This page has been fully proofread once and needs a second look.

ಅಸಾವೇರಿ-
ಆ : ಸ ರಿ ಮ ಪ ದ ಸ
ಅ : ಸ ನಿ ದ ಪ ಮ ಗ ರಿ ಸ
(ಸ ನೀ ಸ ಪ ದ ಮ ವ ಮ ರಿ ಗಾ ರಿ ಸ)
ಈ ರಾಗವು ೮ನೆಯ ಮೇಳಕರ್ತ ಹನುಮತೋಡಿಯ ಒಂದು ಜನ್ಯರಾಗ, ಆರೋಹಣ
ದಲ್ಲಿ ಗಾಂಧಾರ ನಿಷಾದಗಳು ವರ್ಷವಾಗಿರುವ ಒಂದು ಪ್ರಾಚೀನ ರಾಗ.
ರಾಗ, ಭಾಷಾಂಗರಕ್ತಿರಾಗ, ಗಮಕವರಿಕ, ಸಾರ್ವಕಾಲಿಕರಾಗ, ಆರೋಹಣದಲ್ಲಿ
ಚತುಶ್ರುತಿ ರಿಷಭವು ಸಮಯೋಚಿತವಾಗಿಯೂ, ಅವರೋಹಣದಲ್ಲಿ ಗಾಂಧಾರವು
ಕಡಿಮೆಯಾಗಿರುವುದು. ಸಂಚಾರಗಳಲ್ಲಿ ಚತುಶ್ರುತಿ ರಿಷಭ ಮತ್ತು ಶುದ್ಧ ಗಾಂಧಾರ
ಪ್ರಯೋಗಗಳುಂಟು. ಶೋಕರಸ ಪ್ರಧಾನವಾದ ರಾಗ, ತ್ಯಾಗರಾಜರ ( ರಾ ರಾಮ
ಯಿಂಟದಾಕಾ ' (ಆದಿತಾಳ) ಮತ್ತು ಮುತ್ತುಸ್ವಾಮಿ ದೀಕ್ಷಿತರ : ಚಂದ್ರಂ ಭಜ
ಮಾನನ ' (ಮುತಾಳ) ಎಂಬ ಕೃತಿಗಳು ಈ ರಾಗದಲ್ಲಿ ಪ್ರಸಿದ್ಧವಾದ ರಚನೆಗಳು,
 
ಅಸೂಯೆ
ಇದು ಸಂಚಾರಿ ಭಾವಗಳಲ್ಲಿ ಒಂದು ವಿಧ. ವಿವಿಧ ಅವರಾಧ,
ದ್ವೇಷ, ಗುಣ ನಿರಸನ, ಈರ್ಷೆ, ಕ್ರೋಧ ಮುಂತಾದುವುಗಳಿಂದ ಉಂಟರಿಗುವಂತಹ
ಭಾವನೆ ಮತ್ತೊಬ್ಬರಲ್ಲಿರುವ ಸೌಭಾಗ್ಯ, ಬುದ್ಧಿ, ಐಶ್ವರ್ಯ, ಆರೋಗ್ಯ, ವಿಲಾಸ,
ವಿದ್ಯೆ, ವಿಚಾರ, ವ್ಯವಹಾರಿಕ ರೀತಿ, ನೀತಿ, ನಡತೆ, ನಿಯಮ, ಶುಭ್ರತೆ, ಜ್ಞಾನ,
ಅಲಂಕಾರ, ಅನುಕೂಲ, ಸೌಂದರ್ಯ ಮೊದಲಾದುವುಗಳನ್ನು ಕಂಡುಸಹಿಸಲಾಗ
ದಿದ್ದಾಗ ಉಂಟಾಗುವ ಈರ್ಷಾಜನ್ಯಭಾವವೇ ಅಸೂಯೆ.
 
ಅಸಂಕೀರ್ಣ ಸ್ಥಾಯಿ
ರಾಗದ ಆಲಾಪನೆಗೆ ಸಂಬಂಧಿಸಿದ ೨೦ ಬಗೆಯ
ಸ್ಥಾಯಿಗಳಲ್ಲಿ ಇದು ಒಂದು ಬಗೆಯ ಸ್ಥಾಯಿ
 
ಅಸಂಬಾದ
ಈ ರಾಗವು ೨೯ನೆಯ ಮೇಳಕರ್ತ ಧೀರ ಶಂಕರಾಭರಣದ
ಒಂದು ಜನ್ಯರಾಗ.

ಆ : ಸ ರಿ ಸ ಮ ಪ ದ ನಿ ದ ಸ
ಅ : ಸ ನಿ ದ ಪ ಮ ಗ ಸ ರಿ ಸ
 
ಅಸಂಪೂರ್ಣಮೇಳ
ಸಂಪೂರ್ಣವಾಗಿ ಸಪ್ತ ಸ್ವರಗಳನ್ನೂ ಆರೋಹಣ
ಮತ್ತು ಅವರೋಹಣಗಳಲ್ಲಿ ಹೊಂದಿಲ್ಲದಿರುವ ರಾಗ. ಅದು ಔಡವ ಅಥವಾ
ಷಾಡವರಾಗವಾಗಿರುತ್ತದೆ ಕನಕಾಂಬರಿ-ಫೋನದ್ಯುತಿ ಮೇಳಪದ್ಧತಿಯಲ್ಲಿ ಅನೇಕಮೇಳಗಳು ಅಸಂಪೂರ್ಣವಾಗಿವೆ.
 
ಅಸಂಪೂರ್ಣತಾನ
ಸಪ್ತ ಸ್ವರಗಳೆಲ್ಲವೂಇಲ್ಲದಿರುವ ಸ್ವರಗುಚ್ಛ
ಇಂತಹವುಗಳಲ್ಲಿ ೨, ೩, ೪, ೫ ಅಧವಾ ೬ ಸ್ವರಗಳಿರುತ್ತವೆ.
 
ಅಸಂಯುಕ್ತ ಹಸ್ತಮುದ್ರೆಗಳು
ಭರತನಾಟ್ಯದಲ್ಲಿ ಭಾವಾಭಿನಯಕ್ಕೆ
ಅನುಕೂಲವಾಗುವಂತಹ ವಿವಿಧ ಅರ್ಥಗಳನ್ನು ಸೂಚಿಸುವ ಕೈ ಬೆರಳುಗಳ