This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ಈ ದೇವಾಲಯವನ್ನು ಕಟ್ಟುವ ಕೆಲಸದ ಮೇಲ್ವಿಚಾರಣೆಯು ತಿರುವೋಟೋ
ಯೂರು ಎಸ್. ಎ. ರಾಮಸ್ವಾಮಿ ಅಯ್ಯರ ಪಾಲಿಗೆ ಬಂದಿತು. ಸಮಾಧಿಯ
ಸುತ್ತಲೂ ಕಟ್ಟಡದ ಅಡಿಪಾಯ ಹಾಕಲು ತೋಡುತ್ತಿದ್ದಾಗ ಒಂದು ಕುತೂಹಲಕರ
ವಾದ ಘಟನೆ ನಡೆಯಿತು. ಸಮಾಧಿಯ ಸುತ್ತಲೂ ಎಷ್ಟು ದೂರದವರೆಗೆ
ತೋಡಬಹುದೆಂಬುದನ್ನು ನಿರ್ಧರಿಸಲು ಅವರಿಗೆ ಸ್ಥಳದವರಿಂದ ಯಾವ ವಿಧವಾದ
ಸಲಹೆಯೂ ದೊರಕಲಿಲ್ಲ. ತಾನೇ ಧೈರ್ಯ ಮಾಡಿ, ಕೆಲಸಗಾರರಿಗೆ ತೋಡುವಂತೆ
ಹೇಳಿದರು ಆ ಸ್ಥಳವನ್ನು ನೋಡುತ್ತಿದ್ದಾಗ ಅಲ್ಲಿಂದ ಸಾಂಬ್ರಾಣಿಯ ವಾಸನೆ
ಹೊರಟತು ಇನ್ನು ಹೆಚ್ಚು ಆಳವಾಗಿ ತೋಡಬಾರದೆಂದು ತಿಳಿದು ಅಸ್ತಿಭಾರವನ್ನು
ಹಾಕಿಸಿ ಕಟ್ಟಡದ ನಿರ್ಮಾಣವನ್ನು ಆರಂಭಿಸಿದರು. ದಿವಂಗತ ಸೂಲಮಂಗಲಂ
ವೈದ್ಯನಾಥ ಭಾಗವತರು ತಮ್ಮ ಮಿತ್ರರೊಡನೆ ಒಂದು ಸಂಜೆ ಸಮಾಧಿಯ ಸವಿಾಪ
ದಲ್ಲಿ ಕಾವೇರಿಯಲ್ಲಿ ಸಂಧ್ಯಾವಂದನೆಯನ್ನು ಮಾಡುತ್ತಿದ್ದರು. ಇದ್ದಕ್ಕಿದ್ದಂತೆ
ರಾಮರಾಮ ಎಂಬ ಶಬ್ದ ಕೇಳಿಸಿತು. ಯಾವ ಕಡೆ ನೋಡಿದರೂ ಯಾರೊಬ್ಬರೂ
ಕಾಣಿಸಲಿಲ್ಲ. ಸಮಾಧಿಯಿಂದಲೇ ಆ ಶಬ್ದ ಬಂದಿತೆಂದು ಅವರು ತಿಳಿದರು
 
೪೯೦
 
ತ್ಯಾಗರಾಜರ ಆರಾಧನೋತ್ಸವವು ಇಂದು ರಾಷ್ಟ್ರೀಯ ಉತ್ಸವವಾಗಿದೆ.
ಅವರ ಸಮಾಧಿಯು ಅತ್ಯಂತ ಪವಿತ್ರವಾದ ಯಾತ್ರಾಸ್ಥಳವಾಗಿದೆ. ಸಂಗೀತಗಾರರ
ಸ್ಫೂರ್ತಿಯ ಕೇಂದ್ರ, ಸಂಗೀತಪ್ರಿಯರು ಮತ್ತು ಭಕ್ತರು ಅವರ ಜೀವಮಾನದಲ್ಲಿ
ಒಂದು ಸಲವಾದರೂ ಇಲ್ಲಿಗೆ ಹೋಗಿ ಜನ್ಮಪಾವನ ಮಾಡಿಕೊಳ್ಳಬಹುದಾದ ಪವಿತ್ರ
 
-
 
ತಿರುಮಲೆ ಶ್ರೀನಿವಾಸಾಚಾರ - ಶ್ರೀನಿವಾಸಾಚಾರರು ೧೯೨೦ರಲ್ಲಿ
ಕೋಲಾರ ಜಿಲ್ಲೆಯ ಗೌರೀಬಿದನೂರು ತಾಲ್ಲೂಕಿನ ದಾರನಾಯಕನ ಪಾಳ್ಯದಲ್ಲಿ
ಜನಿಸಿದರು. ಇವರ ತಂದೆ ಶ್ರೀನಿವಾಸ ರಂಗಾಚಾರರು ವೇದಾಧ್ಯಯನ ಸಂಪನ್ನರು
ಮತ್ತು ತಾತ ಸಂಗೀತ ಬಲ್ಲವರಾಗಿದ್ದರು. ಆರೇಳು ವರ್ಷಗಳು ವಯಸ್ಸಾಗಿದ್ದಾಗ
ಆಗ ತಾನೇ ಪ್ರಚಲಿತವಾಗುತ್ತಿದ್ದ ಗ್ರಾಮಾಫೋನ್ ರೆಕಾರ್ಡ್‌ಗಳನ್ನು ಕೇಳಿ
ಹಾಗೆಯೇ ಹಾಡುವುದನ್ನು ಕಲಿತ ಶ್ರೀನಿವಾಸಾಚಾರರು ಮಿಡಲ್ ಸ್ಕೂಲ್
ಲ್
ವಿದ್ಯಾಭ್ಯಾಸದ ನಂತರ ಬೆಂಗಳೂರಿನ ಸಂಸ್ಕೃತ ಕಾಲೇಜಿಗೆ ಸೇರಿದರು. ೧೯೩೫ರ
ವೇಳೆಗೆ ಎಲ್, ಎಸ್, ನಾರಾಯಣಸ್ವಾಮಿ ಭಾಗವತರ ಗುರುಕುಲವನ್ನು ಸೇರಿ
ಸತತವಾಗಿ ೧೨ ವರ್ಷಗಳ ಸಂಗೀತ ಶಿಕ್ಷಣವನ್ನು ಪಡೆದರು ಮೊದಲು ಗುರುವಿನ
ಸಂಗಡ ಹಾಡುತ್ತಿದ್ದು ನಂತರ ಸ್ವತಂತ್ರವಾಗಿ ಕಚೇರಿಗಾಯನ ಮಾಡಲು ತೊಡಗಿದರು.
೧೯೪೬ರಲ್ಲಿ ಗದ್ವಾಲಿನ ಆಸ್ಥಾನ ವಿದ್ವಾಂಸರಾಗಿದ್ದರು. ೧೯೫೧ರಲ್ಲಿ ಚೌಡಯ್ಯ
ನವರ ಅಯ್ಯನಾರ್ ಕಲಾಶಾಲೆಯಲ್ಲಿ ಒಂದು ವರ್ಷ ಕೆಲಸ ಮಾಡಿ ನಂತರ
ನಾರಾಯಣಸ್ವಾಮಿ ಭಾಗವತರ ವಿಜಯ ಸಂಗೀತ ಕಾಲೇಜಿನಲ್ಲಿ ಕೆಲಸ ಮಾಡಿದರು.