This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ದರುವಿನ ಪ್ರಾರಂಭದಲ್ಲಿರುವ ನೃತ್ಯಕ್ಕೆ ಮುಖಜತಿ ಎಂದು ಹೆಸರು. ದರುವಿನ
ಬೇರೆ ಬೇರೆ ಖಂಡಗಳನ್ನು ಹಾಡಿ ಮುಗಿಸುವ ನೃತ್ಯಕ್ಕೆ ಮಕುಟಜತಿ ಎಂದು ಹೆಸರು.
ಮುಕ್ತಾಯದಲ್ಲಿರುವ ನೃತ್ಯಕ್ಕೆ ಅಂತ್ಯಜತಿ ಎಂದು ಹೆಸರು.
 
ಕಿಂಚಿ
 
ಮೇಳತ್ತೂರು ವೆಂಕಟರಾಮಾಶಾಸ್ತ್ರಿ, ಶಾಹಜಿ, ರಾಮಸ್ವಾಮಿ ದೀಕ್ಷಿತರು,
ನಾರಾಯಣತೀರ್ಧ, ಸ್ವಾತಿತಿರುನಾಳ್ ಮಹಾರಾಜ, ಬಾಲುಸ್ವಾಮಿ ದೀಕ್ಷಿತರು,
ಸುಬ್ಬರಾಮ ದೀಕ್ಷಿತರು, ಮುತ್ತಯ್ಯ ಭಾಗವತರು ಸೊಗಸಾದ ದರುಗಳನ್ನು
 
ರಚಿಸಿದ್ದಾರೆ
ರೆ.
 
ದರುಬಾರ- ಚತುರ್ದಂಡಿ ಪ್ರಕಾಶಿಕಾ ಎಂಬ ಗ್ರಂಥದಲ್ಲಿ ಉಕ್ತವಾಗಿರುವ
 
ಒಂದು ದೇಶೀರಾಗ
 
ದವಡೆತಾನ-ಹಲ್ಲು ಕಚ್ಚಿಕೊಂಡು ಬಾಯಿ ತುದಿಯಲ್ಲಿ ಹಾಡುವ ತಾನ.
ಇದು ತುಂಬುಕಂಠದ ತಾನವಲ್ಲ. ನಾಭಿತಾನವು ಅತ್ಯಂತ ಗಂಭೀರವಾಗಿದ್ದು,
ಮನಮುಟ್ಟುವಂತಿರುತ್ತದೆ.
 
ದವಳೆಶ೦ಖ ನಾಗಸ್ವರ ಕಚೇರಿಯಲ್ಲಿ ತಾಳಕ್ಕಾಗಿ ಬಳಸಲಾಗುವ
ಶಂಖವಾದ್ಯ,
 
ದವಂಡೆ - ಇದು ಉಡುಕ್ಕೆಗಿಂತ ದೊಡ್ಡದಾಗಿರುವ ಡಮರುವಿನ ಆಕಾರದಲ್ಲಿ
ರುವ ವಾದ್ಯ. ಇದನ್ನು ಮರದಿಂದ ತಯಾರಿಸುತ್ತಾರೆ. ಇದರ ಎರಡು ಮುಖ
ಗಳಿಗೆ ಮಂದವಾಗಿರುವ ಚರ್ಮವನ್ನು ಅಳವಡಿಸಿದೆ. ಕಡ್ಡಿಯಿಂದ ಇದನ್ನು ಬಾರಿಸಿ
ನುಡಿಸುತ್ತಾರೆ. ಇದನ್ನು ಮಾರಿಗುಡಿಗಳಲ್ಲಿ ಹೆಚ್ಚಾಗಿ ಬಳಸುವರು.
 
ಆ .
 
ದ- ಈ ರಾಗವು ೧೩ನೆ ಮೇಳಕರ್ತ ಗಾಯಕಪ್ರಿಯದ ಒಂದು ಜನ್ಯರಾಗ,
ಸ ರಿ ಗ ಮ ನಿ ಸ
ಸ ನಿ ಮ ಗ ರಿ ಸ
 
ದಂಡ (೧) ರುದ್ರವೀಣೆಯ ಕಾಂಡ.
ಬುರುಡೆಗಳನ್ನು ಈ ಕಾಂಡಕ್ಕೆ ಸೇರಿಸಲಾಗಿದೆ.
ಯಲ್ಲ ಮತ್ತೊಂದನ್ನು ಬಲಗಡೆ ಕೊನೆಯಲ್ಲೂ
 
ಅನುರಣನಕ್ಕಾಗಿ ಎರಡು ಸೋರೆ
ಒಂದನ್ನು ಕಾಂಡದ ಎಡಗಡೆ ಕೊನೆ
ಅಳವಡಿಸಲಾಗಿದೆ.
 
(೨) ಕೊಳಲಿನ ರಂಧ್ರಗಳನ್ನು ಕೊರೆದಿರುವ ಬಿದಿನ ಅಥವಾ ಬೇರೆ ವಸ್ತುವಿನ
ಕೊಳಬೆ
 
-
 
ದಂಡಕ - ಇದೊಂದು ಸಾಹಿತ್ಯರಚನಾ ವಿಶೇಷ ನಿಯತವಾದ ಗಣಗಳಿಂದ
ಕೂಡಿ, ಪಾದವಿಭಾಗವಿಲ್ಲದೆ ದಂಡಾಕಾರವಾಗಿರುವ ಶಬ್ದ ರಚನಾ ವಿಶೇಷವು ದಂಡಕ,
ಕಾಳಿದಾಸನ ಶ್ಯಾಮಲಾದಂಡಕ,
 
ಉದಾ :
 
ದಂಡ ಪರಿಮಾಣ-ಕೊಳಲಿನ ಉದ್ದದ ಪ್ರಮಾಣಕ್ಕೆ ದಂಡ ಪರಿಮಾಣ
ವೆಂದು ಹೆಸರು. ದಕ್ಷಿಣಭಾರತದ ಕಚೇರಿ ಕೊಳಲು ೧೪ ಅಂಗುಲ ಉದ್ದವಿರುತ್ತದೆ,
 
ದಂಡರಾಸ್-ಕೋಲಾಟಕ್ಕೆ ದಂಡರಾಸವೆಂದು ಹೆಸರು. ಇದೊಂದು
ಜಾನಪದ ನೃತ್ಯ. ಒಳ್ಳೆಯ ಉಡುಪನ್ನು ಧರಿಸಿರುವ ಬಾಲಕಿಯರು ದಸರಾ,