2023-07-06 06:29:22 by jayusudindra
This page has been fully proofread once and needs a second look.
ಅರೇರೆ ಜಯ ಜಯಸಾಕೇತಪುರವಾಸ ಎಂಬ ಲಕ್ಷಣಗೀತೆ, ದೀಕ್ಷಿತರ ಚೇತಃಶ್ರೀಬಾಲ
ಕೃಷ್ಣಂ ಎಂಬ ಕೃತಿಯು ಹಿಂದೂಸ್ಥಾನಿ ಸಂಗೀತದ ಜಯಜಯವಂತಿಯ ಈಗಿನ
ಲಕ್ಷಣಗಳನ್ನು ಒಳಗೊಂಡಿದ್ದ ಧ್ರುಪದ್ ರಚನೆಯ ಶೈಲಿಯಲ್ಲಿದೆ.
ಈ ರಾಗವು ಸಾಧಾರಣ ಗಾಂಧಾರವನ್ನು ಅನ್ಯಸ್ವರವಾಗಿ ಹೊಂದಿರುವ
ಭಾಷಾಂಗರಾಗ ಮತ್ತು ದೇಶ್ಯರಾಗ, ರಿ ಮ ಗಾ ರೀ ಗ ರಿ ಸಾ ಎಂಬ ಸ್ವರಸಮೂಹ
ದಲ್ಲಿ ಈ ಸ್ವರವು ಕಂಡುಬರುತ್ತದೆ. ರಿಷಭ ಮತ್ತು ಮಧ್ಯಮವು
ಇವು ದೀರ್ಘಸ್ವರಗಳಾಗಿದ್ದ ಕಂಪಿತ ಗಮಕದೊಡನೆ ಹಾಡಲಾಗುವುದು.
ಗ ರೀ ಸ್ವರಸಮೂಹದಲ್ಲಿ ಗಾಂಧಾರವು ಕೆಲವು ಸಲ ಸಾಧಾರಣ ಗಾಂಧಾರವಾಗಿಯೂ,
ಕೆಲವು ಸಲ ಅಂತರ ಗಾಂಧಾರವಾಗಿಯೂ ಕಂಡುಬರುತ್ತದೆ. ಸಾರ್ವಕಾಲಿಕರಾಗ,
ಶೃಂಗಾರರಸ ಪ್ರಧಾನವಾದ ರಮಣೀಯವಾದ ರಾಗ,
೫೩೫
ದ್ವಿತೀಯ
೧) ಸಾಮಗಾನ ಮೇಳದಲ್ಲಿ ಅವರೋಹಣದ ಎರಡನೆಯ
ಸ್ವರ ಎಂದರೆ ರಿಷಭ ಸ್ವರ,
(೨) ಪುರಾತನ ಪ್ರಸಿದ್ಧವಾದ ೧೦೮ ತಾಳಗಳಲ್ಲಿ ಒಂದು ತಾಳ, ಒಂದು
ದ್ರುತ, ಲಘು ಮತ್ತು ದ್ರುತವನ್ನು ಹೊಂದಿದೆ ಮತ್ತು ಇದರ ಒಂದಾವರ್ತಕ್ಕೆ ೨
ಮಾತ್ರೆಗಳು,
ದ್ವಿತೀಯ ಕಾಲ
ಎರಡನೆಯ ಕಾಲ ಅಥವಾ ವೇಗ,
ಕಾಲ, ಮಧ್ಯಮವು ದ್ವಿತೀಯ ಕಾಲ.
ದ್ವಿತೀಯ ಕಾಮೋದ
ಸಂಗೀತರತ್ನಾಕರವೆಂಬ ಗ್ರಂಥದಲ್ಲಿ ಉಕ್ತವಾಗಿರುವ
ಹತ್ತು ಪ್ರಸಿದ್ಧ ದೇಶೀರಾಗಗಳಲ್ಲಿ ಇದೊಂದು ರಾಗವಿಶೇಷ.
ದ್ವಿತೀಯ ಕೇದಾರ
ಸೋಮನಾಥನ ರಾಗವಿಬೋಧವೆಂಬ ಗ್ರಂಥದಲ್ಲಿ
ಉಕ್ತವಾಗಿರುವ ಒಂದು ವಿಧವಾದ ಕೇದಾರರಾಗ ಮತ್ತು ಸಂಪೂರ್ಣರಾಗ
ನಿಷಾದವು ಗ್ರಹ, ನ್ಯಾಸ ಮತ್ತು ಅಂಶಸ್ವರ. ರಾತ್ರಿ ವೇಳೆಯಲ್ಲಿ ಹಾಡಬಹುದಾದ ರಾಗ,
ದ್ವಿತೀಯ ಘನಪಂಚಕ
ಕೇದಾರ, ನಾರಾಯಣಗೌಳ, ರೀತಿಗೌಳ,
ಸಾರಂಗನಾಟ ಮತ್ತು ಭೌಳಿ ಈ ರಾಗಗಳಿಗೆ ದ್ವಿತೀಯ ಘನಪಂಚಕ ರಾಗಗಳೆಂದು
ಸ ರಿ ಗ ಮ ಪ ನಿ ಸ ಸ
ಸ ನಿ ದ ಪ ಮ ರಿ ಗ ಮ ರಿ ಸ
ದ್ವಿತೀಯ ಪಂಚಮ
ಈ ರಾಗವು ೬೯ನ ಮೇಳಕರ್ತ ಧಾತುವರ್ಧನಿಯ
ಒಂದು ಜನ್ಯರಾಗ.
ದ್ವಿತೀಯ ಬಂಗಾಳ
ಸಂಗೀತರತ್ನಾಕರವೆಂಬ ಗ್ರಂಥದಲ್ಲಿ ಉಕ್ತವಾಗಿರುವ
ಹತ್ತು ಪ್ರಸಿದ್ಧ ದೇಶೀರಾಗಗಳಲ್ಲಿ ಒಂದು ರಾಗ,