2023-07-06 06:01:05 by jayusudindra
This page has been fully proofread once and needs a second look.
ಆಲಾಪನೆಯನ್ನು ಬಹಳ ಸೊಗಸಾಗಿ ನುಡಿಸಿ ತ್ಯಾಗರಾಜರ ದಾರಿನಿ ತೆಲುಸು
ಕೊಂಟಿ ಎಂಬ ಕೃತಿಯನ್ನು ಹೃದಯಂಗಮವಾಗಿ ನುಡಿಸಿದರು. ಅಲ್ಲಿ ಸೇರಿದ್ದ
ಸಾವಿರಾರು ಜನರು ಆ ದಿವ್ಯವಾದ ಸಂಗೀತದಿಂದ ಮಹದಾನಂದ ಹೊಂದಿದರು.
ರಾತ್ರಿಯ ನೀರವತೆಯು ಸಂಗೀತಕ್ಕೆ ವಿಶೇಷ ಮೆರುಗು ನೀಡಿತು ತಮ್ಮ ಮನೆಯಿಂದ
ತ್ಯಾಗರಾಜರು ಈ ಸಂಗೀತವನ್ನು ಕೇಳಿ ಬಹುವಾಗಿ ಮೆಚ್ಚಿಕೊಂಡು
ದಾಸರಿಯ ಬಳಿ ಹೋಗಿ ತಮ್ಮ ಮೆಚ್ಚಿಗೆಯನ್ನು ವ್ಯಕ್ತಗೊಳಿಸಿದರು ಮಹಾವ್ಯಕ್ತಿ
ಗಳಾದ ತ್ಯಾಗರಾಜರ ನೇರಪ್ರಶಂಸೆಯಿಂದ ದಾಸರಿಯ ಹೃದಯ ತುಂಬಿ ಬಂದು
ಈ ಘಟನೆ ನಡೆದಾಗ ತ್ಯಾಗರಾಜರಿಗೆ ಎಪ್ಪತ್ತು
ನೇರವಾಗಿ
ಅವರ ಆಶೀರ್ವಾದ ಬೇಡಿದರು
೫೨೦
ವರ್ಷಗಳಿಗಿಂತ ಹೆಚ್ಚು ವಯಸ್ಸಾಗಿತ್ತು.
(೨) ದಾಸಯ್ಯ ಎಂದು ಕರೆಯಲ್ಪಡಲಾಗುವವರು ವಿಷ್ಣು ಭಕ್ತರು. ತಲೆಗೆ
ಸುತ್ತಿದ ಶಿಂಬಿ ಅಥವಾ ಪೇಟ, ಶಂಖ, ಜಾಗಟೆ, ಕೈಯಲ್ಲಿ ಉದ್ದವಾಗಿರುವ ಕಬ್ಬಿಣದ
ದೀಪ, ಹೆಗಲಿಗೆ ತಾಮ್ರ ಅಥವಾ ಹಿತ್ತಾಳೆಯ ಭವನಾಶಿ, ಹಣೆಯಲ್ಲಿ ನಾಮ ಇವು
ದಾಸಯ್ಯನ ಲಕ್ಷಣಗಳು ಇವರು ಕತ್ತಿನಲ್ಲಿ ಹನುಮಂತನ ಚಿಕ್ಕ ಪ್ರತಿಮೆ
ಯೊಂದನ್ನು ಧರಿಸಿರುತ್ತಾರೆ ಕೆಲವು ದಾಸಯ್ಯಗಳು ಹುಲಿಚರ್ಮವನ್ನು ಸುತ್ತಿ
ಕೊಳ್ಳುತ್ತಾರೆ ಹಿಂದೂಗಳಲ್ಲಿ ಕೆಲವು ವರ್ಗದವರು ತಮ್ಮ ಧಾರ್ಮಿಕ ಕರ್ಮಗಳನ್ನು
ನಡೆಸಲು ದಾಸಯ್ಯಗಳನ್ನು ನೇಮಿಸಿಕೊಳ್ಳುತ್ತಾರೆ. ಧನುರ್ಮಾಸದ ಮುಂಜಾನೆ,
ಶನಿವಾರದ ಮುಂಜಾನೆಗಳಲ್ಲಿ ದಾಸಯ್ಯನನ್ನು ಬೀದಿಗಳಲ್ಲಿ ನೋಡಬಹುದು
ಭಕ್ತಿಪದಗಳನ್ನೂ ಅಥವಾ ಕಥಾವಸ್ತುವುಳ್ಳ ಹಾಡುಗಳನ್ನೂ ಹಾಡುತ್ತ
ಹೋಗುತ್ತಾರೆ.
ದಾಸಿ
ಹಿಂದೆ ದೇವಾಲಯಗಳಲ್ಲಿ ದೇವರ ಮುಂದೆ ನೃತ್ಯ ಸೇವೆ ಮಾಡಲು
ಗೊತ್ತು ಮಾಡಲ್ಪಟ್ಟ ದೇವದಾಸಿಯರಿದ್ದರು. ಇವರು ನೃತ್ಯ, ಸಂಗೀತ, ಶುದ್ಧ
ಜೀವನ ಮತ್ತು ಭಕ್ತಿಗೆ ಪ್ರಸಿದ್ಧರಾಗಿದ್ದರು.
ದಾಸಿ ಆಟ
ಭರತನಾಟ್ಯದ ಹೆಸರು.
ದಾಸುಮುಖಿ
ಈ ರಾಗವು ೨೮ನೆ ಮೇಳಕರ್ತ ಹರಿಕಾಂಭೋಜಿಯ ಒಂದು
ಜನ್ಯರಾಗ,
ಆ
ಮ ಗ ಮ ಪ ದ ನಿ ಸ
ಸ ದ ಪ ಮ ಗ ರಿ ಸ
ದ್ರಾವತಿ-
ದ್ರಾವತಿ
ಸಂಗೀತರತ್ನಾಕರವೆಂಬ ಗ್ರಂಥದಲ್ಲಿ ಉಕ್ತವಾಗಿರುವ ಒಂದು ರಾಗ,
ದ್ರಾವಿಡಗಾನ ಸಾರ್ವಭೌಮ
ಇದು ಪ್ರಸಿದ್ಧ ವಾಗ್ಗೇಯಕಾರರಾಗಿದ್ದ
ತಿರುಪತಿಯ ತಾಳ್ಳಪಾಕಂ ಅಣ್ಣಮಾಚಾರರ ಒಂದು ಬಿರುದು.