2023-06-25 23:30:47 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ದಕ್ಷಿಣ-ಇದು ತಾಳದಶ ಪ್ರಾಣಗಳಿಗೆ ಸಂಬಂಧಿಸಿದ ಷಣ್ಮಾರ್ಗಗಳಲ್ಲಿ
ಮೊದಲನೆಯದು. ಪ್ರತಿ ತಾಳಾಕ್ಷರಕ್ಕೆ ೮ ಮಾತ್ರೆಗಳು ಅಥವಾ ೩೨ ಅಕ್ಷರ
ಕಾಲಗಳಾಗುತ್ತವೆ
ದಕ್ಷಿಣಗುರ್ಜರಿ-ನಂಗೀತರತ್ನಾಕರವೆಂಬ ಗ್ರಂಥದಲ್ಲಿ ಉಕ್ತವಾಗಿರುವ
ಗುರ್ಜರಿರಾಗದ ಒಂದು ಉಪಾಂಗರಾಗ
೫೧೭
ದಕ್ಷಿಣಾಮೂರ್ತಿಪಿಳ್ಳೆ (೧೮೭೫-೧೯೩೭) -ಇವರು ಪುದುಕೋಟೆಯ
ಮಾನುಂಡಿಯಾ ಪಿಳ್ಳೆಯ ಒಬ್ಬ ಪ್ರಮುಖ ಶಿಷ್ಯರು ಮತ್ತು ಈ ಶತಮಾನದ
ಪೂರ್ವಾರ್ಧದ ಪ್ರಸಿದ್ಧ ಖಂಜಿರ ಮತ್ತು ಮೃದಂಗ ವಿದ್ವಾಂಸರು, ತಂಜಾವೂರು ಕೃಷ್ಣ
ಭಾಗವತರು, ತಂಜಾವೂರು ಪಕ್ಕಿರಿ ಮತ್ತು ನಾರಾಯಣಸ್ವಾಮಿ ಅಪ್ಪ ಮುಂತಾದವ
ರಿಂದ ಪ್ರಭಾವಿತರಾಗಿದ್ದರು. ಖಂಜಿರ ವಾದ್ಯವನ್ನು ನುಡಿಸುವುದರಲ್ಲಿ ಅತ್ಯಂತ
ಪ್ರವೀಣರಾಗಿದ್ದರು. ಅಪಾರವಾದ ಲಯಜ್ಞಾನ, ಉತ್ತಮ ಮನೋಧರ್ಮವುಳ್ಳವ
ರಾಗಿದ್ದರು. ಇವರ ತನಿ ವಾದನವು ಕೇಳಲು ಆಪ್ಯಾಯಮಾನವಾಗಿರುತ್ತಿತ್ತು.
ತಮ್ಮ ವಾದನ ವೈಖರಿಯಿಂದ ಸಭಿಕರನ್ನು ಬೆರಗುಗೊಳಿಸುತ್ತಿದ್ದರು.
ಪ್ರವೃತ್ತಿಯುಳ್ಳವರಾಗಿದ್ದುದಲ್ಲದೆ ಮುರುಗನ ಪರಮಭಕ್ತರಾಗಿದ್ದು ಚಿನ್ಮಯಾನಂದ
ಗುರು ಎಂಬ ಹೆಸರಿನ ಸನ್ಯಾಸಿಗಳಾದರು. ಇವರ ಶಿಷ್ಯವರ್ಗದವರು ತಂಜಾವೂರು
ರಾಮದಾಸರು, ಪಾಳ್ವಾಟ್ ಮಣಿಅಯ್ಯರ್, ದೇವಕೋಟಿ ಸುಂದರರಾಜ
ಅಯ್ಯಂಗಾರ್ ಮುಂತಾದವರು,
ಧಾರ್ಮಿಕ
ದಕ್ಷಿಣಾಮೂರ್ತಿ ಶಾಸ್ತ್ರಿ (೧೯ನೆ ಶ.)-ಇವರು ತ್ಯಾಗರಾಜರ ನಂತರ
ಇದ್ದ ಒಬ್ಬ ಪ್ರಸಿದ್ಧ ವಾಗ್ಗೇಯಕಾರರು. ಮುಲಿಕಿನಾಡು ತೆಲುಗು ಬ್ರಾಹ್ಮಣರು ಮತ್ತು
ತಮಿಳುನಾಡಿನ ಕರೂರಿನವರು, ಇವರು ಬಂಧು ಮತ್ತು ಪಿಟೀಲು ವಿದ್ವಾಂಸ
ರಾಗಿದ್ದ ಕರೂರು ಚಿನ್ನ ದೇವುಡು ಎಂಬುವರೊಡನೆ ಸೇರಿ ಅನೇಕ ಸರಳವಾದ ತೆಲುಗು
ಕೃತಿಗಳನ್ನು ರಚಿಸಿದರು. ಹಲವು ಕೃತಿಗಳ ಧಾತುವನ್ನು ದೇವುಡು ಅಯ್ಯನವರು
ರಚಿಸಿದರು ಮತ್ತು ಅವುಗಳ ಮಾತು ಶಾಸ್ತ್ರಿಗಳದು. ಇವರ ಮುದ್ರೆ ಗರ್ಭಪುರಿ,
ಈ ಕೃತಿಗಳು ಗರ್ಭಪುರಿ ಕೃತಿಗಳೆಂದು ಪ್ರಸಿದ್ಧವಾಗಿವೆ.
ದಾಟಕ ಪಂಚಕ-ಈ ರಾಗವು ೫೧ನೆ ಮೇಳಕರ್ತ ಕಾಮವರ್ಧನಿಯ
ಒಂದು ಜನಕರಾಗ,
ಸ ಗ ರಿ ಗ ಮ ಪ ಮ ದ ನಿ ಸ ಸ
ಸ ನಿ ದ ಪ ಮ ಗ ರಿ ಸ
ದಾಟಿಬಲ-ಈ ರಾಗವು ೬೫ನೆ ಮೇಳಕರ್ತ ಮೇಚಕಲ್ಯಾಣಿಯ ಒಂದು
ಜನ್ಯರಾಗ'
ಸ ರಿ ಗ ಮ ಪ ದ ನಿ ಸ
ಸ ನಿ ದ ಪ ಗ ರಿ ಸ