2023-07-06 11:02:40 by jayusudindra
This page has been fully proofread once and needs a second look.
ರಾಗಿದ್ದ ಶಾಸ್ತ್ರಿಗಳು ಕೃಷ್ಣ ಭಾಗವತರಂತೆ ಅವರ ಕಾಲದ ಹರಿಕಥಾ ವಿದ್ವಾಂಸರಲ್ಲಿ
ಅಗ್ರಗಣ್ಯರಾಗಿದ್ದರು.
ತಿರುವೀಯಿಮಯ
ಬಹು ಕಾಲದವರೆಗೆ ನಾಗಸ್ವರ
ವಿದ್ವಾಂಸರು ರಾಗ ಮತ್ತು ವಲ್ಲವಿ ನುಡಿಸುವ ಸಂಪ್ರದಾಯವನ್ನು ಅನುಸರಿಸುತ್ತಿದ್ದರು.
ಈ ಶತಮಾನದ ಪೂರ್ವಾರ್ಧದವರೆಗೆ ಯಾವ ವೇಳೆಗೆ ಯಾವ ರಾಗವನ್ನು ನುಡಿಸ
ಬೇಕೆಂಬ ಸಂಪ್ರದಾಯವನ್ನು ಅನುಸರಿಸುತ್ತಿದ್ದರು. ಈಗ ಇದು ಕೇವಲ ಗ್ರಂಥಸ್ಥ
ವಾಗಿದೆ. ತಿರುಪ್ಪಾಂಬಲಪುರಂ ನಟರಾಜ ಸುಂದರಂ ಸಹೋದರರು ಉಮಯಾಳು ರಂ
ಸಹೋದರರಿಂದ ತ್ಯಾಗರಾಜರ ಕೃತಿಗಳನ್ನು ಕಲಿತು ಅವುಗಳನ್ನು ನುಡಿಸುವುದರಲ್ಲಿ
ಆದ್ಯರೆನಿಸಿಕೊಂಡರು. ನಾಗೂರು ಸುಬ್ಬಯ್ಯ ಎಂಬ ಹಿರಿಯ ವಿದ್ವಾಂಸರು
ಶಿವಸುಬ್ರಹ್ಮಣ್ಯಂ ಮತ್ತು ನಟರಾಜ ಸುಂದರಂ ಎಂಬ ತರುಣ ಸಹೋದರರನ್ನು ತಮ್ಮ
ಪೋಷಣೆಗೆ ತೆಗೆದುಕೊಂಡು ನಾಗಸ್ವರ ವಾದನದಲ್ಲಿ ಕ್ರಾಂತಿ ಉಂಟು
ಮಾಡಿದರು. ನೀಡಾಮಂಗಲಂ ಮಾನಾಕ್ಷಿಸುಂದರಂ ಈ ಸಹೋದರರಿಗೆ ಲಯ ಮತ್ತು
ಸ್ವರಪ್ರಸ್ತಾರದಲ್ಲಿ ಉತ್ತಮ ಶಿಕ್ಷಣವಿತ್ತರು. ಮಾಧುರ, ಅಚ್ಚುಕಟ್ಟು, ಹಿತ
ಮಿತವಾದ ನಿರೂಪಣೆಗೆ ಈ ಸಹೋದರರ ನಾಗಸ್ವರ ವಾದನವು ಪ್ರಸಿದ್ಧವಾಗಿತ್ತು.
ತಿಲಕಪ್ರಕಾಶಿನಿ
ಈ ರಾಗವು ೬ನೆ ಮೇಳಕರ್ತ ತಾನರೂಪಿಯ ಒಂದು
ಜನ್ಯರಾಗ,
ಸ ರಿ ಗ ಮ ಪ ದ ಸ
ಸ ರಿ ಗ ಮ ಪ ದ ಸ
ಸ ನಿ ಪ ಮ ಗ ರಿ ಸ
ತಿಜ್ಞಾನ-
ತಿಲ್ಲಾನ
ಇದು ಕೈವಾಡ ಎಂಬ ಹೆಸರಿನಲ್ಲಿ ಸಾವಿರಾರು ವರ್ಷಗಳಿಗಿಂತಲೂ
ಹಿಂದಿನಿಂದ ಪ್ರಸಿದ್ಧಿ ಪಡೆದಿರುವ ಪ್ರಬಂಧ. ಇದರ ಅಪಭ್ರಂಶ ರೂಪವು ಕೈ ಪಾಟ.
ಕೈ ಪಾಟವೆಂದರೆ ಅವನದ್ಧ ವಾದ್ಯಗಳಿಂದ ಉದ್ಭವಿಸುವ ಪಾಟಾಕ್ಷರಗಳು, ತಿಲ್ಲಾನವು
ಪ
ಪ
ತಿರಿತಿಲ್ಲಾನ ಎಂಬ ದೇಶ್ಯ ಪ್ರಬಂಧದಿಂದ ಸ್ಫೂರ್ತಿಗೊಂಡು ಜನ್ಮತಾಳಿತು ಎಂದೂ,
ಇದರಲ್ಲಿ ತಿ, ಲ್ಲಾ, ನ ಎಂಬ ಅಕ್ಷರಗಳು ಪ್ರಯುಕ್ತವಾಗಿರುವುದರಿಂದ ಈ ಹೆಸರು
ಬಂದಿತೆಂದೂ, ತರಾನ ಎಂಬ ಹಿಂದೂಸ್ಥಾನಿ ಪದ್ಧತಿಯ ರಚನೆಯನ್ನು ಅನುಸರಿಸಿ
ಬಂದಿತೆಂದೂ ವಿವಿಧ ಅಭಿಪ್ರಾಯಗಳಿವೆ. ಇದು ೧೮ನೆ ಶತಮಾನದಲ್ಲಿ ತಂಜಾವೂರಿನ
ಪ್ರತಾಪಸಿಂಹ ಮಹಾರಾಜನ ಆಸ್ಥಾನ ವಿದ್ವಾಂಸನಾಗಿದ್ದ ವೀರಭದ್ರಯ್ಯನಿಂದ
ಪ್ರಥಮವಾಗಿ ರಚಿಸಲ್ಪಟ್ಟು, ತಂಜಾವೂರು ಸಹೋದರ ಚತುಷ್ಟ ಯರಿಂದ
ಭರತನಾಟ್ಯ ಕಚೇರಿಯ ಅಂಗವಾಗಿ ಪ್ರಚಾರಕ್ಕೆ ಬಂದಿತೆಂದು ಹೇಳಬಹುದು.
ತಿಲ್ಲಾನವು ಕೃತಿಯಂತೇಯೇ ಪಲ್ಲವಿ, ಅನುಪಲ್ಲವಿ, ಚರಣಗಳೆಂಬ ಮೂರು
ಖಂಡಗಳುಳ್ಳ ಪ್ರಬಂಧ. ಪಲ್ಲವಿ ಮತ್ತು ಅನುಪಲ್ಲವಿಗಳಲ್ಲಿ ಹಸ್ತ ಪಾಟಗಳಿಂದ ಆದ
ಜತಿಗಳು ನಾನಾ ರೀತಿಯಲ್ಲಿ ಅಡಕವಾಗಿರುತ್ತದೆ. ಚರಣದಲ್ಲಿ ಇಂತಹ ಜತಿಗಳೊಡನೆ