This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ಸಾಮಾನ್ಯ ಮಕ್ಕಳಂತೆ ಅಳದೆ ಮಗುವು ರಾಮನಾಮವನ್ನು ಉಚ್ಚರಿಸಿತು. ಇದನ್ನು

ಅಪಶಕುನವೆಂದು ಭಾವಿಸಿದ ತಂದೆತಾಯಿ ಮಗುವನ್ನು ತ್ಯಜಿಸಿಬಿಟ್ಟರು. ಮಗ ವನ್ನು

ಕೆಲವು ಕಾಲ ಮುನಿಯಾ ಎಂಬ ದಾಸಿ ಸಾಕಿದಳು. ಅವಳ ಮರಣಾನಂತರ ಕಾಶಿಗೆ

ಹೋಗಿ ಬಾಬಾನರಹರಿದಾಸರ ಆಶ್ರಯದಲ್ಲಿದ್ದು ವಿದ್ಯಾಭ್ಯಾಸವನ್ನು ಆರಂಭಿಸಿ,

ನಂತರ ಆಗಿನ ಪ್ರಸಿದ್ಧ ಪಂಡಿತರಾಗಿದ್ದ ಶೇಷ ಸನಾತನರ ಶಿಷ್ಯನಾಗಿ ವೇದ, ವೇದಾಂತ,

ಪುರಾಣ, ಶಾಸ್ತ್ರ, ಕಾವ್ಯಗಳ ಅಧ್ಯಯನ ಮಾಡಿ ಪಂಡಿತನಾಗಿ ಬಳಿಕ ತಮ್ಮ
 
ಊರಿಗೆ
 
ತೆರಳಿ ದೀನಬಂಧು ಪಾಠಕರ ಮಗಳಾದ ರತ್ನಾವಳಿಯನ್ನು ವಿವಾಹವಾದರು. ಇವರಿಗೆ

ಪತ್ನಿ ಯೆಂದರೆ ಪಂಚಪ್ರಾಣ ಇವರ ಗೃಹಸ್ಥ ಜೀವನ ಹೆಚ್ಚು ಕಾಲ ನಡೆಯಲಿಲ್ಲ.

ತೌರುಮನೆಗೆ ಹೋದ ಪತ್ನಿಯನ್ನು ಬಿಟ್ಟಿರಲಾರದೆ ಮಧ್ಯರಾತ್ರಿಯಲ್ಲಿ ಮಳೆಯಲ್ಲಿ

ನೆನೆದುಕೊಂಡು ಮಾವನ ಮನೆಗೆ ಹೋದರು

ಪತ್ನಿ ಯು ನಾಚಿಕೆಯಿಂದ ಈ ನನ್ನ

ಶರೀರವನ್ನು ಪ್ರೀತಿಸುವ ಬದಲು ನೀವು ಶ್ರೀರಾಮನನ್ನು ಪ್ರೀತಿಸಿದ್ದರೆ ಭವಭೀತಿಯಿಂದ

ಪಾರಾಗುತ್ತಿದ್ದೀರಿ ಎಂದು ಹೇಳಿದಳು. ಈ ಮಾತು ಅವರ ಮನಸ್ಸಿಗೆ ನಾಟಿ, ವೈರಾಗ್ಯ

ಉಂಟಾಗಿ ತಕ್ಷಣವೇ ಕಾಶಿಗೆ ಹೋಗಿ ವಿರಕ್ತರಾದರು ಎಂಬ ಕತೆ ಪ್ರಚಲಿತವಾಗಿದೆ

ಅಲ್ಲಿಂದ ಅಯೋಧ್ಯೆ, ಬೃಂದಾವನ, ಪುರಿ, ರಾಮೇಶ್ವರ, ದ್ವಾರಕಾ, ಬದರಿ ಕ್ಷೇತ್ರ

ಗಳನ್ನು ಸಂದರ್ಶಿಸಿ ಅನಂತರ ಕೆಲವು ಕಾಲ ಕಾಶಿ ಮತ್ತು ಅಯೋಧ್ಯೆಯಲ್ಲಿದ್ದು ಭಕ್ತಿ

ಮತ್ತು ಕಾವ್ಯರಚನೆಯಲ್ಲಿ ನಿರತರಾದರು ಆಂಜನೇಯನ ದರ್ಶನವನ್ನು ಪಡೆದು

ಅವನ ಮೂಲಕ ಮೂರುಸಲ ಶ್ರೀರಾಮನ ದರ್ಶನ ಪಡೆದರು.

ವರ್ಷಗಳ ಕಾಲದ ಜೀವಮಾನದಲ್ಲಿ ಕಬೀರ್, ರಾಮ್‌ದಾಸ್

ಸತ್ಸಂಗವನ್ನು ಪಡೆದಿದ್ದರು. ಇವರ ಮೊದಲಿನ ಹೆಸರು ರಾಮಬೋಲಾ,

ತುಳಸೀದಾಸರು ೩೭ ಕೃತಿಗಳನ್ನು ರಚಿಸಿದರೆಂದು ಪ್ರತೀತಿ.

ದೋಹಾವಳೀ, ಗೀತಾವಳೀ, ಕೃಷ್ಣ ಗೀತಾವಳಿ, ಜಾನಕೀಮಂಗಳ, ವಿನಯಪತ್ರಿಕಾ

ಮುಂತಾದುವು ಪ್ರಸಿದ್ಧವಾದುವು. ಎಲ್ಲದಕ್ಕಿಂತ ಗೋಸ್ವಾಮಿ ತುಳಸೀದಾಸ್

ರಾಮಾಯಣವೆಂದು ಪ್ರಸಿದ್ಧವಾಗಿರುವ ರಾಮಚರಿತಮಾನಸವು ಅತ್ಯಂತ ಪ್ರಸಿದ್ಧ

ವಾದುದು ಇದೊಂದು ಮಹಾಕಾವ್ಯ ತುಳಸೀದಾಸರು ಪ್ರಥಮತಃ ಭಕ್ತರು,

ಅನಂತರ ಕವಿ. ಅವರ ಆರಾಧ್ಯದೇವರು ಶ್ರೀರಾಮ. ರಾಮನೇ ಪರಮಾತ್ಮ

ತುಳಸೀದಾಸರ ಪದ್ಯಗಳನ್ನು ನಾವು ಸಂಗೀತಕಚೇರಿಯಲ್ಲಿ ಕೇಳಬಹುದು.

 
ತೂರ್ಯ-
ಮಹಾಕಾವ್ಯವಾದ
 
ಇವರ ೧೨೫
 
ಮುಂತಾದವರ
 

ಇವುಗಳಲ್ಲಿ
 
ರಾಮಾ ಯ
 
೪೯೭
 
ರಾಮಾ ಯಣ
ದ ಕಾಲದಲ್ಲಿ ವಾದ್ಯ

ಸಮೂಹಕ್ಕೆ ತೂರ್ಯ ಎಂಬ ಸಾಮಾನ್ಯ ಸಂಜ್ಞೆ ಇದ್ದಿತು ಅದರಲ್ಲಿ ಶಂಖ,

ದುಂದುಭಿ, ಸುಘೋಷ ಮತ್ತು ವಿವಿಧ ವೇಣುವಾದ್ಯಗಳು ಸಮಾವೇಶಗೊಂಡಿದ್ದುವು.

ರಾವಣನ ಅಂತಃಪುರದಲ್ಲಿಯ ಸಂಗೀತ ಸಾಮಗ್ರಿಗಳ ವಿವರಣೆಯಲ್ಲಿ ವೀಣಾ, ವಿಪಂಚಿ,

ಮೃದಂಗ, ಮಡ್ಡು ಕ, ಪಟಹ, ಪಣವ, ಡಿಂಡಿಮ ಮತ್ತು ಆಡಂಬರ ಎಂಬ ವಾದ್ಯ