2023-07-06 06:13:25 by jayusudindra
This page has been fully proofread once and needs a second look.
ಒಂದು ನ್ಯೂನಶ್ರುತಿಯಾಗುತ್ತದೆ. ೧೨ ಸ್ವರಸ್ಥಾನಗಳಲ್ಲಿ ೨೨ ಶ್ರುತಿಗಳನ್ನು ಹಂಚಿರು
ವುದು ಸಮರ್ಪಕವಾದ ಪದ್ಧತಿಯಾಗಿದೆ
೫೨೯
ಪುರಾತನ ಸಂಗೀತ ಪದ್ಧತಿಯಲ್ಲಿ ೨೨ ಶ್ರುತಿಗಳನ್ನು ಎಲ್ಲಾ ಸ್ವರಗಳಿಗೆ ಹಂಚ
ಲಾಗಿತ್ತು. ಆದರೆ ಸ ಮತ್ತು ಪ ಗಳು ಅವಿಕೃತ ಸ್ವರಗಳೆಂದಾದ ನಂತರ ಇವುಗಳಿಗೆ
ಒಂದೊಂದು ಶ್ರುತಿಯನ್ನೂ, ಉಳಿದ ಐದು ಸ್ವರಗಳಿಗೆ ಒಂದೊಂದಕ್ಕೂ ೪ ಶ್ರುತಿಗಳಂತೆ
ಅಂದರೆ ೪•೫= ೨೦+೧+೧=೨೨ ಶ್ರುತಿಗಳಾದುವು.
ಹಂಚಲಾಯಿತು.
ಹೀಗೆ ಸ್ವರಸಪ್ತಕದ ದ್ವಾದಶಸ್ವರಸ್ಥಾನಗಳಿಗೆ ದ್ವಾವಿಂಶತಿ ಶ್ರುತಿಗಳೆಂದು ಸಿದ್ಧಾಂತ
ವಾಗಿದೆ.
ಈ ಶ್ರುತಿಗಳನ್ನು ಸಂವಾದಿತ್ವದ ಆಧಾರದ ಮೇಲೆ ಸಿದ್ಧ ಮಾಡಲಾಯಿತು.
ಅಂದರೆ ಸಂವಾದಿ ದ್ವಯ ಅಥವಾ ಸಪ ಮತ್ತು ಸಮ ಪದ್ಧತಿಯಿಂದ ನಿರ್ಧರಿಸ
ಲಾಯಿತು. "ಷಡ್ಡ ಪಂಚಮಭಾವೇನ ಶ್ರುತಿ ದ್ವಾವಿಂಶತಿಂಜಗುಃ" ಎಂಬಂತೆ ಷಡ್ಡ
ಪಂಚಮಭಾವದಿಂದ ೨೨ ಶ್ರುತಿಗಳು ಉಂಟಾಗಿವೆ ಎಂದು ಅಹೋಬಲನು 'ಸಂಗೀತ
ಪಾರಿಜಾತ' ವೆಂಬ ಗ್ರಂಧದಲ್ಲಿ ಹೇಳಿದ್ದಾನೆ. ಒಂದು ರಾಗದಲ್ಲಿ ಬಳಸಲಾಗುವ ಸ್ವರ
ಗಳು ಆ ರಾಗದ ಸ್ವರಸ್ಥಾನ ಅಥವಾ ಅಂತಸ್ಥನ್ನು ಹೊಂದುತ್ತವೆ
ಮಿಕ್ಕ ಶ್ರುತಿಗಳು
ಶ್ರುತಿಗಳಾಗಿಯೇ ಉಳಿಯುತ್ತವೆ. ಸಪ್ತ ಸ್ವರಗಳ ಮಧ್ಯೆ ಇರುವ ಶ್ರುತಿ ಅಂತರಗಳು
ಈ ರೀತಿ ಇವೆ ಒಂದು ಸ್ಥಾಯಿ, ಒಂದು ಪಂಚಮ, ಶುದ್ಧ ಮಧ್ಯಮ, ಅಂತರ
ಗಾಂಧಾರ, ಸಾಧಾರಣ ಗಾಂಧಾರ ಇತ್ಯಾದಿ. ೮ ರಿಂದ ೯ ರವರೆಗೆ ಚತುಶ್ರುತಿಯೂ,
೯ ರಿಂದ ೧೦ ರವರೆಗೆ ತ್ರಿಶ್ರುತಿಯ, ೧೫ ರಿಂದ ೧೬ ರವರೆಗೆ ದ್ವಿಶ್ರುತಿಯೂ ಇರು
ಇವೆ. ಇತರ ಶ್ರುತಿಗಳು ಶಾಸ್ತ್ರಜ್ಞಾನದ ದೃಷ್ಟಿಯಿಂದ ಮುಖ್ಯವಾದುವೇ ವಿನಾ
ಪ್ರಾಯೋಗಿಕ ಸಂಗೀತದ ದೃಷ್ಟಿಯಿಂದ ಅಷ್ಟಾಗಿ ಮುಖ್ಯವಲ್ಲ.
ದಿಕ್
ದಿಕ್ ಎಂದರೆ ದಿಶಿ ಎಂದರ್ಥ. ೧೦ ಭೂತಸಂಖ್ಯೆಯನ್ನು ಸೂಚಿಸಲು
ದಿಕ್ ಎಂಬ ಪದವನ್ನು ಬಳಸಲಾಗಿದೆ. ೨ನೆ ಮೇಳಕರ್ತ ಪದ್ಧತಿಯಲ್ಲಿ ಇದು ೧೦
ನೆಯ ಚಕ್ರವನ್ನು ಸೂಚಿಸುತ್ತದೆ.
ದಿಗ್ವಿಜಯ
ರಾಗತಾಳಚಿಂತಾಮಣಿ ಎಂಬ ತೆಲುಗು ಗ್ರಂಥದಲ್ಲಿ (೧೭ನೆ ಶ)
ಹೇಳಿರುವ ೧೨೪ ತಾಳಗಳಲ್ಲಿ ಇದೊಂದು ಬಗೆಯ ತಾಳ
ದಿಗುಜಾರು
ಅವರೋಹಣ ಕ್ರಮದ ಜಾರು. ಇದು ಉಲ್ಲಸಿತ ಗಮಕ,
ಒಂದು ಸ್ವರಸ್ಥಾನದಿಂದ ಮತ್ತೊಂದು ಸ್ವರಸ್ಥಾನದ ಮಧ್ಯೆ ಇರುವ ಸ್ವರಕ್ಕೆ
ಪ್ರಾಮುಖ್ಯತೆ ಕೊಡದೆ ಜಾರುವುದಕ್ಕೆ ದಿಗುಜಾರು ಎಂದು ಹೆಸರು.
ದಿನಕರಕಾಂತಿ
ಈ ರಾಗವು ೨೭ನೆ ಮೇಳಕರ್ತ ಸರಸಾಂಗಿಯ ಒಂದು
ಜನ್ಯರಾಗ,
34