This page has been fully proofread once and needs a second look.

೪೬
 
ಸಂಗೀತ ಪಾರಿಭಾಷಿಕ ಕೋಶ
 
ಆ : ಸ ಗ ಮ ದ ನಿ ಸ

ಅ :
ಸ ನಿ ದ ಮ ಗ ಸ
 

 
ಅಲಿವರ್ಧನಿ-
ಈ ರಾಗವು ೧೭ನೆಯ ಮೇಳಕರ್ತ ಸೂರ್ಯಕಾಂತದ ಒಂದು
 

ಜನ್ಯರಾಗ,
 

ಆ :
ಸ ರಿ ಗ ಮ ನಿ ಸ
 

ಅ :
ಸ ನಿ ದ ಪ ಮ ಗ ರಿ ಸ
 

 
ಅಲಿಯಬಿಲಾವಲ್-
ಶಂಕರಾಭರಣ ಮೇಳಕ್ಕೆ ಸೇರಿದ ಹಿಂದೂಸ್ಥಾನೀ
 

ಸಂಗೀತದ ಒಂದು ರಾಗ.
 
ಅಲ್ಲ

 
ಅಲ್ಲೂ
ರಿ ವೆಂಕಟಾದ್ರಿ ಸ್ವಾಮಿ -
ತೆಲುಗಿನಲ್ಲಿ ಭಕ್ತಿ ಗೀತೆಗಳನ್ನು ರಚಿಸಿರುವ

ವಾಗ್ಗೇಯಕಾರರು.
 
ಅಲಂಕಾರ-

 
ಅಲಂಕಾರ
(೧) ಅಲಂಕಾರವೆಂದರೆ ಶೃಂಗಾರವೆಂದು ಸಾಮಾನ್ಯ ಅರ್ಥ

ನಾಟ್ಯದ ಭಾವಾನುಭಾವ ಪ್ರಯೋಗಾದಿಗಳಲ್ಲಿ ವೈಯುಕ್ತಿಕ ಚೈತನ್ಯ ಸತ್ವ ಸದೃಶ

ವಾದುದು ಸತ್ವಾಲಂಕಾರ, ಚಪಲ, ಅಂಗಾಂಗ ವಿಭೇದ ಸಂಯೋಜನಕಾರ್ಯದ

ಚುರುಕುತನ, ಚಲನವಲನಗಳ ವಿಸ್ತರಣೆ ಮೊದಲಾದುವು ಅಭಿನಯಾಲಂಕಾರ,

ಹೆಜ್ಜೆ ಹೆಜ್ಜೆಗಳಲ್ಲಿ ಮೊಳಗುವ ಗೆಜ್ಜೆನಾದ ಶಬ್ದವು ಜತಿಯಲಂಕಾರ, ಗೀತೆ, ಆಲಾಪನೆ

ಮೊದಲಾದುವು ನಾದಾಲಂಕಾರ, ವಸ್ತುಗಳು, ಆಭರಣಗಳು, ಪುಷ್ಪಗಳು, ವಿಲೇಪನ

ಗಳು ಮುಂತಾದುವು ಅಲಂಕಾರ ಸಾಧನಗಳು,
 

(೨) ಸಪ್ತತಾಳಗಳು ಮತ್ತು ಇತರ ತಾಳಗಳಲ್ಲಿರುವ ಪ್ರಾರಂಭದ

ಸಂಗೀತದ ಅಭ್ಯಾಸಗಳಿಗೆ ಅಲಂಕಾರಗಳೆಂದು ಹೆಸರು. ಇವು ಅಭ್ಯಾಸ ಗಾನಕ್ಕೆ

ಸಂಬಂಧಿಸಿವೆ.
 

ಅಲಂಕಾರಗಳೆಂದು ಹೆಸರು.
 

(೩) ಪುರಾತನ ಸಂಗೀತ ಪದ್ಧತಿಯಲ್ಲಿದ್ದ ಸ್ವರಸಮೂಹ ಮಾದರಿಗಳಿಗೆ

ಸ್ಥಾಯಿ, ಆರೋಹಿ, ಅವರೋಹಿ, ಸಂಚಾರಿವರ್ಣ

ಗಳನ್ನನುಸರಿಸಿ ಕಲಾತ್ಮಕವಾಗಿ ಸ್ವರಸಮೂಹಗಳನ್ನು ಮಾಡುತ್ತಿದ್ದರು. ಪುರಾತನ

ಸಂಗೀತದಲ್ಲಿ ಇವು ಗಮಕಗಳ ಕೆಲಸ ಮಾಡುತ್ತಿದ್ದುವು.
 

 
ಅಲಂಕಾರ ಪ್ರಿಯ
ಈ ರಾಗವು ೧೦ನೆಯ ಮೇಳಕರ್ತ ನಾಟಕಪ್ರಿಯದ

ಒಂದು ಜನ್ಯರಾಗ.
 

ಆ :
ಸ ರಿ ಗ ಮ ದ ನಿ ಸ

ಅ :
ಸ ನಿ ದ ಮ ಗ ರಿ ಸ
 

 
ಅಲಂಕಾರಿಣಿ-
ಇದು ಭಾವಭಟ್ಟನ ಮತದಂತೆ ಮಧ್ಯಮ ಸ್ವರದ

ನಾಲ್ಕನೆಯ ಶ್ರುತಿಯ ಹೆಸರು.
 

 
ಅಲಂಕೃತ -
ಒಂದು ಸ್ವರ ಸಪ್ತಕದಲ್ಲಿರುವ ಸಂಗೀತಭಾಗವನ್ನು ಇನ್ನೊಂದು

ಸ್ವರಸಪ್ತಕದಲ್ಲಿ ಹಾಡುವುದು ಅಲಂಕೃತ.

ಅಲಂಕೃತ. ಇದು ಸಂಗೀತಕ್ಕೆ ಸೌಂದರ್ಯವೀಯುವ