This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ರಾಮದಾಸ್, ತುಕಾರಾಂ, ನಾಮದೇವ್, ಏಕನಾಥ ಮುಂತಾದ ಸಂತರ ಭಕ್ತಿ

ಪಂಥದ ಪ್ರಚಾರಕರೂ ವಿದ್ವಾಂಸರೂ ಆಗಿದ್ದರು. ಇವರ ಕಧಾಶ್ರವಣದಲ್ಲಿ ದಿಂಡಿ,

ಓವಿ, ಅಭಂಗ, ಲಾವಣಿ, ಧ್ರುಪದ್ ಮತ್ತು ತುಮ್ರಗಳನ್ನೂ ವಿವಿಧ ರೀತಿಯ ಸಂಗೀತ

ರಚನೆಗಳನ್ನೂ ಕಲಾತ್ಮಕವಾಗಿ ಆಕರ್ಷಕವಾಗಿ ಬಳಸುತ್ತಿದ್ದರು. ಇವರ ಕಥಾ

ಕಾಲಕ್ಷೇಪ ತಂತ್ರವು ತಂಜಾವೂರಿನ ವಿದ್ಯಾವಂತ ಸಮಾಜದ ಮೇಲೆ ಅಪಾರ

ಪರಿಣಾಮ ಬೀರಿತು. ತಂಜಾವೂರಿನ ನಿವೃತ್ತ ಮಂತ್ರಿಯೂ ವಿದ್ವಾಂಸರೂ

ಕಲಾಪೋಷಕರೂ ದ್ದ ಪೆರಿಯಸ್ವಾಮಿಶಾಸ್ತ್ರಿ ಅಥವಾ ಪೆರಿಯಣ್ಣ ಎಂಬುವರು

ಮಹಾರಾಷ್ಟ್ರ ಪದ್ಧತಿಯ ಹರಿಕಧಾ ಕೌಶಲ್ಯದ ಮುಖ್ಯಾಂಶಗಳನ್ನು ಅಳವಡಿಸಿ

ದಕ್ಷಿಣದ ಶೈಲಿಯನ್ನು ರೂಪಿಸಬೇಕೆಂಬ ಹಂಬಲವುಳ್ಳವರಾಗಿದ್ದರು. ದಿನವೂ ಹರಿ

ಕಧೆಗೆ ಬರುತ್ತಿದ್ದ ಹದಿನಾಲ್ಕು ವರ್ಷದ ಬಾಲಕ ಕೃಷ್ಣ ಭಾಗವತರ ಮೇಲೆ ಅವರ

ದೃಷ್ಟಿ ಬಿದ್ದಿತು ಬಾಲಕನನ್ನು ತನ್ನ ಆಶ್ರಯಕ್ಕೆ ತೆಗೆದುಕೊಂಡು ಅವನಿಗೆ ಸಂಗೀತ,

ನೃತ್ಯ ತಮಿಳು, ಸಂಸ್ಕೃತ, ತೆಲುಗು, ಕನ್ನಡ, ಮರಾಠಿ ಮತ್ತು ಹಿಂದಿ ಇದಲ್ಲದೆ

ವ್ಯಾಯಾಮದಲ್ಲಿ ಆರು ವರ್ಷಗಳ ಕಾಲ ಶಿಕ್ಷಣ ಕೊಡಿಸಿದರು ಸಂಗೀತವನ್ನೂ

ತ್ಯಾಗರಾಜರ ಕೃತಿಗಳನ್ನೂ
ರಲ್ಲಿ ಕಲಿತರು.

ರಲ್ಲಿ ಕಲಿತರು.
ರಾಧಾ ಕಲ್ಯಾಣಂ.
 

ತ್ಯಾಗರಾಜರ ಶಿಷ್ಯರಾದ ತಿಸ್ಟಾನಂ ರಾಮಯ್ಯಂಗಾರ್

೧೮೭೧ ರಲ್ಲಿ ತಮಿಳಿನಲ್ಲಿ ಇವರು ನಡೆಸಿದ ಪ್ರಥಮ ಕಥಾಕಾಲಕ್ಷೇಪ

ಈ ರೀತಿ ಕಥಾಕಾಲಕ್ಷೇಪದಲ್ಲಿ ಕ್ರಾಂತಿ ಪ್ರಾರಂಭವಾಯಿತು.

ಕೃಷ್ಣ ಭಾಗವತರು ಉತ್ತರ ಮತ್ತು ದಕ್ಷಿಣದ ಶೈಲಿಗಳನ್ನು ತಮ್ಮ ಕಥಾಕಾಲ

ಕ್ಷೇಪದಲ್ಲಿ ಸಮ್ಮೇಳನಗೊಳಿಸಿದರು. ಇವುಗಳಲ್ಲಿ ಭಾವ ಮತ್ತು ರಸ ತುಂಬಿರುತ್ತಿತ್ತು.

ಆದ್ದರಿಂದ ಶೋತೃಗಳಿಗೆ ಕಥಾಲೋಕದಲ್ಲಿ ವಿಹರಿಸುತ್ತಿರುವಂತೆ ಅನುಭವವಾಗುತ್ತಿತ್ತು.

ತತ್ಕಾರಣ ಪಂಡಿತಪಾಮರರಿಗೆ ಆಕರ್ಷಣೀಯವಾಗಿತ್ತು. ಕಥೆಯಲ್ಲಿ ಬರುವ

ಘಟನೆಯನ್ನು ಬಳಸಿಕೊಂಡು ಜತಿಗಳಿಗೆ ನರ್ತನ ಮಾಡುತ್ತಿದ್ದರು. ಇವರ ಸಂಗೀತ

ದಲ್ಲಿ ಶ್ರುತಿ ಶುದ್ಧತೆ ಎದ್ದು ಕಾಣುತ್ತಿತ್ತು. ಕಾಲಿನ ಗೆಜ್ಜೆಗಳ ಕಿಣಿಕಿಣಿಯು

ಶ್ರುತಿಗೆ ಸರಿಯಾಗಿರುತ್ತಿತ್ತು. ತಾಳವೂ ಸಹ ಆಧಾರ ಶ್ರುತಿಗೆ ಸರಿಯಾಗಿರುತ್ತಿತ್ತು.

ಆದ್ದರಿಂದ ಇವರ ಗಾಯನಕ್ಕೆ ಮಾರು ಹೋಗಿ ಮಹಾವೈದ್ಯನಾಥ ಅಯ್ಯರ್ ಮುಂತಾದ

ಹಿರಿಯ ವಿದ್ವಾಂಸರು ಪ್ರಶಂಸೆ ಮಾಡಿದರು ಆಗಿನ ಕಾಲದಲ್ಲಿ ಎಲ್ಲೆಲ್ಲೂ ಇವರ ಕಥಾ

ಕಾಲಕ್ಷೇಪಕ್ಕೆ ಬೇಡಿಕೆಯಿತ್ತು. ಇವರಿಗೆ ಸಂದ ಗೌರವ, ಸನ್ಮಾನಗಳೂ ಅಪಾರ.

ತಂಜಾವೂರು ಪಂಚಾಪಕೇಶ ಭಾಗವತರು ಮತ್ತು ಮರುದಪ್ಪ ಇವರ ಸಹಗಾಯಕ

ರಾಗಿದ್ದರು. ಕೃಷ್ಣ ಭಾಗವತರು ತೇಜಸ್ವಿ ಹಾಗೂ ಆಕರ್ಷಕ ವ್ಯಕ್ತಿಯಾಗಿದ್ದರು.
 

 
ತಂಜಾವೂರು ಸೋದರ ಚತುಷ್ಟ ಯ-
ಚಿನ್ನಯ್ಯ, ಪೊನ್ನಯ್ಯ,

ವಡಿವೇಲು ಮತ್ತು ಶಿವಾನಂದಂ ಎಂಬ ನಾಲ್ವರು ಸಹೋದರರು ಪ್ರಸಿದ್ಧ ಸಂಗೀತ

ವಿದ್ವಾಂಸರೂ, ನಾಟ್ಯಾಚಾರ್ಯರೂ ಆಗಿದ್ದರು. ತಂಜಾವೂರಿನ ದೇವಾಲಯದಲ್ಲಿ

ಸಂಗೀತ ಮತ್ತು ನಾಟ್ಯವಿದ್ವಾಂಸರಾಗಿದ್ದರು ಮತ್ತು ಮುತ್ತು ಸ್ವಾಮಿದೀಕ್ಷಿತರ ಶಿಷ್ಯ
 
೫೦೧