2023-06-28 06:41:46 by jayusudindra
This page has been fully proofread once and needs a second look.
ನುಡಿ, ಇವುಗಳನ್ನು ಸೂಚಿಸಲು ಈ ಹಸ್ತವನ್ನು ವಿನಿಯೋಗಿಸುವರು
ಅಲಪಲ್ಲವ -
ಅಲಪಲ್ಲವ
ಇದು ಭರತನಾಟ್ಯದ ಒಂದು ಬಗೆಯ ಹಸ್ತ ಮುದ್ರೆ,
ಬೆರಳುಗಳನ್ನು ಬಿಡಿಬಿಡಿಯಾಗಿ ಅಂಗೈಯೊಳಗೆ ಬಗ್ಗಿಸಿ ಹಿಡಿದಲ್ಲಿ ಅದು ಅಲಪಲ್ಲವ
ನೀನ್ಯಾರು ? ಎಂಬ ಪ್ರಶ್ನೆ, ದಬಾಯಿಸುವುದು, ಶೂನ್ಯವಚನಾದಿಗಳು, ಸುಳ್ಳು
ಮೊದಲಾದುವುಗಳಲ್ಲಿ ಮಾತು ಮಾತಿಗೆ ಸ್ತ್ರೀಯರು ತನ್ನನ್ನು ತಾವು ನಿರ್ದೇಶಿಸಿ
ಕೊಳ್ಳುವುದನ್ನು ಸೂಚಿಸುತ್ತದೆ.
ಹಾಡುವಾಗ
ಅಲ್ಪತ್ವ-
ಅಲ್ಪತ್ವ
ಇದು ರಾಗದಲ್ಲಿ ಅತ್ಯಲ್ಪವಾಗಿ ಉಪಯೋಗಿಸಲ್ಪಡುವ ಸ್ವರ
ಇದರಲ್ಲಿ ಲಂಘನ ಮತ್ತು ಅನಭ್ಯಾಸವೆಂಬ ಎರಡು ವಿಧಗಳಿವೆ.
ಒಂದು ಸ್ವರವನ್ನು ಬಿಟ್ಟು ಮುಂದಿನ ಸ್ವರವನ್ನು ಹಾಡುವುದು ಲಂಘನವಾಗುತ್ತದೆ.
ಒಂದು ಸ್ವರವನ್ನು ಬಹು ಸ್ವಲ್ಪವಾಗಿ ಬಳಸಿದಾಗ ಅದು ಅನಭ್ಯಾಸವೆನಿಸಿಕೊಳ್ಳುತ್ತದೆ.
ಅಲಬುಸಾರಂಗಿ
ಕಮಾನಿನಿಂದ ನುಡಿಸಲ್ಪಡುವ ಉತ್ತರ ಭಾರತದ
ಒಂದು ತಂತೀವಾದ್ಯ.
ಅಲಾನ್‌ಡನೀಲೊ
ಫ್ರೆಂಚ್ ಸಂಗೀತ ಶಾಸ್ತ್ರಜ್ಞ, ಬನಾರಸ್ ಹಿಂದೂ
ವಿಶ್ವವಿದ್ಯಾನಿಲಯದಲ್ಲಿ ಸಂಶೋಧಕ ಸಂಗೀತ ಪ್ರಾಧ್ಯಾಪಕನಾಗಿದ್ದನು.
Introduction to the Study of musical scales and
Northern Indian Music ಎಂಬ ಎರಡು ಗ್ರಂಥಗಳ ಕರ್ತೃ -
ಅಲರು
ಈ ರಾಗವು ೩೭ನೆಯ ಮೇಳಕರ್ತ ಸಾಲಗದ ಒಂದು ಜನ್ಯರಾಗ,
ಆ
೪೫
ಅ : ಸ ನಿ ದ ಮ ಗ ಸ
"6
""
ಅಲರಿಪು
ತಯ್ಯಾಂ ದತ್ತತಾಂ ಎಂಬ ತೊಟ್ಟಿ ನಿಂದ
ಪ್ರಾರಂಭವಾಗುವ ಈ ನರ್ತನವು ತಾಂ ಧಿಶ್ಲಾಂ ಧಿ ಎಂಬ ನುಡಿತದಲ್ಲಿ
ನಡೆಯುವುದು. ಹಂಸಧ್ವನಿರಾಗದಲ್ಲಿ ಚತುರಶ್ರ ಜಾತಿ
ರೂಪಕತಾಳದಲ್ಲಿ ರಚಿತವಾದ
ಈ ( ಅಲರಿಪು', ಸಂಪ್ರದಾಯದ ಮೊದಲ ನೃತ್ಯ
ಇದು ಕತ್ತು, ಕಣ್ಣು, ಭುಜ,
ಕೈ ಕಾಲುಗಳೊಂದಿಗೆ ತನ್ನದೇ ಆದ ಒಂದು ಚಲನಾವಿಧಾನವನ್ನು ಪಡೆದ ನೃತ್ಯ.
ಇದು ತಿಶ್ರ, ಮಿಶ್ರ, ಖಂಡ, ಸಂಕೀರ್ಣ ಜಾತಿಗಳ ನಡೆಯಲ್ಲಿ ಅಚಲನಾ ವಿಧಾನವನ್ನು
ಅಳವಡಿಸಿಕೊಂಡು ಒಟ್ಟು ಐದು ಅಲರಿಪುಗಳೆಂದು ಪ್ರಯೋಗಿಸುವುದುಂಟು.
ರಂಗಪ್ರವೇಶದ ವ್ರಧಮ ನೃತ್ಯ, ನಾಟ್ಯ ಕಾರ್ಯದ ಕಣ್ಣು, ಕತ್ತು, ಹಸ್ತ ಪಾದಾದಿ
ಗಳ ವಿವಿಧ ಚಲನೆಗಳ ಪ್ರಯೋಗದಿಂದ ಅಂಗಾಂಗಗಳನ್ನು ಚುರುಕುಗೊಳಿಸುವ
ಕಾರ್ಯವನ್ನು ನಿರ್ವಹಿಸುತ್ತದೆ.
ಅಲವ -
ಅಲವ
ಈ ರಾಗವು ೪೨ನೆಯ ಮೇಳಕರ್ತ ರಘುಪ್ರಿಯದ ಒಂದು ಜನ್ಯ
""