2023-07-06 06:07:21 by jayusudindra
This page has been fully proofread once and needs a second look.
ಅಥವಾ ಚರಣದಲ್ಲಿ ಬರುತ್ತವೆ.
೫೨೪
೩. ತಾಳಮುದ್ರೆ-ಕೃತಿಯ ಸಾಹಿತ್ಯದಲ್ಲಿ ತಾಳದ ಹೆಸರನ್ನು ಸೂಚಿಸಿರು
ವುದು ತಾಳಮುದ್ರೆ, ಇವು ತಾಳಮಾಲಿಕೆಗಳಲ್ಲಿ ಅಗತ್ಯವಾಗಿ ಇರಬೇಕಾದ ಅಂಗ,
ರಾಗತಾಳಮಾಲಿಕೆಗಳಲ್ಲಿಯೂ ಸಹ ತಾಳಮುದ್ರೆಗಳಿವೆ ವೈದಾಲ ಗುರುಮೂರ್ತಿ
ಶಾಸ್ತ್ರಿಗಳ ಸಪ್ತತಾಳ ಕೃತಿಗಳು ಮತ್ತು ರಾಮಸ್ವಾಮಿ ದೀಕ್ಷಿತರ ಅಷ್ಟೋತ್ತರ ಶತರಾಗ
ತಾಳ ಮಾಲಿಕೆಯಲ್ಲಿ ತಾಳಮುದ್ರೆಗಳನ್ನು ಕಾಣಬಹುದು.
೪.
ವಾಗ್ಗೇಯಕಾರರು ತಮ್ಮ ರಚನೆಗಳಲ್ಲಿ ತಮ್ಮ
ಗುರುವಿನ ಹೆಸರನ್ನು ಸಾಹಿತ್ಯದಲ್ಲಿ ಸೇರಿಸಿ ಅವರಿಗೆ ಭಕ್ತಿಪೂರ್ವಕವಾಗಿ ಸಮರ್ಪಿಸಿರು
ತ್ತಾರೆ. ವೈದಾಲ ಗುರುಮೂರ್ತಿಶಾಸ್ತ್ರಿಗಳು ಸಪ್ತತಾಳಗೀತದಲ್ಲಿ ಗಾನವಿದ್ಯಾ
ದುರಂಧರ ವೆಂಕಟಸುಬ್ಬಯ್ಯಗುರೋ' ಎಂದು ಅವರ ಗುರುವಿನ ಹೆಸರನ್ನು ಸೂಚಿಸಿ
ದ್ದಾರೆ. ಪೊನ್ನಯ್ಯಪಿಳ್ಳೆ ಯವರು ಮಾಯಾತೀತ ಸ್ವರೂಪಿಣಿ' ಎಂಬ ಕೃತಿಯಲ್ಲಿ
"ಮಾ ಗುರುಗುಹ ನಾಮಿಕಿ ನೀ ದಾಸುಡೈತಿ' ಎಂದು ತಮ್ಮ ಗುರುವಾದ ದೀಕ್ಷಿತರನ್ನು
ಸೂಚಿಸಿದ್ದಾರೆ.
೫. ರಾಜಮುದ್ರೆ-ತಮ್ಮ ಆಶ್ರಯದಾತರೂ ಪೋಷಕರೂ ಆದ ರಾಜರ
ಹೆಸರುಗಳನ್ನು ಕೆಲವು ವಾಗ್ಗೇಯಕಾರರು ಸಾಹಿತ್ಯದೊಡನೆ ಸೇರಿಸಿರುತ್ತಾರೆ. ರಾಜ
ಮುದ್ರೆಯು ರಾಜಾಶ್ರಯವನ್ನೂ, ರಾಜರನ್ನೂ ಪರೋಕ್ಷವಾಗಿ ಸ್ತುತಿಸುವ ಸಂಕೇತ.
ಘನಂ ಶೀನಯ್ಯನವರ ಕ್ಷೇತ್ರಜ್ಞರ ಪದಗಳು, ಮುತ್ತು ಸ್ವಾಮಿ ದೀಕ್ಷಿತರ ಚತುರ್ದಶ
ರಾಗಮಾಲಿಕೆ, ಪಲ್ಲವಿ ಗೋಪಾಲ' ಅಯ್ಯರ್‌ರವರ ವರ್ಣ, ವೀಣೆ ಶೇಷಣ್ಣನವರ
ತಿಲ್ದಾಣ ಮುಂತಾದುವುಗಳಲ್ಲಿ ರಾಜಮುದ್ರೆಯನ್ನು ಬಳಸಿರುವುದನ್ನು ಕಾಣಬಹುದು.
ರಾಮಸ್ವಾಮಿ ದೀಕ್ಷಿತರ ಕೃತಿಗಳಲ್ಲಿ ಕಂಡುಬರುವ ವೆಂಕಟಕೃಷ್ಣ' ಎಂಬ ಅಂಕಿತವು
ಪಲ್ಲವಿ ಗೋಪಾಲಯ್ಯರ್ ಕನಕಾಂಗಿ ಎಂಬ ತಾನವರ್ಣದಲ್ಲಿ
ಶರಭೋಜಿ ಮಹಾರಾಜರ ಹೆಸರನ್ನೂ, ಮೈಸೂರು ಸದಾಶಿವರಾಯರು ' ಏ ಮಗುವ
ಬೋಧಿಂ ಚರ' ಎಂಬ ಪದ ವರ್ಣದಲ್ಲಿ ಕೃಷ್ಣರಾಜ ಒಡೆಯರ ಹೆಸರನ್ನೂ, ವೀಣೆ
ಶೇಷಣ್ಣನವರು ತಮ್ಮ ತಿಲ್ಲಾನ ಒಂದರಲ್ಲಿ ಶ್ರೀಕೃಷ್ಣರಾಜೇಂದ್ರ' ಎಂಬ ಹೆಸರನ್ನೂ
ರಾಮನಾಡ್ ಶ್ರೀನಿವಾಸ ಅಯ್ಯಂಗಾರರು ತಮ್ಮ ತಿಲ್ಲಾನ ಒಂದರಲ್ಲಿ ಶ್ರೀಚಾಮ
ರಾಜೇಂದ್ರ' ಎಂಬ ಹೆಸರನ್ನೂ ಬಳಸಿದ್ದಾರೆ.
೬.
ವಂಶಮುದ್ರೆ-ವಾಗ್ಗೇಯಕಾರರು ತಮ್ಮ ಗೋತ್ರ, ವಂಶ, ತಂದೆ
ತಾಯಿಯ ಹೆಸರನ್ನು ತಮ್ಮ ರಚನೆಗಳಲ್ಲಿ ಸೂಚಿಸಿರುತ್ತಾರೆ. ವಾಲಾಜಪೇಟೆ
ವೆಂಕಟರಮಣ ಭಾಗವತರು ತ್ಯಾಗರಾಜರನ್ನು ಕುರಿತು ರಚಿಸಿರುವ ಮಂಗಳಾಷ್ಟಕದಲ್ಲಿ
ತಮ್ಮ ಗುರುವಿನ ವಂಶವನ್ನು 'ಕಾಕರ್ಲವಂಶ' ವೆಂದು ಸೂಚಿಸಿದ್ದಾರೆ.
ರಾಗದ 'ಗಿರಿರಾಜಸುತ' ಎಂಬ ಕೃತಿಯಲ್ಲಿ ತ್ಯಾಗರಾಜರು ತಾವು ಗಿರಿರಾಜ ಕವಿಯ