2023-07-05 10:48:48 by jayusudindra
This page has been fully proofread once and needs a second look.
ಪ್ರಭುಸ್ತುತಿಯನ್ನೂ, ದೇವತಾಸ್ತುತಿಯನ್ನೂ, ವಾಗ್ಗೇಯಕಾರ
ಒಳಗೊಂಡಿರುತ್ತದೆ.
೪೯೩
ಮುಖ್ಯವಾಗಿ ನೃತ್ಯಭಾಗಕ್ಕೆ ಅಳವಡಿಸಲಾದ ರಚನೆ.
ಜತಿಗಳ
ವಿನ್ಯಾಸದ ಸೌಂದರವನ್ನೂ, ತನ್ಮೂಲಕ ಶುದ್ಧ ಗೇಯರಸವನ್ನೂ ತೋರಿಸಲು
ರಚಿಸಿರುವ ಪ್ರಬಂಧ.
ಇದೊಂದು ಉತ್ಸಾಹದಿಂದ ಕೂಡಿದ ರಚನೆ ಸಂಗೀತ
ಕಚೇರಿಗಳಲ್ಲಿ ತಿಲ್ಲಾನವನ್ನು ಹಾಡುವ ವಾಡಿಕೆಯಿದೆ.
ಮೈಸೂರು ಸದಾಶಿವರಾವ್, ಸ್ವಾತಿ ತಿರುನಾಳ್ ಮಹಾರಾಜ, ಕೃಷ್ಣ
ಸ್ವಾಮಯ್ಯ, ಪೊನ್ನಯ್ಯ, ಮೇಳತ್ತೂರು ವೀರಭದ್ರಯ್ಯ, ಮಹಾವೈದ್ಯನಾಥ
ಅಯ್ಯರ್, ಪಟ್ಟಣಂ ಸುಬ್ರಹ್ಮಣ್ಯ ಅಯ್ಯರ್, ರಾಮನಾಡ್ ಶ್ರೀನಿವಾಸ
ಅಯ್ಯಂಗಾರ್, ವೀಣೆ ಶೇಷಣ್ಣ, ಮೈಸೂರು ಚಿಕ್ಕ ರಾಮಪ್ಪ, ವೀಣೆವೆಂಕಟಗಿರಿಯಪ್ಪ,
ಮುತ್ತಯ್ಯ ಭಾಗವತರು, ಪಲ್ಲವಿ ಶೇಷಯ್ಯರ್, ಕುಕ್ಕುಡಿ ಕೃಷ್ಣಯ್ಯರ್,
ಟಿ. ಕೆ. ರಂಗಾಚಾರಿ, ಬಾಲಮುರಳಿಕೃಷ್ಣ, ಲಾಲ್ಗುಡಿ ಜಯರಾಮನ್ ಮುಂತಾದವರು
ತಿಲ್ಲಾನಗಳನ್ನು ರಚಿಸಿದ್ದಾರೆ. ಮಹಾವೈದ್ಯನಾಥ ಅಯ್ಯರ್ ರಚಿಸಿರುವ ಸಿಂಹ
ನಂದನ ತಾಳದಲ್ಲಿರುವ ಕಾನಡಾರಾಗದ ಗೌರೀನಾಯಕ ಎಂಬ ತಿಲ್ಲಾನವು ಅತ್ಯಂತ
ಪ್ರಸಿದ್ಧವಾದ ಪ್ರೌಢರೀತಿಯ ತಿಲ್ಲಾನ. ಈ ತಿಲ್ಲಾನವು ೧೨೮ ಅಕ್ಷರ ಕಾಲ
ಪ್ರಮಾಣವಿರುವ ಸಿಂಹನಂದನ ತಾಳದ ಎರಡೇ ಆವರ್ತಗಳಲ್ಲಿ ರಚಿತವಾಗಿದ್ದು
ಒಂದನೆಯ ಆವರ್ತದಲ್ಲಿ ಮಾತು ಮತ್ತು ಎರಡನೆ ಆವರ್ತದಲ್ಲಿ ಜತಿಗಳನ್ನೂ
ಒಳಗೊಂಡಿದೆ. ಪಲ್ಲವಿ ಶೇಷಯ್ಯರ್‌ರವರ ವಸಂತರಾಗದ ಝುಂ ರುಂ ತರಿತ ರಂ
ಎಂಬ ತಿಲ್ಲಾನದಲ್ಲಿ ಸುಂದರವಾದ ಸಂಗತಿಗಳಿವೆ.
ಇದರ
ತಿಜ್ಞಾನದರು-
ತಿಲ್ಲಾನದರು
ತಿಲ್ಲಾನವು ದರುವಿನ ಮಾತು'ನ್ನು ಒಳಗೊಂಡಿದ್ದರೆ
ಅಂತಹದು ತಿಲ್ಲಾನದರು ಎಂಬ ರಚನೆಯಾಗುತ್ತದೆ. ಇದರ ಸಾಹಿತ್ಯದಲ್ಲಿ
ಗಾದೆಗಳೂ ಕಂಡು ಬಂದಿವೆ. ಇದಕ್ಕೆ ಮಿಶ್ರಸಂಬಂಧ' ಎಂದು ಹೆಸರು.
ಗಾನ ಕ್ರಮವು ತಿಲ್ಲಾನದಂತೆಯೇ ಇರುತ್ತದೆ. ಕೃಷ್ಣಸ್ವಾಮಿ ಅಯ್ಯರ್
ಎನ್ನುವವರು ರಚಿಸಿರುವ ನಾದಿರ್‌ದಾನಿ ತೊಂತಿರ್‌ದಾನಿ' ಎಂಬ ಸುರಟರಾಗದ
ತಿಲ್ಲಾನದರು ಬಹು ಪ್ರಸಿದ್ಧವಾಗಿದೆ.
ತಿ
ತಿಲ್ಲೈಸ್ಥಾನಂ ರಾಮಯ್ಯಂಗಾರ್
ಇವರು ತ್ಯಾಗರಾಜರ ಒಬ್ಬ ಪ್ರಮುಖ
ಶಿಷ್ಯರು. ತಮ್ಮ ಗುರುವಿನಂತೆ ಭಜನೆಗಳನ್ನು ನಡೆಸುತ್ತಾ ಯಾವಾಗಲೂ ಭಕ್ತಿ
ಯಿಂದ ಹಾಡುವುದರಲ್ಲಿ ತಲ್ಲೀನರಾಗಿರುತ್ತಿದ್ದರು. ತಿಸ್ಥಾನಂ ಪಂಜು ಭಾಗವತರು
ಮತ್ತು ನರಸಿಂಹ ಭಾಗವತರು ಇವರ ಪ್ರಮುಖ ಶಿಷ್ಯರು.
ತೀವ್ರ
ಷಡ್
ತೀವ್ರತಮಮಧ್ಯಮ
ವರಾಳಿರಾಗದ ಮಧ್ಯಮದ ಹೆಸರು.
ತೀವ್ರ