2023-07-06 05:47:52 by jayusudindra
This page has been fully proofread once and needs a second look.
ಆರೋಹಣಕ್ರಮದಲ್ಲಿ ಮುಂದುವರಿಸಿ ದೀರ್ಘ ನಿಷಾದದಲ್ಲಿ ಮುಕ್ತಾಯ ಮಾಡಿ ತರು
ವಾಯ ರಿಷಭದಿಂದ ತೊಡಗಿ ದೀರ್ಘ ಷಷ್ಟದಲ್ಲಿ ಮುಕ್ತಾಯಗೊಳಿಸುವುದು.
ಉದಾ : ಭೈರವಿರಾಗ-ಸ ರಿ ಗ ಮ ಪ ದ ನೀ ರಿ ಗ ಮ ಪ ದ ನಿ ಸಾ,
ಗ ಮ ಪ ದ ನಿ ಸ ರೀ ಮ ಪ ದ ನಿ ಸ ರಿ ಗಾ
೫೧೩
-
ದಶಾವತಾರ
(೧) ಕನ್ನಡದ ಒಂದು ಯಕ್ಷಗಾನ,
ದಶಾವತಾರ ಅಷ್ಟಪದಿ-ಇದು ಜಯದೇವ ಕವಿಯ ಗೀತಗೋವಿಂದ
ಕಾವ್ಯದ ಪ್ರಥಮ ಅಷ್ಟಪದಿ. ಇದರ ಪ್ರತಿಶ್ಲೋಕವು ವಿಷ್ಣುವಿನ ಒಂದೊಂದು
ಅವತಾರದ ವಿಚಾರವನ್ನೊಳಗೊಂಡಿದೆ
ದಶಾವತಾರ ದಿವ್ಯನಾಮಕೀರ್ತನೆ
ಶ್ರೀತ್ಯಾಗರಾಜರು ರಚಿಸಿರುವ
ಭೂಪಾಲರಾಗದ ದೀನಜನಾವನ ಎಂಬ ಕೃತಿಯು ವಿಷ್ಣುವಿನ ದಶಾವತಾರವನ್ನು
ಕುರಿತು ಹೇಳುತ್ತದೆ. ಜಯದೇವ, ಪುರಂದರದಾಸರು ಮತ್ತು ತ್ಯಾಗರಾಜರು
ಬುದ್ಧನನ್ನು ವಿಷ್ಣುವಿನ ಒಂದು ಅವತಾರವೆಂದು ಪರಿಗಣಿಸಿರುವುದನ್ನು ಇಲ್ಲಿ ನೆನೆಯ
ದಶಾವತಾರ ರಾಗವಾಲಿಕಾ
ತಿರುವಾಂಕೂರಿನ ಸ್ವಾತಿತಿರುನಾಳ್
ಮಹಾರಾಜರು ರಚಿಸಿರುವ ಕಮಲಜಾಸ್ಯ' ಎಂಬ ಹತ್ತು ರಾಗಗಳಲ್ಲಿರುವ ರಚನೆಯು
ಪ್ರಸಿದ್ಧವಾದ ದಶಾವತಾರ ರಾಗಮಾಲಿಕೆ ಮತ್ಸ, ಕೂರ್ಮ, ವರಾಹ, ನರಸಿಂಹ,
ವಾಮನ, ಭಾರ್ಗವರಾಮ, ರಾಮ, ಬಲರಾಮ, ಕೃಷ್ಣ ಮತ್ತು ಕಲ್ಯಾವತಾರ
ಗಳನ್ನು ಕುರಿತು ಇದನ್ನು ರಚಿಸಲಾಗಿದೆ. ಇದು ಮೋಹನ, ಬಿಲಹರಿ, ಧನ್ಯಾಸಿ,
ಸಾರಂಗ, ಮಧ್ಯಮಾವತಿ, ಅಠಾಣ, ನಾಟಕುರಂಜಿ, ದರ್ಬಾರ್, ಆನಂದಭೈರವಿ
ಮತ್ತು ಸೌರಾಷ್ಟ್ರ ರಾಗಗಳಲ್ಲಿದೆ.
ದರ್ಶನ
ಜಯದೇವ ಕವಿಯ ಗೀತಗೋವಿಂದ ಕಾವ್ಯದ
೧೯ನೆ ಅಷ್ಟಪದಿಗೆ ದರ್ಶನ ಅಷ್ಟ ಪದಿ ಎಂದು ಹೆಸರು. ಇದಕ್ಕೆ ಈ ಹೆಸರು ಬರಲು
ಕಾರಣ ಒಂದು ಕತೆಯಿಂದ ತಿಳಿದು ಬರುತ್ತದೆ ಜಯದೇವನು ಪೂರ್ತಿಮಾಡದೆ
33
ಪದ್ಮಾವತಿಯಿಂದ ಆ ಹಸ್ತಪ್ರತಿಯನ್ನು ತೆಗೆದುಕೊಂಡು ಆ ಎರಡು ಸಾಲುಗಳನ್ನು
ಬರೆದು ಹೋದನು. ಇದಕ್ಕೆ ಗರುಡಪದಾಷ್ಟ ಪದಿ ಎಂಬ ಹೆಸರು ಇದೆ.
ದಯಾರಂಜನಿ
ಈ ರಾಗವು ೨೮ನೆ ಮೇಳಕರ್ತ ಹರಿಕಾಂಭೋಜಿಯ ಒಂದು
ಜನ್ಯರಾಗ,
ಸ ರಿ ಮ ಪ ದ ಸ
ಸ ರಿ ಮ ಪ ದ ಸ
ಸ ನಿ ದ ಮ ಗ ರಿ ಸ