This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ಗೀತಗೋವಿಂದದ ಪ್ರಭಾವದಿಂದ ೧೪ ಮತ್ತು ೧೫ನೆ ಶತಮಾನಗಳಲ್ಲಿ ಇಲ್ಲಿಯ

ಸಂಗೀತದಲ್ಲಿ ಮಹತ್ತರವಾದ ಬದಲಾವಣೆಯುಂಟಾಯಿತು. ಇದರ ಸಾಹಿತ್ಯ ಮತ್ತು

ಶಬ್ದ ಲಾವಣ್ಯವು ಇಲ್ಲಿಯ ಸಂಗೀತಕ್ಕೆ ಮಾದರಿಯಾಯಿತು. ಪದಗಳು ರೂಢಿಗೆ

ಬಂದವು. ಕಥಕಳಿಯ ಜನಕನೆನಿಸಿಕೊಂಡ ಕೊಟ್ಟಕ್ಕರದ ರಾಜಾ ವೀರಕೇರಳ

ವರ್ಮನು (೧೭ನೆ ಶ) ಈ ಬಗೆಯ ರಚನೆಯ ಆದ್ಯ ಕರ್ತನು. ಇವನು ಗೀತ

ಗೋವಿಂದವನ್ನು ಮಾದರಿಯಾಗಿಟ್ಟುಕೊಂಡು ಪದಗಳನ್ನು ರಚಿಸಿದನು. ಕಥಕಳಿಯ

ಹಾಡುಗಳನ್ನು ಬಹುವಾಗಿ ರಚಿಸಿದವನು ಕಾರ್ತಿಕ ತಿರುನಾಳ್ ಮಹಾರಾಜ

(೧೭೫೮-೧೭೯೮). ಇವನು ಪ್ರತಿಭಾಶಾಲಿಯಾದ ಶಾಸ್ತ್ರಜ್ಞ ಮತ್ತು ಲಲಿತ

ಕಲೆಗಳ ವಿದ್ವಾಂಸನಾಗಿದ್ದನು. ಸ್ವಲ್ಪ ಮಟ್ಟಿಗೆ ಪ್ರಾಸವಿರುವ ಸರಳವಾದ ರಚನೆ

ಗಳಿಗೆ ಇವನ ಕೃತಿಗಳು ಮಾದರಿಯಾದುವು. ಇವನು ರಾಜಸೂಯಂ, ಸುಭದ್ರಾ

ಹರಣಂ, ಬಕವಧಂ, ಗಂಧರ್ವವಿಜಯಂ, ಪಾಂಚಾಲೀ ಸ್ವಯಂವರಂ, ಕಲ್ಯಾಣ

ಸೌಗಂಧಿಕಂ ಮುಂತಾದುವುಗಳನ್ನು ರಚಿಸಿದನು.
 
೪೮೭
 

ಇವನ ಸೋದರಳಿಯ ಅಶ್ವಧಿತಿರುನಾಳ್ ಆಗಿನ ಕಾಲದ ಅತ್ಯಂತ ಪ್ರಮುಖ

ವಾಗ್ಗೇಯಕಾರನಾಗಿದ್ದನು. ಕೃತಿ ರಚನೆಯಲ್ಲಿ ಇವನು ಅತ್ಯಂತ ಪ್ರತಿಭಾಶಾಲಿ

ಯಾಗಿದ್ದನು. ಅಂಬರೀಷ ಚರಿತ್ರಂ, ಪೂತನಾ ಮೋಕ್ಷಂ, ರುಕ್ಷ್ಮಿಣೀ ಸ್ವಯಂವರಂ,

ಪೌಂಡ್ರಕವಧಂ, ರುಕ್ಷ್ಮಿಣೀ ಪರಿಣಯ ನಾಟಕಂ, ಶ್ರೀ ವಂಚೇಶನ್ನ ಪ್ರಬಂಧ ಎಂಬುವು

ಇವನ ಪ್ರಮುಖ ಕೃತಿಗಳು. ಕಾರ್ತಿಕ ತಿರುನಾಳ್ ರಾಜನ ಆಸ್ಥಾನದಲ್ಲಿದ್ದ

ಉಣ್ಣಾಯಿ ವಾರಿಯರ್‌ (೧೭೩೫-೧೭೮೫) ಎಂಬುವನು ಮತ್ತೊಬ್ಬ ಪ್ರಸಿದ್ಧ

ವಾಗ್ಗೇಯಕಾರ. ಇವನು ನಳಚರಿತಂ ಎಂಬುದನ್ನು ರಚಿಸಿದ್ದಾನೆ.

ರಚನೆಗಳು ಕೇರಳದ ಪ್ರತಿಯೊಂದು ಮನೆಯಲ್ಲಿ ಈಗಲೂ

ವಿಳಂಬ ನಡೆ, ರಾಗ ವಿಧ್ಯತೆ, ಜನಪದರಾಗಗಳ ಪ್ರಭಾವ, ಸಾಹಿತ್ಯ ರಚನೆಯಲ್ಲಿ

ಸ್ವತಂತ್ರ ಮನೋಭಾವನೆ ಮುಂತಾದುವು ಈ ರಚನೆಗಳಲ್ಲಿ ಕಂಡು ಬರುತ್ತವೆ.

ಇವನ ಪ್ರಭಾವದಿಂದ ಉಂಟಾದ ಸಂಗೀತಾಭಿರುಚಿಯು ಅರ್ಧಶತಮಾನಕ್ಕಿಂತ ಹೆಚ್ಚು
 
ಇವನ
 
ಇವಜನಪ್ರಿಯವಾಗಿವೆ.
 

ಕಾಲ ಮುಂದುವರಿಯಿತು.
 

ಸ್ವಾತಿ ತಿರುನಾಳ್ ರಾಮವರ್ಮ ಮಹಾರಾಜರ ಕಾಲವನ್ನು ತಿರುವಾಂಕೂರಿನ

ಸಂಗೀತದ ಸುವರ್ಣ ಯುಗವೆನ್ನಬಹುದು. ಇವರು ತ್ಯಾಗರಾಜರ ಸಮಕಾಲೀನರು.

ಈ ದೊರೆಯ ಆಸ್ಥಾನದಲ್ಲಿ ಪಾಲ್‌ಘಾಟ್ ಮತ್ತು ತಂಜಾವೂರಿನ ಅನೇಕ ಪ್ರತಿಭಾ

ನಂತರಾದ ಸಂಗೀತ ವಿದ್ವಾಂಸರಿದ್ದರು. ಅವರಲ್ಲಿ ಒಬ್ಬ ಪ್ರಸಿದ್ಧನಾದ ಕಲಾವಿದ

ಇರಯಿಮನ್ ಥಂಪಿ (೧೭೮೩-೧೮೫೮),

ಸ್ವಯಂವರಂ,
 
ಸುಭದ್ರಾಹರಣಂ, ರಾಸಕ್ರೀಡ ಪಾಟ್,
 

ದಕ್ಷಯಾಗಂ, ಕೀಚಕವಧಂ ಉತ್ತರಾ

ನವರಾತ್ರಿ ಪ್ರಬಂಧಂ,
 

ಮುರಜಪಪಾನ ಎಂಬುವು ಇವನ ಕೃತಿಗಳು. ಇವುಗಳಲ್ಲಿ ಪದಲಾಲಿತ್ಯ, ವೈವಿಧ್ಯತೆ,