This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
೫೪೩
 
ಸ ರಿ ಮ ಪ ದ ಸ
 

ಸ ನಿ ಪ ಮ ರಿ ಗ ಮ ರಿ ಸ
 

 
ದೂರ್ವಾಸರಾಯರು (ದೂರಪ್ಪದಾಸರು)
ಇವರು ಸವಣೂರು

ದಿವಾನ್ ಖಂಡೇರಾಯರ ಮಕ್ಕಳು ಇವರ ಅಂಕಿತ (ಭಾಗ್ಯನಿಧಿ ವಿಠಲಾಂಕಿತ

ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲಿದ್ದರು. ಹಲವು ದೇವರ ನಾಮಗಳನ್ನು

ರಚಿಸಿದ್ದಾರೆ.
 
ಛಲ
 

 
ದೆಹಲಿ -
ಭಾರತದ ರಾಜಧಾನಿಯಾದ ದೆಹಲಿಯು ಪುರಾತನ ಕಾಲದಿಂದಲೂ

ಒಂದು ಪ್ರಮುಖ ಸಂಗೀತ ಕಲಾಕೇಂದ್ರವಾಗಿದೆ. ಮುಸ್ಲಿಂ ದೊರೆಗಳ ಕಾಲದಲ್ಲಿ

ಇದು ಉಚ್ಛಾ ಯ ಸ್ಥಿತಿಯಲ್ಲಿತ್ತು ಪ್ರಸಿದ್ಧ ಸಂಗೀತ ವಿದ್ವಾಂಸನಾದ ಅಮಾರ್

ಖುಸ್ತುವು ಅಲ್ಲಾವುದ್ದೀನ್ ಖಿಲ್ಲಿಯ (೧೯೯೬-೧೩೧೬) ಆಸ್ಥಾನ ವಿದ್ವಾಂಸ

ನಾಗಿದ್ದನು. ದಕ್ಷಿಣ ಭಾರತದ ಗೋಪಾಲನಾಯಕನೂ ಆಸ್ಥಾನದ ಮತ್ತೊಬ್ಬ

ಪ್ರಮುಖ ಸಂಗೀತ ವಿದ್ವಾಂಸನಾಗಿದ್ದನು. ಇವರಿಬ್ಬರಿಗೂ ನಡೆದ ಚರಿತ್ರಾರ್ಹವಾದ

ಸಂಗೀತ ಸ್ಪರ್ಧೆಯು ದೆಹಲಿಯಲ್ಲಿ ನಡೆಯಿತು. ಏಳು ದಿನಗಳ ಕಾಲ ಗೋಪಾಲ

ನಾಯಕನು ಶ್ರುತಿ ಮತ್ತು ಗಮಕ ಪ್ರಧಾನವಾದ ಕರ್ಣಾಟಕ ಶೈಲಿಯಲ್ಲಿ ಹಾಡಿದನು.

ಆಗ ಅಫಾರ್ ಖುಸ್ರುವು ಸಿಂಹಾಸನದ ಹಿಂದೆ ಯಾರಿಗೂ ಕಾಣದಂತೆ ಕುಳಿತು

ಗೋಪಾಲನಾಯಕನ ಶೈಲಿಯನ್ನು ಅರಗಿಸಿಕೊಂಡು ಎಂಟನೆಯ ದಿನ ಅದೇ

ಶೈಲಿಯ ಕಚೇರಿಗಾಯನ ಮಾಡಿ ಎಲ್ಲರನ್ನೂ ಅಚ್ಚರಿಗೊಳಿಸಿದನು ಎಂಬ ಒಂದು

ಕತೆ ಪ್ರಚಲಿತವಾಗಿದೆ.
 

ಮೊಗಲ್ ಚಕ್ರವರ್ತಿಗಳಲ್ಲಿ ಬಾಬರ್‍ (೧೪೮೩-೧೫೩೦) ಮತ್ತು

ಹುಮಾಯೂನ್ (೧೫೩೦-೧೫೫೬) ಸಂಗೀತ ಕಲೆಯ ಪ್ರೇಮಿಗಳೂ, ಪೋಷಕರೂ

ಆಗಿದ್ದರು. ಅಕ್ಟರ್ ಮಹಾಶಯನು (೧೫೫೬-೧೬೦೫) ಸಂಗೀತಜ್ಞನಾಗಿದ್ದನು.

ಐನಿ ಅಕ್ಷರಿ ಎಂಬ ಗ್ರಂಥದಲ್ಲಿ ಖ್ಯಾತ ಗಾಯಕ ತಾನಸೇನನು ಮೊದಲ್ಗೊಂಡು

೩೬ ಪ್ರಮುಖ ಸಂಗೀತ ವಿದ್ವಾಂಸರು ಇವನ ಆಸ್ಥಾನದಲ್ಲಿದ್ದರೆಂದು ಹೇಳಿದೆ.

ಜಹಾಂಗೀರ್ (೧೬೦೫-೧೬೨೭) ಮತ್ತು ಷಾಜಹಾನ್‌ನ (೧೬೨೭-೧೬೫೮)

ಕಾಲದಲ್ಲಿ ಸಂಗೀತವು ಉತ್ತಮ ಸ್ಥಿತಿಯಲ್ಲಿತ್ತು. ಔರಂಗಜೇಬನ (೧೬೫೮-೧೭೦೭)

ಕಾಲದಲ್ಲಿ ದೆಹಲಿಯು ಸಂಗೀತ ಕೇಂದ್ರವಾಗಿ ತನ್ನ ಪ್ರಾಮುಖ್ಯತೆಯನ್ನು ಕಳೆದು

ಕೊಂಡಿತು. ಆಸ್ಥಾನದ ಗಾಯಕರನ್ನೂ, ಸಂಗೀತ ವಿದ್ವಾಂಸರನ್ನೂ ಅವನು

ಕೆಲಸದಿಂದ ತೆಗೆದು ಹಾಕಿದನು. ಅವರೆಲ್ಲರೂ ಸೇರಿ ಸಂಗೀತದ ಮರಣವನ್ನು

ಸೂಚಿಸುವ ಶವದ ಪೆಟ್ಟಿಗೆಯನ್ನು ಹೊತ್ತು ಬಂದರಂತೆ. ಆಗ ಚಕ್ರವರ್ತಿಯು

ದುಃಖಿಸುತ್ತಿದ್ದ ಸಂಗೀತಗಾರರನ್ನು ಕುರಿತು "ಸಂಗೀತದ ಪ್ರತಿಧ್ವನಿಯೂ ಕೇಳದಷ್ಟು

ಆಳವಾಗಿ ಹಳ್ಳ ತೆಗೆದು ಪೆಟ್ಟಿಗೆಯನ್ನು ಹೂಳಿರಿ" ಎಂದನಂತೆ.

ಆದರೂ ತನ್ನ

ಪತ್ನಿಯರು ಮತ್ತು ಹೆಣ್ಣು ಮಕ್ಕಳ ಮನೋರಂಜನೆಗಾಗಿ ನರ್ತಕಿಯರು ಮತ್ತು