2023-07-06 06:10:40 by jayusudindra
This page has been fully proofread once and needs a second look.
ಪಾಲ್ಕುರಿಕೆ
6
ಸೋಮ
೨೨ ಬಗೆಯ ಗಮಕಗಳನ್ನು
ಸೋಮನಾದನು ತನ್ನ " ಪಂಡಿತಾರಾಧ್ಯ ಚರಿತ್ರೆ'ಯಲ್ಲಿ (೧೪ನೆ ಶ ) ಹೇಳಿದ್ದಾನೆ.
ಇತರ ಎಲ್ಲಾ ಲಾಕ್ಷಣಿಕರಿಗಿಂತ ಸೋಮನಾಧನು ಹೇಳಿರುವುದು ಹೆಚ್ಚು ಸಂಖ್ಯೆಯ
ಗಮಕಗಳು. ಇತರರು ೭, ೧೦, ೧೫, ೧೯ ಗಮಕಗಳನ್ನು ಹೇಳಿದ್ದಾರೆ
ನಾಥನು ಹೇಳಿರುವ ಗಮಕಗಳಲ್ಲಿ ಕೆಲವು ಹೊಸದು. ಇವುಗಳನ್ನು
ಹಿಂದಿನವರಾಗಲೀ ನಂತರದವರಾಗಲೀ ಹೇಳಿಲ್ಲ. ದ್ವಾವಿಂಶತಿ ಗಮಕಗಳ ಯಾವು
ವೆಂದರೆ-ಅಕ್ಷಿಪ್ತ, ಅಹಿತ, ಅದೀರ್ಘ, ಉಚ್ಛರಿತ, ಉಲ್ಲಸಿತ, ಉಲ್ಲಾಸಿತ, ಕರಸ್ಥಿತ,
ಕುಂಚಿತ, ಕೋಮಲ, ಗುಂಫಿತ, ದೀರ್ಘ, ದೀರ್ಘಕಂಪಿತ, ದೀರ್ಘಕ, ದೀರ್ಘಲ್ಲ
ಸಿತ, ಪ್ರಸ್ತುತ, ಭ್ರಮಿತ, ಮೂರ್ಧಿ, ಕ್ಷಿಪ್ತ, ಲಲಿತ, ಲಲಿತೋತ್ತಮ, ಸಮೋಲ್ಲಸಿತ
ಮತ್ತು ಸೂಕ್ಷಾಂತರ.
ಆತಿ
ದ್ವಾವಿಂಶತಿ ಶ್ರುತಿಗಳು
ಭಾರತೀಯ ಸಂಗೀತ ಪದ್ಧತಿಯಲ್ಲಿ ಅನಾದಿಕಾಲ
ದಿಂದ ೧೨ ಸ್ವರಗಳಿಗೆ ನಿಯಮಿತವಾದ ೨೨ ಶ್ರುತಿಗಳ ಬಳಕೆ ರೂಢಿಯಲ್ಲಿದೆ.
ಪ್ರಾಚೀನ ಗ್ರಂಧಗಳಲ್ಲಿ ೨೨ ಶ್ರುತಿಗಳು ರಾಗಗಳ ಸಂಚಾರಗಳಿಗೆ ಆಧಾರವಾಗಿದೆ.
ಭರತ ಮತ್ತು ಶಾರ್ಙ್ಗದೇವ ತಮ್ಮ ಗ್ರಂಥಗಳಲ್ಲಿ ೨೨ ಶ್ರುತಿಗಳ ಹೆಸರನ್ನು ಈ
ಕೊಟ್ಟಿದ್ದಾರೆ
ತೀವ್ರ, ಕುಮುದ್ವತಿ, ಮಂದಾ, ಛಂದೋವತಿ, ದಯಾವತಿ, ರಂಜನಿ,
ರತಿಕಾ, ರೌದ್ರಿ, ಕ್ರೋಧಾ, ವಕಾ, ಪ್ರಸಾರಿಣಿ, ಪ್ರೀತಿ, ಮಾರ್ಜನೀ, ಕ್ಷಿತಿ,
ರಕ್ತಾ, ಸಾಂದೀಪಿನಿ, ಆಲಾಪಿನಿ, ಮದಂತಿ, ರೋಹಿಣಿ, ರವಾ, ಉಗ್ರಾ ಮತ್ತು
ಕೊಭಿಣಿ.
ಕೆಳಗಡೆ ಗೆರೆ ಹಾಕಿರುವುವು ಸಪ್ತಸ್ವರಗಳ ನಿಯತ ಶ್ರುತಿಗಳು ಮತ್ತು ಈ ಸಪ್ತ
ಸ್ವರಗಳು ಪುರಾತನ ಕಾಲದ ಷಡ್ಡ ಗ್ರಾಮದ ಸ್ವರಗಳು
ದ್ವಾವಿಂಶತಿ ಶ್ರುತಿಗಳ ಆಧುನಿಕ ಹೆಸರು ಮತ್ತು ಅಂತರ ಈ ರೀತಿ ಇವೆ
ಷಡ್ಡ
ದ್ವಿಶ್ರುತಿ ರಿಷಭ
೫೨೭
ತ್ರಿಶ್ರುತಿ ರಿಷಭ
ಚತುಶ್ರುತಿ ರಿಷಭ
ಕೋಮಲ ಗಾಂಧಾರ
ಸಾಧಾರಣ ಗಾಂಧಾರ
ಅಂತರ ಗಾಂಧಾರ
ತೀವ್ರ ಅಂತರ ಗಾಂಧಾರ
೨೫೬/೨೪೩
೧೬/೧೫
೧೦/೯
೯/೮
೩೨/೨೭
೬/೫
೫/೪
೮೧/೬೪