2023-06-25 23:30:41 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ಇಂಪಾದ ಸಂಗೀತ, ಕಳಂಕವಿಲ್ಲದ ರಚನಾಕೌಶಲ್ಯ ಇವು ಪ್ರಮುಖವಾಗಿ ಕಂಡು
ಬರುತ್ತವೆ.
೪೨೮
ಸ್ವಾತಿ ತಿರುನಾಳರು (೧೮೧೩-೧೮೪೭) ಎಲ್ಲ ವಿಧವಾದ ರಚನೆಯ ಸಮಸ್ಯೆ
ಯನ್ನು ತೆಗೆದುಕೊಂಡು ಪ್ರತಿಯೊಂದು ಬಗೆಯಲ್ಲಿ ಕೃತಿಗಳನ್ನು ರಚಿಸಿದರು.
ಸೋಪಾನಗಾನ ಶೈಲಿಯನ್ನು ಮಾರ್ಪಡಿಸಿ ನೂತನ ಯುಗವನ್ನು ಆರಂಭಿಸಿದರು.
ಸ್ವರಜತಿ, ವರ್ಣ, ಕೀರ್ತನ, ಪದ, ತಿಲ್ದಾಣ, ದ್ರುಪದ್, ಥಪ್ಪ ಮುಂತಾದುವೆಲ್ಲ
ವನ್ನೂ ರಚಿಸಿದ್ದಾರೆ. ಇವರ ಮುಖ್ಯ ರಚನೆಗಳು-(೧) ನವರಾತ್ರಿ ಕೀರ್ತನ,
ನವರಾತ್ರಿ ಮಾಲಾ, (ಇವು ನವರಾತ್ರಿಯ ಒಂಭತ್ತು ದಿನಗಳೂ ಹಾಡುವ ಭಕ್ತಿ
ಕೀರ್ತನೆಗಳು)
(೨) ಗಾನ ಕೃತಿಗಳು-ಇವು ೮ ಘನರಾಗಗಳಲ್ಲಿವೆ.
(೩) ಮಧ್ಯಮ ಕಾಲದ ಕೃತಿಗಳು.
(೪) ರಾಗಮಾಲಿಕೆಗಳು,
(೫) ವರ್ಣಗಳು-ಸರಸಿಜನಾಭ, ಚಲಮೇಲ ಎಂಬುವು ಅತ್ಯಂತ ಪ್ರಸಿದ್ಧ
ವಾಗಿವೆ.
(೬) ಪದಗಳು-ಇವು ಅಭಿನಯಕ್ಕೆ ಯೋಗ್ಯವಾದುವು.
(೭) ತಿಲ್ದಾಣಗಳು.
(೮) ದ್ರುಪದ್
(೯) ಥಪ್ಪ
(೧೦) ಪ್ರಬಂಧಗಳು-ಅಜಾಮಿಳ ಮೋಕ್ಷ, ಕುಚೇಲೋಪಾಖ್ಯಾನಂ-ಇವು
ಸಂಸ್ಕೃತ, ತಮಿಳು, ತೆಲುಗು, ಮಲಯಾಳಿ, ಹಿಂದೀ ಮತ್ತು ಮರಾಠಿ ಭಾಷೆಯಲ್ಲಿವೆ.
ಸ್ವಾತಿ ತಿರುನಾಳರ ಆಸ್ಥಾನದಲ್ಲಿ ವಡಿವೇಲು, ಶಿವಾನಂದಂ, ಚಿನ್ನಯ್ಯ ಮತ್ತು
ಪೊನ್ನಯ್ಯ ಎಂಬ ನಾಲ್ಕು ಸಹೋದರರು ಪ್ರಸಿದ್ಧ
ಪ್ರಸಿದ್ಧ ವಿದ್ವಾಂಸರಾಗಿದ್ದರು.
ಪೊನ್ನಯ್ಯನವರು ಸ್ವರಜತಿ, ಪದಗಳು ಮತ್ತು ವರ್ಣಗಳನ್ನು ರಚಿಸಿದರು. ಇದೇ
ಕಾಲದಲ್ಲಿದ್ದ ಗೋವಿಂದ ಮಾರಾರ್, ಮಾಲಿಯಕ್ಕಲ್ ಕೃಷ್ಣ ಮಾರಾರ್ ಮುಂತಾದ
ವರು ರಾಜರ ಉದಾರ ಪೋಷಣೆಯಲ್ಲಿದ್ದರು.
ಸ್ವಾತಿ ತಿರುನಾಳರ ನಂತರ ಆಳಿದ
ಉತ್ತರಂ ತಿರುನಾಳ್ ಮಾರ್ತಾಂಡವರ್ಮ (೧೮೪೭-೧೮೬೦), ಆಯಿಲಂ ತಿರುನಾಳ್
ರಾಮವರ್ಮ (೧೮೬೦-೧೮೮೦) ಸಂಗೀತ ಪ್ರಿಯರಾಗಿದ್ದರು. ಪರಮೇಶ್ವರ ಭಾಗ
ವತರು ಮತ್ತು ರಾಘವ ಅಯ್ಯರ್, ವೀಣಾ ಕಲ್ಯಾಣ ಕೃಷ್ಣಯ್ಯರ್, ಪಿಟೀಲು
ಮಹದೇವ ಭಾಗವತರು, ಸೋಮಸಿ ಭಾಗವತರು ಮತ್ತು ಸೇತುರಾಮರಾವ್ ಇವರ
ಆಸ್ಥಾನ ವಿದ್ವಾಂಸರಾಗಿದ್ದರು. ಇವರ ಕಾಲದಲ್ಲಿ ಮಹಾವೈದ್ಯನಾಥ ಅಯ್ಯರ್
ಮತ್ತು ರಾಘವ ಅಯ್ಯರ್‌ರವರಿಗೆ ಸಂಗೀತ ಸ್ಪರ್ಧೆ ನಡೆಯಿತು. ಸ್ವಾತಿ ತಿರುನಾಳರ
ಕೃತಿಗಳು ಇಂದು ಭಾರತಾದ್ಯಂತ ಪ್ರಚಾರದಲ್ಲಿವೆ. ೧೯ ಮತ್ತು ೨೦ನೆ