This page has not been fully proofread.

ಬಿನ್ನಹ
 
ಸಂಗೀತವೆಂಬುದು ಲಲಿತಕಲೆಗಳಲ್ಲಿ ಶ್ರೇಷ್ಠವಾದ, ಎಲ್ಲರಿಗೂ ಆಹ್ಲಾದಕರವಾದ
ವಿದ್ಯೆ, ಇದು ಐಹಿಕ ಮತ್ತು ಆಮುಷ್ಟಿಕ ಆನಂದಕ್ಕೆ ಕಾರಣಭೂತವಾದುದು,
ನಾದೋಪಾಸನ
ತಪಸ್ಸಿದ್ಧಿಯಿಂದಲೂ, ದೈವಾನುಗ್ರಹದಿಂದಲೂ
ಸುಲಭವಾಗಿ
 
ರೂಪವಾದ
 
ತಿಳಿಯಲು
 
ಮೂಡಿತು.
 
ಪ್ರಾಪ್ತವಾದ ಸಂಗೀತಸುಧಾಸ್ವಾದನ ಮತ್ತು ಸ್ವರೂಪವನ್ನು
ಒಂದೇ ಗ್ರಂಧವು ದೊರಕುವುದು ದುರ್ಲಭ. ಇದು ನನ್ನ
ಮನಸ್ಸಿನಲ್ಲಿತ್ತು. ನಾನು ಸುಮಾರು ೩೫ ವರ್ಷಗಳಿಂದಲೂ ಸಂಗೀತ ಕಚೇರಿಗಳನ್ನು
ಕೇಳುತ್ತ ಬಂದಿದ್ದೇನೆ. ಅವುಗಳಿಗೆ ಸಂಬಂಧಿಸಿದಂತೆ ನನ್ನ ಹಲವು ಸ್ನೇಹಿತರು ಆಗಾಗ್ಗೆ
ಪ್ರಶ್ನೆಗಳನ್ನು ಕೇಳುತ್ತಿದ್ದರು. ಸಂಗೀತ ಕಲಾ ಪ್ರೇಮಿಗಳಿಗೆ ಸುಲಭವಾಗಿ
ಅರ್ಧವಾಗುವ ಒಂದು ಕೋಶವನ್ನು ರಚಿಸಬೇಕೆಂಬ ಅಭಿಲಾಷೆ
ಸಂಗೀತವನ್ನು ಕುರಿತು ಮೊದಲು ನನಗೆ ಪ್ರೋತ್ಸಾಹವಿತ್ತವರು ನನ್ನ ಸೌಭಾಗ್ಯ
ವತಿಯ ಗುರುವಾದ ಸಂಗೀತ ಭೂಷಣ ಶ್ರೀ ಎಂ. ಎ. ನರಸಿಂಹಾಚಾರ್ಯರು.
ತರುವಾಯ ಪ್ರೋತ್ಸಾಹಿಸಿ ಪುಸ್ತಕವನ್ನು ಬರೆಸಿದ ಹಿರಿಯ ಮಿತ್ರರಾದ
ಪ್ರೊ. ವಿ. ರಾಮರತ್ನಂರವರು, ಮೈಸೂರು ವಿಶ್ವವಿದ್ಯಾನಿಲಯದ ಲಲಿತ ಕಲೆಗಳ
ಕಾಲೇಜಿನ ಪ್ರಧಾನಾಚಾರ್ಯರಾಗಿದ್ದಾಗಲೇ ಮದ್ರಾಸಿನ ಪ್ರೊ. ಪಿ. ಸಾಂಬಮೂರ್ತಿ
ಯವರ ಆಂಗ್ಲ ಭಾಷೆಯ ದಕ್ಷಿಣಾದಿ ಸಂಗೀತ ಕೋಶದಂತೆ ಕನ್ನಡದಲ್ಲಿ ಸಮಗ್ರವಾದ
ಒಂದು ಸಂಗೀತಕೋಶವನ್ನು ರಚಿಸಬೇಕೆಂದು ಆಗ್ರಹಪಡಿಸಿದರು. ಚಿಂತೆಯ
ಸುಮಾರು 6-7 ವರ್ಷಗಳ ಕಾಲ ವಿಷಯ ಸಂಗ್ರಹಣೆ ಮತ್ತು ಗ್ರಂಧರಚನೆಯಲ್ಲಿ
ತೊಡಗಿದೆ. ಪ್ರಕಟಿತ ಮತ್ತು ಅಪ್ರಕಟಿತ ಗ್ರಂಥಗಳು, ಹಲವಾರು ಲೇಖನಗಳು,
ಚರಿತ್ರೆಗಳು, ಶಾಸನಗಳು ಮುಂತಾದ ಹಲವು ಮೂಲಗಳಿಂದ ವಿಷಯ ಸಂಗ್ರಹಣೆ
ಮಾಡಿ, ಪ್ರತಿಯೊಂದು ಪಾರಿಭಾಷಿಕ ಪದ ಮತ್ತು ವಿಷಯವನ್ನು ಕುರಿತು ಸುಲಭ
ತಿಳಿಯುವ ರೀತಿಯಲ್ಲಿ ವಿವರಣೆಯನ್ನು ಕೊಡಲು ಪ್ರಯತ್ನಿಸಿದ್ದೇನೆ. ಮೇಲ್ಕಂಡ
ವಿದ್ವಾಂಸರಿಗೆ ನನ್ನ ಅನಂತನಂದನೆಗಳು.
 
ಇದರಲ್ಲಿ ಕನ್ನಡ ನಾಡಿನ ಕೊಡುಗೆಯನ್ನೂ, ಕರ್ಣಾಟಕದ ವಾಗ್ಗೇಯಕಾರರ
ಕೊಡುಗೆಯನ್ನೂ ಪೂರ್ತಿಯಾಗಿ ಕೊಡಲು ಪ್ರಯತ್ನಿಸಿ ಬೇರೆ ಪ್ರಾಂತ್ಯದವರು
ರಚಿಸಿರುವ ಕೋಶದಲ್ಲಿರುವ ಕೊರತೆಯನ್ನು ನೀಗಿಸಲು ಪ್ರಯತ್ನಿಸಿದ್ದೇನೆ.
ಸಂಗೀತದ ಪಾರಿಭಾಷಿಕ ಶಬ್ದಗಳು, ವಾಗ್ಗೇಯಕಾರರು, ಸಂಗೀತವಾದ್ಯಗಳು,
ಕೇಂದ್ರಗಳು, ಶಿಲ್ಪ, ಮೂಲಗ್ರಂಥಗಳು, ಇತಿಹಾಸ, ಭರತನಾಟ್ಯದ ಮುಖ್ಯಾಂಶಗಳು,
ಕಥಕಳಿ, ಯಕ್ಷಗಾನ, ಇತರ ನೃತ್ಯ ಪ್ರಕಾರಗಳು ಮುಂತಾದುವಲ್ಲದೆ ಹಿಂದಿನ ಖ್ಯಾತ
ಸಂಗೀತಗಾರರ ಮತ್ತು ಇಂದಿನ ಖ್ಯಾತ ಸಂಗೀತಗಾರರ
ಪರಿಚಯವನ್ನು