2023-07-06 06:06:33 by jayusudindra
This page has been fully proofread once and needs a second look.
ಗುರುವಿನ ಹೆಸರು ಇವುಗಳಲ್ಲಿ ಯಾವುದಾದರೂ ಒಂದನ್ನು ಕೃತಿಯ ಸಾಹಿತ್ಯದಲ್ಲಿ
ಚಮತ್ಕಾರವಾಗಿ ಅರ್ಥಭಾವಪೂರ್ಣವಾಗಿ ಸೇರಿಸಿರುತ್ತಾನೆ. ಮುದ್ರೆಯನ್ನು ಸೇರಿಸಲೇ
ಬೇಕೆಂಬ ನಿಯಮವಿಲ್ಲ. ಮುದ್ರೆಗಳ ಬಳಕೆಯು ಮಹಾಕಾವ್ಯಗಳ ಕಾಲದಿಂದಲೂ
ರೂಢಿಯಲ್ಲಿದೆ. ಭಗವದ್ಗೀತೆಯ ಪ್ರತಿ ಅಧ್ಯಾಯದ ಸಮಾಪ್ತಿಯಲ್ಲಿ ಆ ಅಧ್ಯಾಯದ
ವಿಷಯಸೂಚಕವಾದ ಮುದ್ರೆಯಿದೆ. ಜಯದೇವನ ಗೀತಗೋವಿಂದ, ನಾರಾಯಣ
ತೀರ್ಥರ ಕೃಷ್ಣಲೀಲಾತರಂಗಿಣಿ ಮುಂತಾದುವಲ್ಲಿ ಕಾವ್ಯನಾಮಗಳನ್ನು ಮುದ್ರೆಗಳಾಗಿ
ಬಳಸಲಾಗಿದೆ ಮುದ್ರೆಗಳಿಂದ ವಾಗ್ಗೇಯಕಾರನ ಹೆಸರು, ಪೋಷಕನಾಗಿದ್ದ ರಾಜನ
ಹೆಸರು, ಕೃತಿಯ ರಾಗದ ಹೆಸರು ಮುಂತಾದುವನ್ನು ತಿಳಿಯಬಹುದು. ಮುದ್ರೆ
ಗಳನ್ನು ಹನ್ನೆರಡು ಭಾಗಗಳಾಗಿ ವಿಂಗಡಿಸಬಹುದು.
೧. ವಾಗ್ಗೇಯಕಾರ ಮುದ್ರೆ- ವಾಗ್ಗೇಯಕಾರನು ತನ್ನ ಹೆಸರನ್ನು
ಕೃತಿಯಲ್ಲಿ ಮುದ್ರೆಯನ್ನಾಗಿ ಬಳಸಿರುತ್ತಾನೆ
ಇದು ಎರಡು ವಿಧ.
(೩) ನಾನಮುದ್ರೆ-ತ್ಯಾಗರಾಜ, ಜಯದೇವ, ನಾರಾಯಣತೀರ್ಥ,
ಶ್ಯಾಮಾಶಾಸ್ತ್ರಿ, ರಾಮನಾಡ್, ಶ್ರೀನಿವಾಸ ಅಯ್ಯಂಗಾರ್, ಮೈಸೂರುವಾಸುದೇವಾ
ಚಾರ, ಮೈಸೂರು ಸದಾಶಿವರಾಯರು ಮತ್ತು ಇತ್ತೀಚಿನ ಕೆಲವು ವಾಗ್ಗೇಯಕಾರರು
ತಮ್ಮ ನಾಮಧೇಯಗಳನ್ನು ಅಂಕಿತವನ್ನಾಗಿ ಬಳಸಿದ್ದಾರೆ.
ತಮ್ಮ
(b) ಇತರನಾಮಮುದ್ರೆ-ನಾಗ್ಗೇಯಕಾರರು
ಹೆಸರನ್ನೋ, ಪೋಷಕರ ಹೆಸರನ್ನೋ, ತಮ್ಮ ಹೆಸರಿನ ಒಂದು ಪರ್ಯಾಯ
ನಾಮವನ್ನೂ ಅಂಕಿತವಾಗಿ ಬಳಸಿದ್ದಾರೆ. ಮತ್ತು ಸ್ವಾಮಿದೀಕ್ಷಿತರು ' ಗುರುಗುಹ
ಎಂಬ ಅಂಕಿತವನ್ನೂ, ಸುಬ್ಬರಾಯ ಶಾಸ್ತ್ರಿಗಳು 'ಕುಮಾರ' ಎಂಬ ಅಂಕಿತವನ್ನೂ,
ಪಟ್ಟಂ ಸುಬ್ರಹ್ಮಣ್ಯ ಅಯ್ಯರ್ ವೆಂಕಟೇಶ ಎಂಬ ಅಂಕಿತವನ್ನು ಬಳಸಿರುವುದು ಇದಕ್ಕೆ
ರಾಗಮುದ್ರೆ-ಕೃತಿಗಳ ರಾಗಗಳ ಹೆಸರು ಅನೇಕ ರಚನೆಗಳಲ್ಲಿ ಕಂಡು
ಕೆಲವು ವೇಳೆ ರಾಗಮಾಲಿಕೆಗಳಲ್ಲಿರುವಂತೆ ರಾಗಗಳ ಹೆಸರುಗಳನ್ನು
ಉದ್ದೇಶಪೂರ್ವಕವಾಗಿ ಸಾಹಿತ್ಯದಲ್ಲಿ ಸೇರಿಸಿರುವುದುಂಟು. ರಾಗ ತಾಳ
ಮಾಲಿಕೆಗಳು ಮತ್ತು ಲಕ್ಷಣ ಗೀತೆಗಳಲ್ಲಿ ಮತ್ತು ರಾಗಮಾಲಿಕೆಗಳಲ್ಲಿ ರಾಗ ಮುದ್ರೆಗಳು
ಕಡ್ಡಾಯವಾದ ಅಂಗ. ಮತ್ತು ಸ್ವಾಮಿ ದೀಕ್ಷಿತರ ಕೃತಿಗಳಲ್ಲ,
ಜಿ. ಎನ್. ಬಿ ರವರ ಕೆಲವು ಕೃತಿಗಳಲ್ಲಿ ಮಹಾವೈದ್ಯನಾಥ ಅಯ್ಯರ್‌ರವರ
ಬಹತ್ತರ ಮೇಳರಾಗ ಮಾಲಿಕಾ ಮತ್ತು ಕೋಟೀಶ್ವರ ಅಯ್ಯರ್‌ರವರ ೭೨ ರಾಗಗಳ
ರಾಗ ಮಾಲಿಕೆಯಲ್ಲಿ ೭೨ ರಾಗಗಳ ಹೆಸರುಗಳು ಬಂದಿರುವುದು ರಾಗ ಮುದ್ರೆಗೆ
ಇವು ಕೃತಿಯ ಸಾಹಿತ್ಯದೊಡನೆ ಅರ್ಧಭಾವಕ್ಕನುಗುಣವಾಗಿ
ಕೆಲವು ರಾಗಗಳ ಹೆಸರುಗಳನ್ನು ಸೂಚಿಸುವುದನ್ನು ಮತ್ತು ಸ್ವಾಮಿ ದೀಕ್ಷಿತರ ಹಲವು