2023-06-28 06:39:39 by jayusudindra
This page has been fully proofread once and needs a second look.
ಅರುಟುರಿ-
ಪುರಾತನ ತಮಿಳು ಸಂಗೀತದ ರಾಗಗಳಲ್ಲಿ ಒಂದಾದ ಕುರಿಂಜಿ
ಇದು ವಿಂಗಲಾಂಡೈನಲ್ಲಿ ಉಕ್ತವಾಗಿದೆ.
ಅರೈಯರ್
ದಕ್ಷಿಣ ಭಾರತದ ವೈಷ್ಣವ ದೇವಾಲಯಗಳಲ್ಲಿ ನಾಟ್ಯವಾಡುವ
ಪುರೋಹಿತವರ್ಗದವರಿಗೆ ಅರೈಯರ್ ಎಂದು ಹೆಸರು. ಉತ್ಸವ ಸಂದರ್ಭಗಳಲ್ಲಿ
ನಾಟ್ಯದ ಮೂಲಕ ಕೃಷ್ಣಲೀಲೆಯನ್ನು ಇವರು ಅಭಿನಯಿಸುತ್ತಾರೆ
ಅರೈಯರ್‌ನಟನ
ಇದು ಶ್ರೀರಂಗ ಮತ್ತು ಇತರ ಸ್ಥಳಗಳಲ್ಲಿರುವ ದಕ್ಷಿಣ
ಭಾರತದ ವೈಷ್ಣವ ದೇವಾಲಯಗಳಲ್ಲಿ ನಡೆಯುವ ನಾಟ್ಯಸೇವೆ. ಶ್ರೀರಂಗದ
ರಂಗನಾಧಸ್ವಾಮಿ ದೇವಾಲಯದಲ್ಲಿ ಡಿಸೆಂಬರ್-ಜನವರಿ ತಿಂಗಳಲ್ಲಿ ಈ ನಾಟ್ಯವನ್ನು
ನೋಡಬಹುದು.
೪೪
ಯಾಳ್,
ಅರಂಗ್ರೇಟಂ
ಹಲವು ವರ್ಷಗಳ ಕಾಲ ಶಿಕ್ಷಣವನ್ನು ಪಡೆದು
ಪರಿಣತಿಯನ್ನು ಹೊಂದಿದ ಗಾಯಕ, ನಟ ಅಧವಾ ನಾಟ್ಯಪಟು ವಿದ್ವಾಂಸರ ಸಭೆಯ
ಮುಂದೆ ಪ್ರಥನು ಪ್ರದರ್ಶನ ನೀಡುವುದಕ್ಕೆ ತಮಿಳಿನಲ್ಲಿ ಅರಂಗೇಟ್ರಂ ಎಂದು
ಹೆಸರು.
ಅಲಸೂರು ಕೃಷ್ಣಯ್ಯರ್
ಸಂಗೀತದ ತ್ರಿಮೂರ್ತಿಗಳಲ್ಲೊಬ್ಬರಾದ
ಶ್ಯಾಮಾಶಾಸ್ತ್ರಿಗಳ ಶಿಷ್ಯರಲ್ಲಿ ಒಬ್ಬರು ಅಲಸೂರು ಕೃಷ್ಣಯ್ಯರ್
ಇವರು
ಮೈಸೂರಿನ ಆಸ್ಥಾನ ವಿದ್ವಾಂಸರಾಗಿದ್ದರು. ಕಷ್ಟವಾದ ಪಲ್ಲವಿಗಳನ್ನು
ಹಾಡುವುದರಲ್ಲಿ ನಿಷ್ಣಾತರಾಗಿದ್ದರು.
ಅಲಕವರಾಳಿ
ಈ ರಾಗವು ೨೮ನೆಯ ಮೇಳಕರ್ತ ಹರಿಕಾಂಭೋಜಿಯ
ಒಂದು ಜನ್ಯರಾಗ.
ಇದಕ್ಕೆ ಅಲಕಾವಳಿ ಎಂದೂ ಹೆಸರಿದೆ.
ಆ : ಸ ರಿ ಮ ಪ ದ ಸ
ಅ : ಸ ನಿ ದ ಪ ಮ ಗ ರಿ ಗ ಸ
ಅಲಕೋಜ
ಇದೊಂದು ಗ್ರಾಮಾಣ ಸುಷಿರವಾದ್ಯ. ಇದರಲ್ಲಿ ಒಂದು
ಸ್ವರನಾಡಿ ಮತ್ತು ಒಂದು ಶ್ರುತಿನಾಡಿ ಇದೆ. ಇದನ್ನು ಗ್ರಾಮದ ಉತ್ಸವಗಳಲ್ಲಿ
ನುಡಿಸುತ್ತಾರೆ
ಅಳಗನಂಬಿಪಿಳ್ಳೆ
ಇವರು ೨೦ನೆ ಶತಮಾನದ ಪೂರ್ವಾರ್ಧದಲ್ಲಿ ಬಹು
ಪ್ರಸಿದ್ಧರಾಗಿದ್ದ ಮೃದಂಗ ವಿದ್ವಾಂಸರು. ತಮಿಳು ನಾಡಿನ ಕುಂಭ ಕೋಣದವರು.
ಇವರ ನುಡಿಕಾರವು ಖಚಿತವಾಗಿ, ಕಲಾತ್ಮಕವಾಗಿ ಮತ್ತು ಹಿತವಾಗಿ, ಮಧುರ
ವಾಗಿತ್ತು. ಇವರು ಬಹಳ ಶ್ರೇಷ್ಠ ಪಕ್ಕವಾದ್ಯ ವಿದ್ವಾಂಸರಾಗಿದ್ದರು.
ಅಲಪದ್ಮ
ಇದು ಭರತನಾಟ್ಯದ
ಅಸಂಯುತ ಹಸ್ತ
ವಿರಳವಾದ
ಅದು ಅಲಪದ್ಮಹಸ್ತ.
ಹಸ್ತಭೇದಗಳಲ್ಲಿ ಒಂದು ಬಗೆಯ
ಕಿರುಬೆರಳು ಮೊದಲಾದುವು ಆವರ್ತಿತವಾದರೆ
ಅರಳಿದ ಕಮಲ, ಬೇಲ ಮುಂತಾದ ಹಣ್ಣು, ತಿರುಗುವುದು,
ಸ್ತನ, ವಿರಹ, ಕನ್ನಡಿ, ಪೂರ್ಣಚಂದ್ರ, ಸುಂದರವಾದ ವಸ್ತು, ತುರುಬು, ಚಂದ್ರಶಾಲೆ,