2023-07-05 10:22:51 by jayusudindra
This page has been fully proofread once and needs a second look.
ರಾಗಿದ್ದರು. ಗುರುವಿನ ದೈವಿಕ ಪ್ರತಿಭೆ ಮತ್ತು ವ್ಯಕ್ತಿತ್ವವನ್ನು ಅರಿತು ಪೂಜ್ಯ ಭಾವನೆ
ಯಿಂದ ಅವರ ಸೇವೆ ಮಾಡಿ ಶ್ರದ್ಧಾಭಕ್ತಿಗಳಿಂದ ಅವರ ರಚನೆಗಳನ್ನು ಕಲಿಯು
ತ್ತಿದ್ದರು. ಕೆಲವರು ದಿವ್ಯನಾಮ ಕೀರ್ತನೆಗಳಲ್ಲಿ ಪರಿಣತರಾಗಿದ್ದರು. ವೀಣಾ
ಕುಪ್ಪಯ್ಯರ್, ವೆಂಕಟರಮಣ ಭಾಗವತರೇ ಮುಂತಾದವರು ಹೆಚ್ಚು ಕಾಲ ಶಿಷ್ಯರಾಗಿ
ವಾಲಾಜಪೇಟೆ ವೆಂಕಟರಮಣ ಭಾಗವತರು ತೆಲುಗು ಮತ್ತು
ಸಂಸ್ಕೃತ ವಿದ್ವಾಂಸರಾಗಿದ್ದು ತ್ಯಾಗರಾಜರ ಬಾನ್ವೆಲ್ ಆಗಿದ್ದರು.
ಸೇವೆ ಮಾಡಿದರು.
ತ್ಯಾಗರಾಜರು ತಮ್ಮ ಶಿಷ್ಯರನ್ನು ಅವರ ಶಾರೀರ ಮತ್ತು ಗುಣ ಇತ್ಯಾದಿಗಳಿಗೆ
ತಕ್ಕಂತೆ ಎರಡು ಎರಡು ಶಿಷ್ಯರನ್ನು ಜೊತೆಯನ್ನಾಗಿ ಮಾಡಿ ಒಂದೊಂದು ಜೊತೆಗೆ
೨೦೦ರಷ್ಟು ಕೃತಿಗಳನ್ನು ಹೇಳಿಕೊಟ್ಟರು ಬುದ್ದಿವಂತರಾದ ಶಿಷ್ಯರು ಇನ್ನೂ ಹೆಚ್ಚು
ಕೃತಿಗಳನ್ನು ಕಲಿಯುತ್ತಿದ್ದರು. ವಾಲಾಜಪೇಟೆ ಮತ್ತು ಉಮಯಾಳುರಂ ಶಿಷ್ಯರು
ಹೆಚ್ಚು ಸಂಖ್ಯೆಯಲ್ಲಿ ಕೃತಿಗಳನ್ನು ಕಲಿತರು.
ಉತ್ತಮ ಸ್ವರಜ್ಞಾನವಿಲ್ಲದವರು ಶಿಷ್ಯರಾಗಿ ಬಂದಾಗ ತ್ಯಾಗರಾಜರು ಅವರಿಗೆ
ಮೊದಲು ದಿವ್ಯನಾಮ ಕೀರ್ತನೆಗಳನ್ನು ಕಲಿಸಿ ನಂತರ ಇತರ ಕೃತಿಗಳನ್ನು ಕಲಿಸು
ತಿದ್ದರು. ಈಶಮನೋಹರಿ ರಾಗದ 'ಶ್ರೀಜಾನಕಿ ಮನೋಹರ' ಎಂಬ ಕೃತಿಯನ್ನು
ತಪ್ಪದೆ ಕಲಿಸುತ್ತಿದ್ದರು. ಇದೇ ಪದ್ಧತಿಯನ್ನು ಅವರ ಶಿಷ್ಯರಾದ ಉಮಯಾನ್ಸುರಂ
ಸಹೋದರರು ಅನುಸರಿಸಿದರು. ತ್ಯಾಗರಾಜರು ಪ್ರತಿದಿನವೂ ಒಂದು ಅಥವಾ ಎರಡು
ಕೃತಿಗಳನ್ನು ರಚಿಸುತ್ತಿದ್ದರು. ಏಕಾದಶಿ ದಿನಗಳಲ್ಲಿ ಅನೇಕ ಕೀರ್ತನೆಗಳು ರಚನೆ
ಯಾಗುತ್ತಿದ್ದುವು. ಅವರ ಶಿಷ್ಯರಲ್ಲಿ ತಂಜಾವೂರು ರಾಮರಾವ್ ಅವರ ಆಪ್ತ
ಕಾರ್ಯದರ್ಶಿಯಂತೆ ಸೇವೆ ಮಾಡುತ್ತಿದ್ದರು. ಇತರರಿಗಿಂತ ಗುರುವಿನಲ್ಲಿ ಇವರಿಗೆ
ಹೆಚ್ಚು ಸಲಿಗೆಯಿತ್ತು. ಇವರು ತ್ಯಾಗರಾಜರಿಗಿಂತ ಎರಡು ವರ್ಷ ಚಿಕ್ಕವರಾಗಿದ್ದರು.
ದೈಹಿಕ ಶ್ರಮವುಳ್ಳ ಕೆಲಸಗಳನ್ನು ಗಣಪತಿ' ಎನ್ನಿಸಿಕೊಂಡಿದ್ದ ವಾಲಾಜಪೇಟೆ ವೆಂಕಟ
ರಮಣ ಭಾಗವತರು ಮಾಡುತ್ತಿದ್ದರು. ಗುರುವನ್ನು ಎಲ್ಲರೂ ಅಯ್ಯರ್ವಾಳ್
ಎಂದು ಹೇಳುತ್ತಿದ್ದರು
ತ್ಯಾಗರಾಜರ ಮೂವತ್ತು ಪ್ರಮುಖ ಶಿಷ್ಯರಲ್ಲಿ ವಾಲಾಜಪೇಟೆ ವೆಂಕಟರಮಣ
'ಭಾಗವತರು ಮತ್ತು ಅವರ ಪ್ರತಿಭಾವಂತ ಪುತ್ರ ಕೃಷ್ಣಸ್ವಾಮಿ ಭಾಗವತರು ಸಂಗೀತ
ಪ್ರಪಂಚಕ್ಕೆ ಮಹದುಪಕಾರ ಮಾಡಿದ್ದಾರೆ. ವೆಂಕಟರಮಣ ಭಾಗವತರು ಸಂಸ್ಕೃತ
ಮತ್ತು ತೆಲುಗಿನಲ್ಲಿ ವಿದ್ವಾಂಸರಾಗಿದ್ದರು. ಗುರುವಿನ ರಚನೆಗಳನ್ನೂ, ಗೇಯನಾಟಕ
ಗಳನ್ನೂ ಎಚ್ಚರಿಕೆಯಿಂದ ಬರೆದಿಟ್ಟು ಕೊಂಡರು. ಇವರಿಬ್ಬರೂ ತ್ಯಾಗರಾಜರ
ಜೀವನ ಚರಿತ್ರೆಯನ್ನು ಕುರಿತು ವಿವರವಾಗಿ ಬರೆದಿಟ್ಟರು. ವೆಂಕಟರಮಣ ಭಾಗ
ವತರು ೨೬ ವರ್ಷಗಳ ಕಾಲ ಗುರುವಿನ ಸಂಗಡವಿದ್ದರು. ಇವರ ಪುತ್ರರಾದ ಕೃಷ್ಣ
ಸ್ವಾಮಿ ಭಾಗವತರು ಹಲವು ಕೃತಿಗಳನ್ನೂ ಸ್ವರಜತಿಗಳನ್ನೂ ರಚಿಸಿದ್ದಾರೆ. ಇವರು
೪೭೮