This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ಗೂಡಿತೆಂದು ನಿರ್ಧರವಾಗುತ್ತದೆ. ಹೀಗೆ ಶ್ರುತಿ ಮಾಡಿದ ನಂತರ ಕುದುರೆಯ ಮೇಲೆ
ಹಾದುಹೋಗಿರುವ ತಂತಿಗಳ ಕೆಳಗೆ, ನಾಲ್ಕು ಚೂರು ಹತ್ತಿಯ, ರೇಷ್ಮೆ ಅಥವಾ
ಉಣ್ಣೆ ದಾರಗಳನ್ನು ಸೇರಿಸಿ ಒಂದೊಂದು ದಾರವನ್ನೂ ಮುಂದಕ್ಕೂ ಹಿಂದಕ್ಕೂ
ಜರುಗಿಸುತ್ತಾ ಆಯಾ ತಂತಿ ಮೀಟಿದರೆ, ಒಂದು ಸ್ಥಾನದಲ್ಲಿ ಒಂದೊಂದು ತಂತಿಯೂ
ಜೀರುಗೂಡಿ ವರ್ಧಿಸಿದ ನಾದದಿಂದ ಧ್ವನಿ ಮಾಡುತ್ತದೆ. ಇದಕ್ಕೆ ಜೀವಾಳ ಕಟ್ಟು
 
ವುದು ಎಂದು ಹೆಸರು.
 
*02
 
ತಂಬೂರಿಯ ಪುರಾತನ ಹೆಸರು ಬ್ರಹ್ಮವೀಣೆ ಹಿಂದೆ ಇದರ ಕೊಡವು
ಒಂದು ಪೆಟ್ಟಿಗೆ ಆಕಾರದಲ್ಲಿತ್ತು. ಪುರಾಣಗಳಲ್ಲಿ ತುಂಬುರುವು ತಂಬೂರಿನಾದಲೋಲ.
ಅವನೇ ಈ ವಾದ್ಯವನ್ನು ಆವಿಷ್ಕರಿಸಿದನು. ಮೊಗಲರ ಕಾಲದಲ್ಲಿ ಅಂದರೆ ತಾನ್
ಸೇನನ ಕಾಲದಲ್ಲಿ ಪೆಟ್ಟಿಗೆಗೆ ಬದಲು ಸೋರೆಕಾಯನ್ನು ಅಳವಡಿಸಲಾಯಿತು.
ತಂ ಬ್ರೂಹಿ-ಅವನನ್ನು ಹೇಳು ಅಂದರೆ ದೇವರನ್ನು ಕುರಿತು ಹೇಳು ಎಂಬ ಅರ್ಥ
ಕೊಡುವ ಪದದಿಂದ ತಂಬೂರಿ ಎಂಬ ಹೆಸರು ಬಂದಿತು ಎಂದು ಹೇಳುತ್ತಾರೆ.
 
ಇದಕ್ಕೆ ತಂಬೂರಾ, ತಾನಪುರಾ ಎಂಬ ಹೆಸರುಗಳೂ ಇವೆ ಕೊಡಕ್ಕೆ ತುಂಬಾ
ಎನ್ನುವರು. ಅದರ ಮೇಲೆ ಮರದ ತೆಳುವಾದ ಪಟ್ಟಿ ಕೂಡಿಸಿರುವುದಕ್ಕೆ ತಬಲಿ
ಎನ್ನುವರು.
 
ಉತ್ತರ ಭಾರತದಲ್ಲಿಯ ತಾನ್‌ಪುರಾದ ತುಂಬಾವನ್ನು ಮಾಟವಾದ ಸೋರೆ
ಕಾಯಿಗಳಿಂದ ಮಾಡುತ್ತಾರೆ. ಬೊಂಬಾಯಿ ಮತ್ತು ಮಾರಜಿನಲ್ಲಿ ಇಂತಹ
ತಂಬೂರಿಗಳು ಪ್ರಸಿದ್ಧ. ಇದು ಮೂರುವರೆ ಅಡಿಗಳಿಂದ ಐದು ಅಡಿ ಉದ್ದವಿರುತ್ತದೆ.
ದಕ್ಷಿಣದ ತಂಬೂರಿಗಳನ್ನು ಹಲಸಿನ ಮರದಿಂದ ಮಾಡುತ್ತಾರೆ ಮಾಟವಾದ
ಕೊಡಗಳನ್ನು ತಯಾರಿಸಿ ಕೆತ್ತನೆಯ ಕೆಲಸವುಳ್ಳ ದಂತದ ಪಟ್ಟಿಗಳಿಂದ ಅಲಂಕರಿಸು
ತ್ತಾರೆ ಮೈಸೂರು, ತಂಜಾವೂರು ಮತ್ತು ತಿರುವನಂತಪುರವು ಇಂತಹ
ತಂಬೂರಿಗಳಿಗೆ ಪ್ರಸಿದ್ಧ
 
ತಂತೀವಾದಗಳು ತತ ಅಥವಾ ತಂತೀವಾದ್ಯಗಳನ್ನು ಮೂರು ವಿಧವಾಗಿ
 
ವಿಂಗಡಣೆ ಮಾಡಲಾಗಿದೆ
 
(೧) ತಂತಿಗಳನ್ನು ಮಾಟುವುದರಿಂದ ನಾದೋತ್ಪತ್ತಿಯಾಗುವ ವಾದ್ಯಗಳು.
ಉದಾ, ವೀಣೆ, ರುದ್ರ ವೀಣೆ, ಸಿತಾರ್, ಸ್ವರಬತ್, ಸಾರೋಡ್, ನಂದುನಿ,
ಗಿಟಾರ್, ಶ್ರುತಿವಾದ್ಯಗಳಾದ ಏಕ್ತಾರ್ ಮತ್ತು ತಂಬೂರಿ ಈ ಗುಂಪಿಗೆ ಸೇರಿವೆ.
(೨) ಕಮಾನಿನಿಂದ ನುಡಿಯುವ ವಾದ್ಯಗಳು. ಉದಾ. ಪಿಟೀಲು, ಸಾರಂಗಿ,
ದಿಬ್ರುಬ, ಬಾಲಸರಸ್ವತಿ ಮತ್ತು ಎಸ್ಪಾಜ್ ಕಮಾನು ಅಥವಾ ಬೇರೆ ಉಜ್ಜುವ
ವಸ್ತುಗಳಿಂದ ತಂತಿಗಳು ಕಂಪಿಸಲ್ಪಟ್ಟು ಧ್ವನಿಕೊಡುವ ವಾದ್ಯಗಳು ಎರಡು ಬಗೆ.
 
(a) ಗೋಟುವಾದ್ಯದಂತೆ ಒಂದು ಮರದ ತುಂಡಿನಿಂದ ನುಡಿಸಲ್ಪಡುವ
ವಾದ್ಯಗಳು, ಉದಾ. ಬಾಲಕೋಕಿಲ, ಬುಲ್‌ಬುಲ್ ತರಂಗ್,