This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
೧೧. ಭೌಳಿ ೧೨. ವರಾಡಿ ೧೩ ಪಟ ಮಂಜರಿ (ಫಲಮಂಜರಿ) ೧೪ ಧನಾಸಿ

(ಧನ್ಯಾಸಿ) ೧೫. ಪಂಚಮಿ (ಆಹಿರಿ) ೧೬. ದೇಶಿ ೧೭. ರಂಜಿ (ಕುರಿಂಜಿ)

ಇವುಗಳಲ್ಲದೆ ಇಂದೋಲಂ', ಗೌಡಿ ಮತ್ತು ಶ್ರೀರಾಗವನ್ನು ಹೆಸರಿಸಿದೆ ಯಾಳ್,

ಕೊಳಲು, ಕೊಂಬು, ಉಡುಲ್, ತವಿಲ್, ಡೋಲ್, ಭೇರಿಗೈ, ವೇಣ್ ಕೊಂಬು

ಮುಂತಾದ ವಾದ್ಯಗಳನ್ನು ಹೆಸರಿಸಲಾಗಿದೆ
 
೪೮೫
 
ತಿರುಪ್ಪುಗಳ್
 
ಹಾಡುಗಳು
 
ತಾಳಬದ್ಧವಾಗಿರುವುದಲ್ಲದೆ ಅನುಪ್ರಾಸಾದಿ
 
ಸಂಗೀತ
 

ಶಬ್ದಾಲಂಕಾರಗಳಿಂದ ಕೂಡಿವೆ. ಇವುಗಳಲ್ಲಿ ಅನ್ಯದೈವಗಳ ಸ್ತುತಿಗಳಿವೆ.

ಕಚೇರಿಗಳಲ್ಲಿ ಒಂದೆರಡು ತಿರುಪ್ಪುಗಳಗಳನ್ನು ಹಾಡುವುದು ರೂಢಿಯಲ್ಲಿದೆ. ತಮಿಳು

ನಾಡು ಮತ್ತು ದೆಹಲಿಯಲ್ಲಿ ತಿರುಪ್ಪುಗ ಗಳ ಭಜನ ಮಂಡಲಿಗಳಿವೆ.
ತಿರು

 
ತಿರುಚ್
ಚೂರು ವಿ. ರಾಮಚಂದ್ರನ್
 
-
 
(೧೯೪೦) -
ರಾಮಚಂದ್ರನ್

ಕೊಚ್ಚಿ ಸಂಸ್ಥಾನದ ಹೈ ಕೋರ್ಟಿನ ಮುಖ್ಯ ನ್ಯಾಯಾದೀಶರಾಗಿ ನಿವೃತ್ತರಾಗಿದ್ದ

ವಿ. ಬಿ. ವೈದ್ಯನಾಧ ಅಯ್ಯರ್‌ರವರ ಪುತ್ರನಾಗಿ ೧೯೪೦ರಲ್ಲಿ ಕೇರಳದ ತಿರುಚೂರಿನಲ್ಲಿ

ಜನಿಸಿದರು. ನಾಲ್ಕನೆಯ ವಯಸ್ಸಿನಲ್ಲಿ ಸ್ವಲ್ಪ ಹಾಡಲು ತೊಡಗಿ ಪ್ರಾರಂಭದಲ್ಲಿ

ವರ್ಕಳ ಸುಬ್ರಹ್ಮಣ್ಯ ಭಾಗವತರಲ್ಲ, ನಂತರ ತಿರುಪುನಿತ್ತುರೈ ಆರ್. ಕೃಷ್ಣಯ್ಯರ್

ರವರಲ್ಲೂ ಸಂಗೀತ ಶಿಕ್ಷಣ ಪಡೆದು ತರುವಾಯ ೧೯೬೧ರಲ್ಲಿ ಮದ್ರಾಸಿಗೆ ಹೋಗಿ

ಜಿ ಎನ್. ಬಿ. ರವರ ಶಿಷ್ಯರಾಗಿ ನಾಲ್ಕೂವರೆ ವರ್ಷಗಳ ಕಾಲ ಉನ್ನತ ಶಿಕ್ಷಣ

ಪಡೆದು ಅವರ ಸಂಗಡ ಭಾರತಾದ್ಯಂತ ಪ್ರವಾಸ ಮಾಡಿ ಹಾಡಿದರು ೧೯೬೫ರಲ್ಲಿ

ಕೇಂದ್ರ ಸರ್ಕಾರದ ವಿದ್ಯಾರ್ಥಿವೇತನವನ್ನು ಪಡೆದರು. ೧೯೬೫ ಲ್ಲಿ ಮದ್ರಾಸ್

ಮೂಸಿಕ್ ಅಕಾಡೆಮಿಯ ಸಂಗೀತೋತ್ಸವದಲ್ಲಿ ಅತ್ಯುತ್ತಮ ಜೂನಿಯರ್ ಸಂಗೀತ

ಗಾರರೆಂದು, ೧೭೭೨ರಲ್ಲಿ ಅದೇ ಅಕಾಡೆಮಿ ಉತ್ಸವದಲ್ಲಿ ಬಹುಮಾನಗಳನ್ನು

ಪಡೆದರು. ಇವರ ಗಾಯನವು ಜಿ. ಎನ್. ಬಿ. ರವರ ಹಾಡುಗಾರಿಕೆಯಂತಿದೆ.

ರಾಗಾಲಾಪನೆಯಲ್ಲಿ ಗುರುವಿನಂತೆ ಬಿರ್ಕಾಗಳು, ಕೃತಿಗಳ ಹಾಡಿಕೆಯಲ್ಲಿ ಅದೇ

ಓಟ, ಲಯದ ಮೇಲಿನ ಹತೋಟಿ, ಉತ್ತಮವಾದ ತುಂಬಿದ ಶಾರೀರ ಇವೆಲ್ಲವೂ

ಇವರು ಬಿ ಎಸ್‌ಸಿ ಪದವೀಧರರು. ನಾರಾಯಣೀಯಂ-ಎಂಬ

ರಚನೆಯನ್ನು ಹತ್ತು ಎಲ್. ಪಿ ರೆಕಾರ್ಡುಗಳಲ್ಲಿ ಹಾಡಿದ್ದಾರೆ. ಎಂ. ಎಲ್. ವಸಂತ

ಕುಮಾರಿಯವರ ಶಿಷ್ಯ ಚಾರುಮತಿಯವರನ್ನು ವಿವಾಹವಾಗಿದ್ದಾರೆ ಇವರಿಬ್ಬರೂ
 
ಇವೆ.
 

ಹೆಸರಾಂತ ಗಾಯಕರು.
 

 
ತಿರುವಾಂಕೂರು-
ಬಹಳ ಹಿಂದಿನಿಂದಲೂ ತಿರುವಾಂಕೂರು ದಕ್ಷಿಣ

ಭಾರತದ ಒಂದು ಪ್ರಮುಖ ಸಂಗೀತ ಕಲಾಕೇಂದ್ರವಾಗಿದ್ದು ಅಲ್ಲಿಯ ಜನತೆಯ

ಸಾಮಾಜಿಕ ಮತ್ತು ಧಾರ್ಮಿಕ ಜೀವನದ ಮೇಲೆ ಪ್ರಭಾವಬೀರಿತ್ತು. ಅಲ್ಲಿಯ

ರಾಜರು ಇದಕ್ಕೆ ಬಹುವಾಗಿ ಉತ್ತೇಜನವಿತ್ತರು. ಪ್ರಾರಂಭದಲ್ಲಿ ತಿರುವಾಂಕೂರು

ಚೇರರಾಜ್ಯದ ಒಂದು ಭಾಗವಾಗಿತ್ತು. ಅದರ ಕೆಲವು ಭಾಗಗಳು ಚೋಳ ಮತ್ತು