This page has not been fully proofread.

ಸಂಗೀತ ಸಾರಿಭಾಷಿಕ ಕೊ
 
ತೀರ್ಥನಾರಾಯಣ ಕೃಷ್ಣ ಲೀಲಾತರಂಗಿಣಿಯ ಕರ್ತೃವಾದ ಸ್ವಾಮಿ
ನಾರಾಯಣ ತೀರ್ಥರನ್ನು ಹೀಗೆ ಹೇಳುವುದುಂಟು (ನೋಡಿ : ಸ್ವಾಮಿನಾರಾಯಣ
ತೀರ್ಥ)
 
೪೯೪
 
ತೀವ್ರವಾಹಿನಿ-ಈ ರಾಗವು ೪೬ನೆ ಮೇಳಕರ್ತ ಷಧ ಮಾರ್ಗಿಣಿಯ
ಒಂದು ಜನ್ಯರಾಗ.
 
ಸ ರಿ ಗ ಮ ಪ ದ
 
ಸ ನಿ ದ ಪ ಮ ಗ ರಿ ಗ ಮ ರಿ ಸ
 
ತುಕಾರಾಮ್ (೧೫೬೮-೧೬೫೦) ಸಂತ ತುಕಾರಾಮ್ ಮಹಾರಾಷ್ಟ್ರದ
ಪ್ರಸಿದ್ಧ ಹರಿದಾಸರು.
ಜ್ಞಾನದೇವ ಮತ್ತು ಇತರ ಸಂತರಂತೆಯೇ ಇವರು ಜನ್ಮತಃ
ಸಂತರು. ಶೂದ್ರ ಕುಟು೦ಬ ಒಂದರಲ್ಲಿ ಜನಿಸಿ, ಬಡತನ, ಕಷ್ಟ ಇತ್ಯಾದಿಗಳೆಲ್ಲವನ್ನೂ
ಅನುಭವಿಸಿದರು. ಇವರ ಜೀವನವು ಮಾನವನು ದೈವತ್ವವನ್ನು ಪಡೆದ ಸಿದ್ಧಿಯ
ಪತೀಕ, ಸ್ವಪ್ನದಲ್ಲಿ ಇವರಿಗಿಂತ ೩೦೦ ವರ್ಷಗಳ ಹಿಂದೆ ಇದ್ದ ಶ್ರೀಕೃಷ್ಣ ಚೈತನ್ಯರಿಂದ
ರಾಮ ಕೃಷ್ಣ ಹರಿ ಮಂತ್ರದ ಉಪದೇಶವನ್ನು ಪಡೆದರು. ಭಕ್ತಿ ಮಾರ್ಗದಲ್ಲಿ
ಮುಂದುವರಿದು ಪಂಡರಪುರ ವಿಠಲನ ಭಕ್ತನಾಗಿ ಸಾಕ್ಷಾತ್ಕಾರ ಪಡೆದರು.
ಸಮಾಜೋದ್ಧಾರಕ್ಕೆ ಕಂಕಣ ಕಟ್ಟಿ ನಿಂತರು. ಭಗವನ್ನಾಮ ಸಂಕೀರ್ತನವನ್ನು
ಮನೆಮನೆಗೆ ಸಾರಿದರು. ತಮ್ಮ ಭೋಧನೆಗಳನ್ನು ಅಭಂಗಗಳ ಮೂಲಕ
ಹಾಡಿದರು ಅಂತರಂಗಶುದ್ಧಿಯನ್ನು ಬೋಧಿಸಿ, ಬಹಿರಾಡಂಬರ, ಕರ್ಮಗಳನ್ನು
ಇವರ ಅಭಂಗಗಳು ಬಹಳ ಜನಪ್ರಿಯವಾಗಿವೆ. ಸಂಗೀತ ಕಚೇರಿ
ಗಳಲ್ಲಿ ಒಂದೊಂದು ಅಭಂಗವನ್ನು ಹಾಡುವ ರೂಢಿಯಿದೆ.
 
ಖಂಡಿಸಿದರು.
 
ತುಣುಣಿ- ಈ ವಾದ್ಯವನ್ನು ತತ್ವಗಾನ ಮಾಡುವ ಬೈರಾಗಿಗಳೂ
ಭಿಕ್ಷುಕರೂ, ಜಾನಪದ ಗೀತೆಗಳನ್ನು ಹಾಡುವವರು ಏಕನಾದದಂತೆ ಶ್ರುತಿವಾದ್ಯವಾಗಿ
ಉಪಯೋಗಿಸುತ್ತಾರೆ. ಕೊಳವೆಯಾಕಾರದಲ್ಲಿ ಮರವನ್ನು ಕೊರೆದು ಹೊಳವಿನ
ಒಂದು ಮುಖಕ್ಕೆ ಚರ್ಮದ ಮುಚ್ಚಳಿಕೆ ಹಾಕಿ, ಈ ಮುಚ್ಚಳಿಕೆಯ ಕೇಂದ್ರದಲ್ಲಿ
ಒಂದು ಸಣ್ಣ ರಂಧ್ರ ಮಾಡಲಾಗಿರುತ್ತದೆ. ಈ ರಂಧ್ರದ ಹೊರಭಾಗದಲ್ಲಿ
ಮುಚ್ಚಳಿಕೆಯ ಮೇಲೆ ಒಂದು ರಂಧ್ರವಿರುವ ಲೋಹದ ತಗಡನ್ನು ಅಂಟಿಸಲಾಗಿದೆ.
ಈ ಎರಡು ರಂಧ್ರಗಳೂ ಏಕಕೇಂದ್ರೀಯವಾಗಿರುತ್ತವೆ. ಹೊಳವಿನ ಹೊರಮೈ ಗೆ ಒಂದು
ತುಂಡು ಬಿದಿರು ಸೇರಿಸಲ್ಪಟ್ಟು, ಈ ತುಂಡಿನ ಬಿಡಿ ತುದಿಯಲ್ಲಿ ಒಂದು ಬಿರಡೆಯನ್ನು
ಅಳವಡಿಸಲಾಗಿದೆ. ಮುಚ್ಚಳಿಕೆಯ ಹೊರಭಾಗದಲ್ಲಿ ನಾಣ್ಯದ ಅಥವಾ ಲೋಹದ
ತುಂಡಿನ ಹೊರಗೆ ಒಂದು ಮೊಳೆ ಅಥವಾ ಮರದ ಸಣ್ಣ ತುಂಡಿಗೆ ಉಕ್ಕಿನತಂತಿ
ಬಿಗಿಯಲ್ಪಟ್ಟು, ತಂತಿ, ಲೋಹದ ತಗಡು ಮತ್ತು ಮುಚ್ಚಳಿಕೆಯ ರಂಧ್ರಗಳಲ್ಲಿ ತೂರಿ
ಬಂದು ಬಿದಿರು ಕೋಲಿನ ತುದಿಯಲ್ಲಿರುವ ಬಿರಡೆಗೆ ಕಟ್ಟಲ್ಪಟ್ಟಿದೆ. ಬಿರಡೆಯನ್ನು