This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ಕಟ್ಟಿ ಎಡಗೈಯಲ್ಲಿ ಹಿಡಿದು ಬಲಗೈಯಲ್ಲಿ ಒಂದು ಬಿದಿರು ಕಡ್ಡಿ ಯ ತಾಡನದಿಂದ
ತಾಳಗತಿ ತೋರಿಸುತ್ತಾರೆ. ಕೇಳಲು ಇಂಪಾಗಿರುತ್ತದೆ.
 
೫೦೬
 
ಗತ - ಮತಂಗನು ಹೇಳಿರುವ ನವತಾಳಗಳಲ್ಲಿ ಒಂದು ತಾಳ.
ತೃತೀಯಕಾಲ-ಮೂರನೆಯ ಕಾಲ ಅಂದರೆ ದ್ರುತಕಾಲ, ಇದನ್ನು
ಸ್ವರಸಮೂಹದ ಮೇಲು ಎರಡು ಗೀಟು ಹಾಕಿ ಸೂಚಿಸಿರುತ್ತದೆ ಉದಾ : ಸ ಸ ಸ ಸ
ತ್ರಿನೇತ್ರಪ್ರಿಯ -ಈ ರಾಗವು ೧೬ನೆಯ ಮೇಳಕರ್ತ ಚಕ್ರವಾಕದ ಒಂದು
 
ಜನ್ಯರಾಗ,
 
ಸ ರಿ ಗ ದ ನಿ ಸ
ಸ ನಿ ದ ಗ ರಿ ಸ
 
ದಶರಂಜನಿ-ಈ ರಾಗವು ೧೩ನೆ ಮೇಳಕರ್ತ ಗಾಯಕ ಪ್ರಿಯದ
 
ಒಂದು ಜನ್ಯರಾಗ
 
ಸ ರಿ ಗ ದ ನಿ ಸ
 
ಸ ನಿ ದ ಗ ರಿ ಸ
 
ತ್ರಿಪಡಗ - ಈ ರಾಗವು ೧೯ನೆ ಮೇಳಕರ್ತ ರುಂಕಾರ ಧ್ವನಿಯ ಒಂದು
 
ಜನ್ಯರಾಗ,
 
ಆ .
 
ಅ :
 
ಸ ರಿ ಮ ದ ನಿ ಸ
 
ಸ ನಿ ದ ಮ ರಿ ಸ
 
ತ್ರಿಪತಾಕಹಸ್ತ-ಇದು ಭರತ ನಾಟ್ಯದ ಅಸಂಯುತ ಹಸ್ತ ಮುದ್ರೆಗಳಲ್ಲಿ
ಒಂದು ಬಗೆಯ ಮುದ್ರೆ. ಪತಾಕ ಹಸ್ತದಲ್ಲಿನ ನಾಲ್ಕನೆಯ ಬೆರಳನು ಮಡಿಚ್ಚಿ
ಹಿಡಿಯುವುದು ತ್ರಿಪತಾಕಹಸ್ತ. ಕಿರೀಟ, ವೃಕ್ಷ, ವಜ್ರಾಯುಧ, ಇಂದ್ರ, ಕೇತಕಿ
ಪುಷ್ಪ, ದೀಪ, ಅಗ್ನಿಜ್ವಾಲೆಯ ವಿಜೃಂಭಣೆ, ಕೆನ್ನೆಗಳು, ಪತ್ರಲೇಖನ, ಬಾಣ,
ಪರಿವರ್ತನೆ, ಸ್ತ್ರೀಪುರುಷ ಸಂಯೋಗಗಳನ್ನು ಸೂಚಿಸಲು ಈ ಹಸ್ತಲಕ್ಷಣವನ್ನು
 
ವಿನಿಯೋಗಿಸಲಾಗುವುದು,
 
ಪುಟತಾಳ-ಇದು ಸುಳಾದಿ ಸಪ್ತತಾಳಗಳಲ್ಲಿ ಐದನೆಯ ತಾಳ ಇದರ
ಅಂಗಗಳು ಒಂದು ತಿಶ್ರ ಲಘು, ಎರಡು ದ್ರುತ, ಇದರ ಒಂದಾವರ್ತಕ್ಕೆ ಏಳು ಅಕ್ಷರ
ಇದಕ್ಕೆ ತಿತ್ರ ಜಾತಿ ತ್ರಿ ಪುಟತಾಳವೆಂದು ಹೆಸರು
ತ್ರಿಪುಚ್ಛ-ದಶವಿಧ ಗಮಕಗಳಲ್ಲಿ ಒಂದು ಬಗೆಯ ಗಮಕ ಅಂದರೆ
ಮೂರು ಸ್ವರಗಳ ಸಮೂಹವನ್ನು ಉಪಯೋಗಿಸುವುದು
 
ಕಾಲ.
 
ಉದಾ : ಸಸಸ, ರಿರಿರಿ,
 
ಗಗಗ ಇತ್ಯಾದಿ.
ಭೈರವಿ ಆಟತಾಳದ ವರ್ಣದಲ್ಲಿ ಮೊದಲ ಎತ್ತುಗಡೆ ಸ್ವರ,
ಪಪಪ, ದದದ, ನಿನಿನಿ, ಸಸರಿ ಇತ್ಯಾದಿ.
 
ತ್ರಿಭಂಗ-ಭರತನಾಟ್ಯದ ನಾಲ್ಕು ಭಾವಭಂಗಿಗಳಲ್ಲಿ ಒಂದು ವಿಧ. ದೇಹವು
ತ್ರಿಕೋನಾಕಾರವನ್ನು ಸೂಚಿಸುವಿಕೆ. ನಿಂತ ನಿಲುವಿನಲ್ಲಿ ತ್ರಿಕೋನವನ್ನು ತೋರು