This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ತ್ಯಾಗರಾಜರು
 
ಸೂಚಿಸಿರುವುದಕ್ಕೆ ಲಕ್ಷಣಗ್ರಂಧಮುದ್ರೆ ಎಂದು ಹೆಸರು.

ಶಂಕರಾಭರಣ ರಾಗದ 'ಸ್ವರರಾಗ ಸುಧಾ' ಎಂಬ ಕೃತಿಯಲ್ಲಿ 'ಸ್ವರಾರ್ಣವ' ಎಂಬ

ಗ್ರಂಥದ ಹೆಸರನ್ನು ಬಳಸಿರುವುದು ಇದಕ್ಕೆ ನಿದರ್ಶನ
 

ಇತರ ಮುದ್ರೆಗಳು ಮೇಲಿನ ಮುದ್ರೆಗಳಲ್ಲದೆ ಸಂವತ್ಸರ ಮುದ್ರೆ

ಗಳನ್ನು ಬಳಸಿರುವುದು ಕಂಡುಬರುತ್ತದೆ. ತಮಿಳಿನ ಶರಭೇಂದ್ರ ಭೂಪಾಲ

ಕುರವಂಜಿ ನಾಟಕಂ' ಎಂಬ ನೃತ್ಯ ರೂಪಕದಲ್ಲಿ ಶರಭೋಜಿ ಮಹಾರಾಜರ ಜೀವಿತ

ಕಾಲದ ಮುಖ್ಯವಾದ ಕೆಲವು ಸಂವತ್ಸರಗಳ ಹೆಸರುಗಳನ್ನು ಚಮತ್ಕಾರವಾಗಿ

ಕೆಲವು ರಚನೆಗಳಲ್ಲಿ ಅವುಗಳ ಛಂದಸ್ಸಿನ ಹೆಸರನ್ನು ಸೂಚಿಸಲಾಗಿದೆ.

ಇದಕ್ಕೆ ಛಂದಸ್ಸು ಮುದ್ರೆ ಎಂದು ಹೆಸರು. ಇವುಗಳಲ್ಲದೆ ನವವಿಧ ಭಕ್ತಿಗಳ

ಹೆಸರಿನ ಮುದ್ರೆ, ಚಕ್ರಮುದ್ರೆ ಮುಂತಾದುವುಗಳನ್ನು ಬಳಸಿರುವುದುಂಟು.
 
ಬಳಸಲಾಗಿದೆ.
 
೫೨೬
 

ದ್ವಾದಶ ಮುದ್ರೆಗಳಲ್ಲಿ ವಾಗ್ಗೇಯಕಾರರ ಮುದ್ರೆಯು ಬಹು ಮುಖ್ಯವಾದುದು.

ಇವು ಸಾಮಾನ್ಯವಾಗಿ ಕೃತಿಯ ಚರಣಗಳಲ್ಲಿ ಇಲ್ಲವೇ ಪಲ್ಲವಿ ಅಥವಾ ಅನುಪಲ್ಲವಿ

ಯಲ್ಲಿ ಕಂಡುಬರುತ್ತದೆ ಹಲವು ಚರಣಗಳಿರುವ ಕೃತಿಗಳ ಅಭೋಗಚರಣ ಅಧವಾ

ಕೊನೆಯ ಚರಣದಲ್ಲಿ ವಾಗ್ಗೇಯಕಾರ ಮುದ್ರೆ ಇರುತ್ತದೆ. ಇದಕ್ಕೆ ಮುದ್ರಾಚರಣ
 
ಎಂದು ಹೆಸರು.
 

 
ದ್ವಾದಶ ಸ್ವರಸ್ಥಾನಗಳು
ಸ್ವರಸಪ್ತಕದಲ್ಲಿರುವ
ಹನ್ನೆರಡು ಸ್ವರಸ್ಥಾನ
 
ಗಳು
 
ದ್ವಾದಶ ಸ್ವರಸ್ಥಾನಗಳು-ಸ್ವರಸಪ್ತಕದಲ್ಲಿರುವ
 

 
ದ್ವಾರಂ ಮಂಗತಾಯರ್ (೧೯೩೫)-
ದ್ವಾರಂ ಮಂಗತಾಯರ್

ರವರು ದಕ್ಷಿಣ ಭಾರತದ ಪಿಟೀಲುವಾದ್ಯಗಾರರಾಗಿರುವ ಕೆಲವೇ ಕಲಾವಿದೆಯರಲ್ಲಿ

ಒಬ್ಬರಾಗಿದ್ದಾರೆ. ಇವರು ಸಂಗೀತ ಕಲಾನಿಧಿ ಡಾ॥ ದ್ವಾರಂ ವೆಂಕಟಸ್ವಾಮಿಯವರ

ಪುತ್ರಿಯಾಗಿ ಆಂಧ್ರ ಪ್ರದೇಶದ ವಿಜಯನಗರಂನಲ್ಲಿ ಜನಿಸಿ ತಂದೆಯ ನೆರಳಿನಲ್ಲಿ

ಬೆಳೆದು ಬಂದರು. ತಂದೆಯವರಲ್ಲಿ ಮೆಟ್ರಿಕ್ಯುಲೇಷನ್ ತರಗತಿಯಲ್ಲಿ ಓದುತ್ತಿದ್ದಾಗಲೇ

ಪಿಟೀಲು ವಾದನವನ್ನು ಕಲಿಯಲು ಆರಂಭಿಸಿದರು. ೧೯೫೧ ವಿಜಯನಗರಂ

ಸಂಗೀತದ ಕಾಲೇಜಿನಲ್ಲಿ ಡಿಪ್ಲೊ ಮಾವನ್ನು ಪಡೆದು, ನಂತರ ಭಾರತ ಸರ್ಕಾರದ

ವಿದ್ಯಾರ್ಥಿ ವೇತನವನ್ನು ಪಡೆದು ೧೯೬೦ ರಿಂದ ೧೯೬೩ರ ವರೆಗೆ ಮದ್ರಾಸಿನ

ಕೇಂದ್ರ ಕರ್ಣಾಟಕ ಸಂಗೀತದ ಕಾಲೇಜಿನಲ್ಲಿ ವರಹೂರು ಮುತ್ತುಸ್ವಾಮಿ ಅಯ್ಯರ್

ರವರಲ್ಲಿ ಪ್ರೌಢ ಶಿಕ್ಷಣವನ್ನು ಪಡೆದರು. ತಂದೆಯವರ ಸಂಗಡ ಅನೇಕ ಕಚೇರಿಗಳಲ್ಲಿ

ನುಡಿಸಿದರು ಮತ್ತು ಬಿ. ಆರ್. ಮಹಾಲಿಂಗಂರವರ ಅನೇಕ ಕಚೇರಿಗಳಿಗೆ

ನುಡಿಸಿದರು. ಖ್ಯಾತಿಪಂತರಾದರು

ತಂದೆಯವರ ಮರಣಾನಂತರ ಕೆಲವು ಕಾಲ
 

ವಿಜಯನಗರದ ಸಂಗೀತದ ಕಾಲೇಜಿನಲ್ಲಿ ಅಧ್ಯಾಪಕಿಯಾಗಿದ್ದು ಈಗ ವಿಜಯವಾಡದ

ಬಾನುಲಿ ಕೇಂದ್ರದ ಕಲಾವಿದೆಯಾಗಿದ್ದಾರೆ. ಇವರ ನುಡಿಕೆಯಲ್ಲಿ ನಾದ

ಮಾಧುರ್ಯ ಅದ್ಭುತವಾದುದು.