This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ದ್ರಾವಿಡಗುರ್ಜರಿ ಪಾರ್ಶ್ವದೇವನ ಸಂಗೀತ ಸಮಯಸಾರವೆಂಬ ಗ್ರಂಥದಲ್ಲಿ
ಉಕ್ತವಾಗಿರುವ ಉಪಾಂಗ ಸಂಪೂರ್ಣರಾಗಗಳಲ್ಲಿ ಒಂದು ರಾಗ ಸಂಗೀತರತ್ನಾಕರ
ವೆಂಬ ಗ್ರಂಥದಲ್ಲಿ ಇದು ಉಕ್ತವಾಗಿದೆ
 
ದ್ರಾವಿಡ ಶಿಶು- ಆದಿಶಂಕರಾಚಾರ್ಯರು ತಮ ಸೌಂದರ್ಯಲಹರಿಯ
೭೫ನೆ ಶ್ಲೋಕದಲ್ಲಿ ಸೂಚಿಸಿರುವ ದ್ರವಿಡಶಿಶು ಯಾರೆಂಬುದನ್ನು ಕುರಿತು ವಿದ್ವಾಂಸ
ರಲ್ಲಿ ಭಿನ್ನಾಭಿಪ್ರಾಯಗಳಿವೆ. ಕೆಲವು ವ್ಯಾಖ್ಯಾನಕಾರರ ಪ್ರಕಾರ ಇದು ಶಂಕರ
ಭಗವತ್ಪಾದರನ್ನೇ ಸೂಚಿಸುತ್ತದೆ ಇತರರ ಪ್ರಕಾರ ಇದು ತಿರುಜ್ಞಾನಸಂಬಂಧರ್
ರನ್ನು ಸೂಚಿಸುತ್ತದೆ ಇವರು ನಾಲ್ಕು ಪ್ರಸಿದ್ಧ ತಮಿಳು ಶೈವನಾಯನಾರರಲ್ಲಿ
ಒಬ್ಬರು. ಅಪ್ಪರ್, ಸುಂದರಮೂರ್ತಿ ಮತ್ತು ಮಾಣಿಕ್ಯ ವಾಚಕರ್ ಇತರ ಮೂವರು
ನಾಯನಾರರು. ಇವರೆಲ್ಲರ ಭಕ್ತಿಗೀತೆಗಳಿಗೆ ತೇವಾರಂ ಎಂದು ಹೆಸರು
ಸಂಬಂಧರ್‌ರವರು ಆದಿಶಂಕರಾಚಾರ್ಯರ ಸಮಕಾಲೀನರಾಗಿದ್ದರೆಂದು ಹೇಳಬಹುದು.
ದ್ರಾವಿಡಗೌಡ-ಪಾರ್ಶ್ವದೇವನ ಸಂಗೀತ ಸಮಯಸಾರವೆಂಬ ಗ್ರಂಥದಲ್ಲಿ
ಉಕ್ತವಾಗಿರುವ ಉಪಾಂಗ ಸಂಪೂರ್ಣರಾಗಗಳಲ್ಲಿ ಒಂದು ರಾಗ, ಸಂಗೀತರತ್ನಾಕರ
ಮತ್ತು ಸಂಗೀತಸುಧಾ ಎಂಬ ಗ್ರಂಧಗಳಲ್ಲೂ ಉಕ್ತವಾಗಿದೆ. ಇದು ಮಾಯಾ
ಮಾಳವಗೌಳ ರಾಗವನ್ನು ಹೋಲುತ್ತದೆ.
ದ್ರಾವಿಡಪದ
ದ್ರಾವಿಡವರಾಳಿ
 
ತಮಿಳು ಭಾಷೆಯಲ್ಲಿರುವ ಒಂದು ಪದ.
ಪಾರ್ಶ್ವದೇವನ ಸಂಗೀತಸಮಯಸಾರವೆಂಬ ಗ್ರಂಥದಲ್ಲಿ
ಉಕ್ತವಾಗಿರುವ ಉಪಾಂಗ ಸಂಪೂರ್ಣ ರಾಗಗಳಲ್ಲಿ ಒಂದು ರಾಗ,
 
ದ್ರಾವಿಡ ಸಂಗೀತ-ಪುರಾತನ ಕಾಲದಲ್ಲಿ ತಮಿಳು ದೇಶದಲ್ಲಿ ಪ್ರಚಲಿತ
ವಾಗಿದ್ದ ಸಂಗೀತ ಪದ್ಧತಿಗೆ ದ್ರಾವಿಡ ಸಂಗೀತವೆಂದು ಹೆಸರು. ಈ ಪದ್ಧತಿಯ ಶುದ್ಧ
ಮೇಳವು ಈಗಿನ ಹರಿಕಾಂಭೋಜಿರಾಗವಾಗಿದೆ. ಪುರಾತನ ತಮಿಳರಿಗೆ ಹಲವು ಮೇಳ
ಗಳು ಮತ್ತು ಜನ್ಯರಾಗಗಳು ತಿಳಿದಿತ್ತು. ಗ್ರಹಭೇದದಿಂದ ನೂತನ ರಾಗಗಳನ್ನು
ಸೃಷ್ಟಿಸುವುದನ್ನು ತಿಳಿದಿದ್ದರು. ಸಪ್ತ ಸ್ವರಗಳಿಗೆ ಕುರಳ್, ತುಟ್ಟಂ, ಕೈಕ್ಕಿಟ್ಟಿ
ಉಳ್ಳೆ, ಇಳಿ, ವಿಳರಿ ಮತ್ತು ತಾರಂ ಎಂಬ ಹೆಸರಿದ್ದುವು. ಯಾಳವಾದ್ಯವು
ಕಚೇರಿಯ ಮುಖ್ಯ ವಾದ್ಯವಾಗಿತ್ತು.
ಕೊಳಲು ಮತ್ತು ಮೃದಂಗವು ಪಕ್ಕವಾದ್ಯ
ಗಳಾಗಿದ್ದುವು. ಅವರ ಉತ್ತಮ ಸಂಗೀತಜ್ಞಾನದ ವಿಚಾರವಾಗಿ ಪುರಾತನ ತಮಿಳು
ಸಾಹಿತ್ಯದಲ್ಲಿ ಹಲವು ಆಧಾರಗಳಿವೆ. ಆಗಿನ ಸಂಗೀತದ ಉತ್ತಮಾಂಶಗಳು ಈಗಿನ
ಸಂಗೀತ ಪದ್ಧತಿಯಲ್ಲಿ ಸೇರಿಹೋಗಿವೆ.
 
ದ್ರಾವಿಡಿ-ಸಂಗೀತ ರತ್ನಾಕರವೆಂಬ ಗ್ರಂಥದಲ್ಲಿ ಉಕ್ತವಾಗಿರುವ ಒಂದು
 
ದ್ರಾವಿಡಿಭಾಷಾ-ಸಂಗೀತರತ್ನಾಕರವೆಂಬ ಗ್ರಂಥದಲ್ಲಿ ಉಕ್ತವಾಗಿರುವ
 
ರಾಗ,
 
೫೧
 
ಒಂದು ರಾಗ.