದರು. ಇವರು ಹಲವಾರು
ಕೀರ್ತನೆಗಳನ್ನು ರಚಿಸಿದರು. ಈ ಕೀರ್ತನೆಗಳನ್ನು ಇಂದಿಗೂ ತಿರುವನಂತಪುರದ
ಪದ್ಮನಾಭಸ್ವಾಮಿ ದೇವಾಲಯದಲ್ಲಿ ಹಾಡುತ್ತಾರೆ ಅವರ ಕಾಲದಿಂದ
ತಿರುವಾಂಕೂರಿನಲ್ಲಿ ಸಂಗೀತವು ಅಭಿವೃದ್ಧಿಯಾಗಲು ತೊಡಗಿತು.
ಅಶ್ವಿನೀ ದೇವತೆಗಳು
ಭರತನಾಟ್ಯಾಭಿನಯದಲ್ಲಿ ಎರಡು ಕೈಯಲ್ಲಿ ಪದ್ಮ
ಕೋಶ ಹಸ್ತವನ್ನು ಹಿಡಿದು ಎಡಗೈಯಲ್ಲಿ ತ್ರಿಪತಾಕ ಮತ್ತು ಬಲಗೈಯಲ್ಲಿ ಅರ್ಧ
ಪತಾಕವನ್ನು ಹಿಡಿದು ಅದನ್ನು ಭೂಮುಖವಾಗಿರಿಸಿ, ಬಳಿಕ ಆ ಬಲಗೈಯನ್ನು
ಪಕ್ಕೆ ಲಬುಗಳ ಎದುರು ಬರುವಂತೆ ತಂದು, ಅದರಲ್ಲಿ ಮುಕುಳಹಸ್ತವನ್ನು ಹಿಡಿದರೆ
ಅದು ಅಶ್ವಿನಿ ದೇವತೆಗಳಿಗೆ ಸಲ್ಲುತ್ತದೆ ಎರಡು ಕೈಗಳಲ್ಲಿರಬೇಕಾದ ಪದ್ಮಕೋಶ
ಹಸ್ತಗಳು ಅಮೃತಮಯವಾದ ಆರೋಗ್ಯಸೂಚಕ. ಎಡಗೈಯ ತ್ರಿಪತಾಕವು ತೇಜ
ಸೂಚಕ. ಮೃಗಶೀರ್ಷ ಹಸ್ತವು ಶಕ್ತಿ ಮತ್ತು ಉಲ್ಲಾಸ ಸೂಚಕ.
ಅರ್ಧಪತಾಕಾದಿಗಳು ಭೂಮುಖವಾಗುವುದು ವ್ಯಾಧಿ ಸೂಚಕ.
ಪಕ್ಕೆ ಲಬುಗಳ
ಎದುರು ಸುಳಿ ಬೀಳುವ ಹಸ್ತವು ಶಸ್ತ್ರ ಕ್ರಿಯಾದಿಗಳ ಸೂಚಕ. ಅಲ್ಲಿಂದ
ಮುಕುಳ ಹಸ್ತವಾಗುವುದು ಬಲಿಹರಣ ಅಥವಾ ನೂತನಾವತರಣಾದಿಗಳ ಸೂಚಕ.
ಈ ರೀತಿ ಹಸ್ತ ಮುದ್ರೆಗಳ ವ್ಯಾಪ್ತಿ ಬಹುಮುಖ.
ಅಶ್ರು
ಜೀವನದಲ್ಲಿ ಕಣ್ಣೀರಿಡುವ ಅನೇಕ ಸಂದರ್ಭಗಳು ಅನೇಕ
ರೀತಿಗಳಲ್ಲಿ ಒದಗಿ ಬರುತ್ತವೆ. ನೆನಪು, ಚಿಂತೆ, ವೇದನೆ, ಆನಂದ, ಅರ್ಪಣೆ,
೪೯