2023-07-05 10:40:09 by jayusudindra
This page has been fully proofread once and needs a second look.
ಸಂಗೀತ ಪಾರಿಭಾಷಿಕ ಕೋಶ
ಉಕ್ತವಾಗಿರುವ ಮತ್ತು ಈಗ
ತಮಿಳು ಗ್ರಂಧಗಳಲ್ಲಿ
ಚಾಲತಿಯಲ್ಲಿಲ್ಲದಿರುವ ಇಂದೋಳಂ, ಪಾಡಿ,
ಕಾನಕ್ಕು ರಂಜಿ ಮುಂತಾದ ರಾಗಗಳು ಇಲ್ಲಿ ಪ್ರಚಲಿತವಾಗಿದ್ದು ವು. ತಿರುವಾಂಕೂರಿನ
ಸಂಗೀತದಲ್ಲಿ ಕಂಡು ಬರುವ ಮುಖ್ಯ ಲಕ್ಷಣವೆಂದರೆ ಅದರ ವೈವಿಧ್ಯತೆ.
೧. ಜನಪದ ಗೀತೆಗಳು-ಇವುಗಳಲ್ಲಿ ಕೆಲವು ಪುರಾತನವಾದುವು ತೋಟ್ಟಂ
ಪಾಟ್ಸ್, ಪುಂಪ್ಪಾಟ್ಸ್, ಪಾನಪ್ಪಾಟ್ಸ್, ವ೦ಪ್ಪಾಟ್ಸ್ ಎ
ರ್ವೇ ಪಾಟ್,
ಸರ್ಪಸ್ಪಾಟ್, ಭದ್ರಕಾಳಿಪಾಟ್ಸ್, ವಂಚಿಸ್ಪಾಟ್, ತಿರುವಾಧಿರಂಪಾಟ್ಸ್,
ಷಾಷ್ಟಾಂಪಾಟ್ಸ್. ಈ ಹಾಡುಗಳಲ್ಲಿ ತಾಳವು ಮುಖ್ಯ. ಇವುಗಳನ್ನು ಹಾಡುತ್ತಾ
ತಾಳ ಬದ್ಧವಾಗಿ ಹೆಜ್ಜೆ ಹಾಕುತ್ತಾ ನೃತ್ಯ ಮಾಡುತ್ತಿದ್ದರು.
ಪಶುಪಾಲಕರ ಹಾಡುಗಳು-ಇವು ಬಹುನಯವಾದುವು ಮತ್ತು
ಇಂಪಾದುವು.
೩. ಭಕ್ತಿಗೀತೆಗಳು-ಭಕ್ತಿಗೀತೆಗಳನ್ನು ಕಾಪಾಡಿ ಬೆಳೆಸಿದ ಕೇಂದ್ರಗಳು
ದೇವಾಲಯಗಳು ಶ್ರೀ ವೈಷ್ಣವರಿಗೆ ಪವಿತ್ರವಾದ ದೇವಾಲಯಗಳಲ್ಲಿ ಹನ್ನೊಂದು
ದೇವಾಲಯಗಳು ತಿರುವಾಂಕೂರಿನ ತೃಪ್ಪಧಿಸಾರಂ, ತಿರುವತ್ತಾರ್, ತ್ರಿವೇಂದ್ರಂ,
ಚೆಂಗನೂರು, ಆರನ್ಮೂಲ, ತಿರುಪ್ಪುಲಿಯೂರು, ತಿರುವಣ ವಣೂರು, ತಿರುವಳ್ಳ,
ತೃಕ್ಕಔಥಾನಂ, ತಾರಾ, ತಿರುವಳಿಕ್ಕುರಂ ಎಂಬಲ್ಲಿವೆ. ಶೈವನಾಯನ್ಮಾರ
ರಾದ ತಿರುಜ್ಞಾನ ಸಂಬಂಧರ್, ಅಪ್ಪರ್, ಸುಂದರಮೂರ್ತಿ ಇವರು ರಚಿಸಿದ
ಭಕ್ತಿಗೀತೆಗಳಾದ ತೇವಾರಂ, ತಿರುವಾಚಕಂ ಮತ್ತು ಶ್ರೀವೈಷ್ಣವ ಆಳ್ವಾರರ
ನಾಲಾಯಿರ ಪ್ರಬಂಧಗಳು ಪುರಾತನ ಭಕ್ತಿಗೀತೆಗಳು. ಇವುಗಳಲ್ಲಿ ಭಕ್ತಿರಸ,
ತಾಳಬದ್ಧತೆ, ಉಚಿತವಾದ ಸಾಹಿತ್ಯ, ನಯ ಮತ್ತು ಲಾವಣ್ಯಗಳು ಪ್ರಮುಖ.
ಇವುಗಳನ್ನು ಸ್ವರಗಳ ಏರು ಮತ್ತು ಇಳಿತಗಳನ್ನು ಅನುಸರಿಸಿ
ಇಳಿತಗಳನ್ನು ಅನುಸರಿಸಿ ವಿಳಂಬದಲ್ಲಿ
ಹಾಡುತ್ತಿದ್ದುದರಿಂದ ಸೋಪಾನ ಶೈಲಿಯ ಗಾನ ಬೆಳೆಯಿತು. ಪುರಾತನ ಕಾಲದ
ತಿರುವಾಂಕೂರಿನ ಸಂಗೀತದ ಬಗ್ಗೆ ಶಿಲಪ್ಪದಿಕಾರಂ ಎಂಬ ಗ್ರಂಥದ ಮೂರನೆಯ
ಅಧ್ಯಾಯದಲ್ಲಿ ಸಂಪೂರ್ಣ ಚಿತ್ರವಿದೆ ಈ ರಾಜ್ಯದಲ್ಲಿ ಸಂಗೀತಕ್ಕೆ ಇಚ್ಛೆ ಎಂಬ
ಹೆಸರಿತ್ತು. ಇಲ್ಲಿಯ ಪುರಾತನ ಸಂಗೀತದಲ್ಲಿ ಎರಡು ವಿಭಾಗಗಳಿದ್ದುವು. ಪಣ್
ಎಂಬುದು ೭ ಸ್ವರಗಳುಳ್ಳ ಸಂಪೂರ್ಣರಾಗ ಅಧವಾ ಮೇಳಕರ್ತರಾಗ,
ಸ್ವರಗಳಿಗೆ ಕುರಳ್, ತುಟ್ಟಂ, ಕೈ ಕಿಳ್ಳೆ, ಉಳ್ಳೆ, ಇಳಿ, ವಿಳರಿ, ತಾರಂ ಎಂಬ ಹೆಸರಿತ್ತು
ಪಣ್‌ಗೆ ಜನಕರಾಗವೆಂದೂ ಹೆಸರು. ಯಾಪ್ಪಿಲಕ್ಕಣ
ಣಂ ಎಂಬ ಒಂದು ಪುರಾತನ
ತಮಿಳು ಗ್ರಂಥವು ೧೧೬೧೧ ರಾಗಗಳನ್ನು ಕುರಿತು ವಿವರಿಸುತ್ತದೆ. ಇವು ಸಣ್
ಮತ್ತು ತಿರಾನ್‌ಗಳ ಸಮ್ಮೇಳನದಿಂದ ಉಂಟಾದುವು.
ಐದು ಮುಖ್ಯ
ವಾದುವು. ಅವು-ಕುರಿಂಚಿ, ಪಾಲೈ, ಮುಲ್ಲೆ
ಇದರ
ಪಣಿಗಳಲ್ಲಿ
ಮಾರುತಂ ಮತ್ತು ನೈತಳ್
ಇದು ತಿರುವಾಂಕೂರಿನ ಪುರಾತನ ಸಂಗೀತವಾಗಿತ್ತು.