2023-07-06 05:59:51 by jayusudindra
This page has been fully proofread once and needs a second look.
ದಾಮ
ಈ ರಾಗವು ೫೯ನೆ ಮೇಳಕರ್ತ ಧರ್ಮವತಿಯ
ಒಂದು ಜನ್ಯರಾಗ,
ಸ ರಿ ಗ ಮ ಪ ದ ಸ
ಸ ನಿ ದ ಸ ಮ ಗ ರಿ ಸ
ದಾರಕ ವಸಂತ
ಈ ರಾಗವು ೧೫ನೆ ಮೇಳಕರ್ತ ಮಾಯಾಮಾಳವಗೌಳದ
ಒಂದು ಜನ್ಯರಾಗ.
ಸ ಗ ರಿ ಮ ಪ ನಿ ಸ
ಸ ನಿ ಸ ದ ಮ ಗ ರಿ ಸ
೧೯
ಆ
9 .
ದಾರಾಸುರಂ
ಈ ಸ್ಥಳವು ತಮಿಳುನಾಡಿನ ಕುಂಭಕೋಣದಿಂದ ಎರಡು
ಮೈಲಿ ದೂರದಲ್ಲಿದೆ. ಇಮ್ಮಡಿ ರಾಜರಾಜಚೋಳನು (೧೧೪೬-೧೧೬೩) ನಿರ್ಮಿಸಿದ
ಭವ್ಯವಾದ ದೇವಾಲಯ ಒಂದಿದೆ.
ಇದರ ಮಹಾದ್ವಾರದ ಬಳಿಯಿರುವ ಬಲಿಪೀಠದ
ದಕ್ಷಿಣಕ್ಕೆ ಕೆತ್ತನೆಯಿಂದ ಕೂಡಿದ ಶಿಲೆಯ ಮೆಟ್ಟಿಲುಗಳಿವೆ. ಪ್ರತಿ ಕಲ್ಲನ್ನು ಮುಟ್ಟಿ
ದರೆ ಸಂಗೀತದ ಒಂದೊಂದು ಸ್ವರದ ಶಬ್ದವು ಬರುತ್ತದೆ.
ದಾರಿ-
ದಾರಿ
ಅರಭಟ್ಟನಾವಲರ್ ವಿರಚಿತ 'ನಾಟ್ಟಿ ಯ ಶಾಸ್ತಿರ' ಎಂಬ ತಮಿಳು
ಗ್ರಂಥದಲ್ಲಿ ಉಕ್ತವಾಗಿರುವ ಒಂದು ರಾಗ,
ದಾರುವೀಣಾ
ಮರದಿಂದ ಮಾಡಿರುವ ವೀಣೆ.
ರಾಗ:
ದಾಸಕೂಟ
ವ್ಯಾಸರಾಯಸ್ವಾಮಿಗಳು (೧೪೪೭-೧೫೩೯) ವ್ಯಾಸಕೂಟ
ದಿಂದ ವಿದ್ವಾಂಸವರ್ಗವನ್ನೂ, ದೀಕ್ಷಾ ಬದ್ಧ ಯತಿಗಳ ಗುಂಪನ್ನು ಬೆಳೆಸಿದಂತೆ
ದಾಸಕೂಟದಿಂದ ದೀಕ್ಷಾ ಬದ್ಧ ದಾಸರ ಗುಂಪನ್ನು ಕಟ್ಟಿ ಕನ್ನಡ ಸಾಹಿತ್ಯಕ್ಕೆ,
ಕರ್ಣಾಟಕ ಸಂಗೀತಕ್ಕೆ ಒಂದು ಹೊಸ ತಿರುವು ಕೊಟ್ಟುದಲ್ಲದೆ ಹರಿಭಕ್ತಿ ಮಾರ್ಗ
ವನ್ನೂ, ಲೋಕನೀತಿಯನ್ನೂ ಮನೆಮನೆಗೆ ಮುಟ್ಟುವಂತೆ ಮಾಡಿದರು. ಪುರಂದರ
ದಾಸರು, ಕನಕದಾಸರು ಮುಂತಾದವರೆಲ್ಲರೂ ಈ ಹರಿದಾಸರ ಕೂಟಕ್ಕೆ ಸೇರಿದವರು
ದಾಸರಪದಗಳು
ಕರ್ಣಾಟಕದ ಹರಿದಾಸರಿಂದ ವಿರಚಿತವಾದ ಭಕ್ತಿಗೀತೆ
ಗಳನ್ನು ದಾಸರ ಪದಗಳು, ದೇವರನಾಮಗಳು ಎಂದು ಹೇಳುವ ರೂಢಿಯಿದೆ.
ದಾಸರಾಗ-
ದಾಸರಾಗ
ಬೃಹದ್ಧರ್ಮ ಪುರಾಣದಲ್ಲಿ ಉಕ್ತವಾಗಿರುವ ಒಂದು ವರ್ಗದ
ದಾಸರಿ-
ದಾಸರಿ
ಇವರು ಕರ್ಣಾಟಕ ಸಂಗೀತದ ತ್ರಿಮೂರ್ತಿಗಳಲ್ಲಿ ಒಬ್ಬರಾದ
ಶ್ಯಾಮಾಶಾಸ್ತ್ರಿಗಳ ಶಿಷ್ಯರು. ಇವರು ಶ್ರೇಷ್ಠ ವಿದ್ವಾಂಸರಾಗಿದ್ದು ನಾಗಸ್ವರವನ್ನು
ಅದ್ಭುತವಾಗಿ ನುಡಿಸುತ್ತಿದ್ದರು. ಇವರು ೧೯ನೆ ಶತಮಾನದ ಪ್ರಥಮಾರ್ಧದಲ್ಲಿದ್ದರು.
ಇವರ ಸಂಗೀತವನ್ನು ತ್ಯಾಗರಾಜರು ಬಹಳ ಮೆಚ್ಚಿಕೊಂಡಿದ್ದರು. ಒಂದು ಸಲ
ತಿರುವೈಯ್ಯಾರಿನ ದೇವಾಲಯದ ಉತ್ಸವದಲ್ಲಿ ದಾಸರಿ ನಾಗಸ್ವರವನ್ನು ನುಡಿಸು
ತಿದ್ದರು. ಉತ್ಸವವು ದಕ್ಷಿಣ ಮಡಬೀದಿಗೆ ಬಂದಿತು. ತಿರುಮಂಜಿನ ಬೀದಿಯು