2023-07-05 10:32:09 by jayusudindra
This page has been fully proofread once and needs a second look.
ಹಿರಿಯರು ಹಿಂದೆ ಗೋಕುಲದ
ಗೋಪಿಯರು ಕೃಷ್ಣನನ್ನು ಪಡೆಯುವುದಕ್ಕಾಗಿ ವ್ರತ ನಡೆಸಿ ಕೃತಾರ್ಥರಾದರು.
ಆ ವ್ರತವನ್ನು ಮಾರ್ಗಶೀರ್ಷ ಮಾಸದಲ್ಲಿ ನಡೆಸುವಂತೆ ಹೇಳಿದರು
ಶ್ರೀವಿಲ್ಲಿ ಪುತ್ತೂರನ್ನು ನಂದಗೋಕುಲವೆಂದೂ,
ಕನೈಯರನ್ನು ಗೋಪಬಾಲಿಕೆಯರೆಂದೂ, ತಾನೂ
ಶ್ರೀರಂಗನಾಥನನ್ನೇ ಶ್ರೀಕೃಷ್ಣನೆಂದೂ ಭಾವಿಸಿಕೊಂಡಳು
ಶುಭವಾದ ಅಭಿಸಂಧಿಯನ್ನು ತಿರುಪ್ಪಾವೈ ಪದ್ಯಗಳ ಮೂಲಕ
ಪಡಿಸಿದಳು. ತನ್ನ ಪುರುಷಾರ್ಧವನ್ನು ತಾನು ಪಡೆದಳು
ನಂಬಿದವರು ತಾವೂ ಅದೇ ದಾರಿಯನ್ನು ಅವಲಂಬಿಸುತ್ತಾರೆ
ಒಂದೊಂದು ಪದ್ಯವನ್ನು ಅನುಕ್ರಮವಾಗಿ ಅನುಸಂಧಾನ ಮಾಡಿ, ತಿಂಗಳು ಮುಗಿದ
ಕೂಡಲೇ (ಮಾರ್ಗಶೀರ್ಷಮಾಸ ಡಿಸೆಂಬರ್-ಜನವರಿ) ಶಾತ್ತು
ಎಂಬ ಮಂಗಳವನ್ನು ಹೇಳುತ್ತಾರೆ. ಈ ಪದ್ಯಗಳನ್ನು ಸಂಗೀತಕ್ಕೆ
ಹಾಡಿದವರು ಅರಿಯಕುಡಿ ರಾಮಾನುಜ ಅಯ್ಯಂಗಾರ್, ಸಂಗೀತ ಕಚೇರಿಗಳಲ್ಲಿ
ಒಂದು ಪದ್ಯವನ್ನು ಹಾಡುವುದು ಪದ್ಧತಿಯಾಗಿದೆ.
ತಮ್ಮ ಊರಿನ
ಗೋಪಿಯೆಂದೂ,
ತನ್ನ ಮನಸ್ಸಿನ
ಲೋಕಕ್ಕೆ ಶ್ರುತ
ಈ ದೇವಿಯನ್ನು
ಒಂದೊಂದು ದಿನಕ್ಕೆ
ತಿರುಪ್ಪುಗಳ್
ವಿಜಯನಗರದ ಪ್ರೌಢದೇವರಾಯನ (೧೪೨೨-೧೪೪೬)
ಸಮಕಾಲಿನರಾಗಿದ್ದ ತಮಿಳು ಸಂತಕವಿ ಅರುಣಗಿರಿನಾಧರು ಸುಬ್ರಹ್ಮಣ್ಯನ ಭಕ್ತ
ನಾಗಿದ್ದು, ಶೈವನಾಯನಾರರಂತೆ ಸುಬ್ರಹ್ಮಣ್ಯ ಕ್ಷೇತ್ರಗಳನ್ನು ಸಂದರ್ಶಿಸಿ ಭಕ್ತಿ
ಅರುಣಗೀತೆ
ಗಳನ್ನು ಹಾಡಿದರು. ಇವುಗಳಿಗೆ ತಿರುಪ್ಪುಗಳ್ ಎಂದು ಹೆಸರು.
ಅರುಣ
ಗಿರಿ
ಈ ಭಕ್ತಿಗೀತೆಗಳು ೧೦೦೦ ಕ್ಕಿಂತ ಹೆಚ್ಚು ಇವೆ ಇವುಗಳನ್ನು ಛಂದವಿರುತ್ತಂ'ನಲ್ಲಿ
ರಚಿಸಲಾಗಿದೆ. ತಿರುಮಳಿ ಆಳ್ವಾರರ (ತಿರುಚ್ಚಂದ ವಿರುತ್ತಂ' ಎಂಬ ೧೨೦ ಪದ್ಯ
ಗಳಿರುವ ರಚನೆಯು ಇದಕ್ಕೆ ಉತ್ತಮ ನಿದರ್ಶನ ತಿರುಪ್ಪುಗಳ, ಗೀತೆಗಳು, ಕವಿತೆ,
ಭಕ್ತಿ, ತತ್ವ, ತಾಳ ಇವುಗಳ ಸಂಗಮವಾಗಿವೆ. ನಮ್ಮ ಸಂಗೀತದಲ್ಲಿರುವ ಅನೇಕ
ತಾಳಗಳಿಗೆ ಇವು ಲಕ್ಷಗಳಾಗಿವೆ. ಈ ಹಾಡುಗಳಲ್ಲಿ ಕೆಲವು ೩೫ ತಾಳಪದ್ಧತಿ,
೧೦೮ ತಾಳ ಪದ್ಧತಿ, ೫೨ ತಾಳ ಪದ್ಧತಿ ಮತ್ತು ನವಸಂಧಿ ತಾಳಗಳಲ್ಲಿ ಬರುತ್ತವೆ.
ಈ ಪದ್ಧತಿಗಳಲ್ಲಿಲ್ಲದ ಹಲವು ತಾಳಗಳಿರುವ ತಿರುಪ್ಪುಗಳಿಗಳಿವೆ. ಅರುಣಗಿರಿನಾಥರೇ
ರಾಗಗಳನ್ನೂ ಹೆಸರಿಸಿದ್ದಾರೆ. ಇದರಿಂದ ಆ ಕಾಲದಲ್ಲಿ ಪ್ರಚಲಿತವಾಗಿದ್ದ ರಾಗಗಳು
ಮತ್ತು ಪಣಗಳನ್ನು ತಿಳಿಯಬಹುದು. ಅವರು ಹೇಳಿರುವ ೧೫ ರಾಗಗಳು ಮತ್ತು
ಪಣ್ಳು ಯಾವುವೆಂದರೆ : ೧. ವರಾಳಿ
೨. ಶಿಖಂಡಿ ೩, ಶಿಕಾಮರಂ
(ನಾದನಾಮಕ್ರಿಯ) ೪, ವಿಪಂಚಿಕೆ ೫. ಗೌಡ್ ಅಥವಾ ಗೌಡಿ
೬.
Yey
೭.
ಲಲಿತ ೮. ಕೈಶಿಕಂ ೯. ಗೌಳಿ ಅಧವಾ ಗೌಳ ೧೦. ಮಲಹರಿ
ಭೈರವಿ