This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ಶತಮಾನದಲ್ಲಿ ತಿರುವಾಂಕೂರಿನ ಆಸ್ಥಾನದ ಗೌರವವನ್ನು ಪಡೆದಿದ್ದ ಕೆಲವು ಪ್ರಸಿದ್ಧ

ವಿದ್ವಾಂಸರು ಶಿವರಾಮ ಗುರುದಾಸ (ರಾಶಾಸ್ತ್ರಿ), ಪರಮೇಶ್ವರ ಭಾಗವತರು,

ಮೇರುಸ್ವಾಮಿ, ಕೊಯಮತ್ತೂರು ರಾಘವ ಅಯ್ಯರ್, ಕುಂಜರಿರಾಜ, ರಘುಪತಿ

ಭಾಗವತರು, ಲಕ್ಷಣ ಗೋಸಾಯಿ, ಕಲ್ಯಾಣ ಕೃಷ್ಣಯ್ಯರ್, ಶೆಮ್ಮಂಗುಡಿ

ಶ್ರೀನಿವಾಸ ಅಯ್ಯರ್, ಆಲತ್ತೂರು ಸಹೋದರರು.
 
೪೮೯
 

 
ತಿರುವಾಸನಲ್ಲೂರು ನಾರಾಯಣಸ್ವಾಮಿ ಅಯ್ಯರ್-
ಇವರು ತಲ
ನಾಯರ್‌ನ ಪಲ್ಲವಿ ಸೋಮು ಭಾಗವತರ ಶಿಷ್ಯರು. ೧೯ನೆ ಶತಮಾನದ ಪ್ರಖ್ಯಾತ

ಸಂಗೀತ ವಿದ್ವಾಂಸರು,
 

 
ತಿರುವೈಯಾರ್
ತಿರುವೈಯ್ಯಾರ್ ಎಂದರೆ ಐದು ನದಿಗಳೆಂದು ಅರ್ಧ

ವೆನ್ನಾರ್, ವೆಟ್ಟಾರ್, ಕುಡಮುರುಟಿ, ಕಾವೇರಿ ಮತ್ತು ಕೋಲರೂನ್ ನದಿಗಳು

ಒಂದಕ್ಕೊಂದು ಸಮಾನಾಂತರವಾಗಿ ೬ ಮೈಲಿ ದೂರದ ಪ್ರದೇಶದಲ್ಲಿ ತಮಿಳುನಾಡಿನ

ತಂಜಾವೂರು ಜಿಲ್ಲೆಯ ಈ ಸ್ಥಳದಲ್ಲಿ ಹರಿಯುತ್ತವೆ ಏಪ್ರಿಲ್ ತಿಂಗಳಿನಲ್ಲಿ

ನಡೆಯುವ ಸಪ್ತಸ್ಥಾನ ಉತ್ಸವ ಮತ್ತು ಜನವರಿ ತಿಂಗಳಲ್ಲಿ ನಡೆಯುವ ತ್ಯಾಗರಾಜ

ಉತ್ಸವಗಳಿಗೆ ತಿರುವೈಯ್ಯಾರ್ ಪ್ರಸಿದ್ಧವಾಗಿದೆ. ಪ್ರತಿ ವರ್ಷವೂ ಈ ಊರಿಗೆ

ಸುಮಾರು ೫೦ ೦೦೦ ಮಂದಿ ಯಾತ್ರಿಕರು ಬರುತ್ತಾರೆ.
 

ಶ್ರೀತ್ಯಾಗರಾಜರು ಸಿದ್ಧಿಯನ್ನು ಪಡೆದ ನಂತರ ಅವರ ದೇಹವನ್ನು ಸಕಲ

ವಿಧವಾದ ಧಾರ್ಮಿಕ ಮತ್ತು ಸಂಗೀತ ಗೌರವ ಸಹಿತ ಘಟ್ಟಕ್ಕೆ ತೆಗೆದುಕೊಂಡು

ಹೋಗಿ ಮಹಾಭಿಷೇಕವೇ ಮುಂತಾದ ವಿಧಿಗಳನ್ನು ಕಟ್ಟುನಿಟ್ಟಿನಿಂದ ಅನುಸರಿಸಿ

ಸಮಾಧಿ ಮಾಡಿದರು. ಆ ಸ್ಥಳದಲ್ಲಿ ಒಂದು ಬೃಂದಾವನವನ್ನು ಕಟ್ಟಿದರು. ತಮ್ಮ

ಮರಣಾನಂತರ ೬೦ ವರ್ಷಗಳಾದ ಮೇಲೆ ತಮ್ಮ ಹೆಸರು ಎಲ್ಲೆಲ್ಲೂ ಹರಡುವುದೆಂದು

ಜೀವಿತರಾಗಿದ್ದಾಗಲೇ ತ್ಯಾಗರಾಜರು ಹೇಳುತ್ತಿದ್ದರು. ಸಿದ್ಧಿ ಪಡೆದ ಕಾಲದಿಂದ

ಪ್ರತಿವರ್ಷವೂ ಅವರ ಉಮಯಾಳ್ಳು ರಂ ಶಿಷ್ಯರು ಮತ್ತು ಇತರರು ಪುಷ್ಯ ಬಹುಳ

ಪಂಚಮಿಯ ದಿನ ಅವರ ಸಮಾಧಿಯನ್ನು ಪೂಜಿಸಿ ನಂತರ ಮನೆಗೆ ಬಂದು

ಆರಾಧನೆಯನ್ನು ನಡೆಸುತ್ತಿದ್ದರು. ೧೯೦೭ರ ನಂತರ ಆರಾಧನೋತ್ಸವದ ನೂತನ

ಅಧ್ಯಾಯ ಆರಂಭವಾಯಿತು.

ತಿಸ್ಥಾನಂ ನರಸಿಂಹ ಭಾಗವತರು ಮತ್ತು

ಪಂಜು ಭಾಗವತರು ಪ್ರಸಿದ್ಧ ಪಿಟೀಲು ವಿದ್ವಾಂಸ ತಿರುಚಿ ಗೋವಿಂದಸ್ವಾಮಿ

ಪಿಳ್ಳೆಯವರೊಡನೆ ಸೇರಿಕೊಂಡು ಉತ್ಸವವನ್ನು ವಿಜೃಂಭಣೆಯಿಂದ ನಡೆಸಲು ಮೊದಲು

ಮಾಡಿದರು. ಬೆಂಗಳೂರು ನಾಗರತ್ನಮ್ಮನವರು ತಮ್ಮ ಸರ್ವಸ್ವವನ್ನೂ

ವಿನಿಯೋಗಿಸಿ ತ್ಯಾಗರಾಜರ ಸಮಾಧಿಯ ಮೇಲೆ ದೇವಾಲಯವನ್ನು ನಿರ್ಮಿಸಿ ಅವರ

ಕೀರ್ತಿಯನ್ನು ಗಳಿಸಿದರು. ಈ ದೇವಾಲಯವು ೧೯೨೫ರಲ್ಲಿ ನಿರ್ಮಾಣವಾಯಿತು.
 

ಅಲ್ಲಿಂದ ಮುಂದೆ ಇದು ಅಭಿವೃದ್ಧಿಯಾಗುತ್ತ ಬಂದಿದೆ.