2023-07-05 10:22:13 by jayusudindra
This page has been fully proofread once and needs a second look.
ತಂದೆಯವರಿಂದ ಪಡೆದು, ತಾನ ವರ್ಣಗಳ ವಾಗ್ಗೇಯಕಾರರಾಗಿದ್ದ ಕೊತ್ತವಾಶಲ್
ವೆಂಕಟರಾಮಯ್ಯರಲ್ಲಿ ಮುಂದುವರಿಸಿದರು. ಶಾರೀರ ಸೌಖ್ಯವಿಲ್ಲದ್ದರಿಂದ ಅವರ ಸಲಹೆ
ಯಂತೆ ಸಾತ್ತನೂರು ಪಂಚನದ ಅಯ್ಯರ್‌ರವರಲ್ಲಿ ಪಿಟೀಲುವಾದನವನ್ನು ಕಲಿಯಲು
ತೊಡಗಿ, ನಂತರ ಆಗಿನ ಖ್ಯಾತ ವಿದ್ವಾಂಸರಾಗಿದ್ದ ಪಿಟೀಲು ಸುಬ್ಬರಾಯರಲ್ಲಿ ಉನ್ನತ
ಶಿಕ್ಷಣ ಪಡೆದು ಸಾಧಕ ಮಾಡಿ ಪ್ರವೀಣರಾದರು.
೪೭೭
1
ಕೃಷ್ಣಯ್ಯರ್ ಆಜಾನುಬಾಹುವಾದ ವ್ಯಕ್ತಿ. ಸ್ವರೂಪ ವಕ್ರ ಮತ್ತು
ಸ್ವಭಾವವೂ ವಿಚಿತ್ರ, ಪ್ರತಿ ರಾತ್ರಿ ಎಂಟು ಗಂಟೆಗಳ ಕಾಲ ಸಾಧಕ ಮಾಡುತ್ತಿದ್ದರು.
ಎಷ್ಟೇ ಕಚೇರಿಗಳ ಕಾರ್ಯಕ್ರಮವಿದ್ದರೂ ರಾತ್ರಿ ಮೂರರಿಂದ ಏಳರವರೆಗೆ ಅಭ್ಯಾಸ
ಮಾಡುವುದನ್ನು ಬಿಡುತ್ತಿರಲಿಲ್ಲ. ಕಮಾನಿನ ಒಂದು ಎಳೆತದಲ್ಲಿ ೪, ೮, ೧೬, ೩೨,
೬೪ ಸ್ವರಗಳನ್ನು ನುಡಿಸುವುದನ್ನು, ಒಂದೇ ತಂತಿಯಲ್ಲಿ ಸ್ವರಗಳನ್ನೂ ವನಜಾಕ್ಷಿ,
ವಿರೀಬೋಣಿ, ಸರಸೂಡ, ಇಂತಚಲಮು ಎಂಬ ವರ್ಣಗಳನ್ನು ದಿನವೂ ಅಭ್ಯಸಿಸು
ತಿದ್ದರು. ಮಾಯಾವರಂ ವೀಣಾ ವೈದ್ಯನಾಥ ಅಯ್ಯರ್ ರವರಿಂದ ಅನೇಕ ಕೃತಿ
ಗಳನ್ನು ಕಲಿತು ತಮ್ಮ ಜ್ಞಾನಭಂಡಾರವನ್ನು ಹೆಚ್ಚಿಸಿಕೊಂಡರು.
ಪಕ್ಕವಾದ್ಯ ನುಡಿಸುವುದರಲ್ಲಿ ಇವರು ಅದ್ವಿತೀಯರಾಗಿದ್ದರು. ಮಹಾವೈದ್ಯ
ನಾಧ ಅಯ್ಯರ್, ಪಟ್ಟಣಂ ಸುಬ್ರಹ್ಮಣ್ಯ ಅಯ್ಯರ್, ಶರಭಶಾಸ್ತ್ರಿಗಳು ಮುಂತಾದ
ಹಿರಿಯ ವಿದ್ವಾಂಸರು ಇವರ ಪಕ್ಕವಾದ್ಯವನ್ನು ಅಪೇಕ್ಷಿಸುತ್ತಿದ್ದರು. ಇವರ ತನಿ
ಕಚೇರಿಗಳಲ್ಲಿ ಇವರ ಪ್ರತಿಭೆ ಪ್ರಕಟವಾಗುತ್ತಿತ್ತು. ತನಿ ಕಚೇರಿಯು ರೂಢಿಗೆ ಬಂದು
ಗಾಯನಕ್ಕೆ ಸಮಾನವಾದ ಸ್ಥಾನವನ್ನು ಪಡೆಯಿತು. ಕೀರ್ತನೆಗಳನ್ನು ಹಾಡುತ್ತಿರುವ
ಹಾಗೆ ಕೇಳಿಬರುವಂತೆ ನುಡಿಸುತ್ತಿದ್ದರು. ತ್ಯಾಗರಾಜರ ಕೃತಿಗಳನ್ನು ನುಡಿಸುವುದರಲ್ಲಿ
ತಮ್ಮ ಕೌಶಲ್ಯವನ್ನು ತೋರಿಸುತ್ತಿದ್ದರು. ಶುದ್ಧವಾದ ನಾದ, ಅಸಾಧಾರಣ ಲಯ
ಜ್ಞಾನ, ಅಪಾರ ಮನೋಧರ್ಮ ಇವರ ಪ್ರತಿಭೆಯ ಹೆಗ್ಗುರುತುಗಳಾಗಿದ್ದುವು.
ಇವರು ಪ್ರವೇಶಿಸದ ಸದಸ್ಸಿರಲಿಲ್ಲ. ಇವರನ್ನು ಆದರಿಸದ ಸಂಸ್ಥಾನವಿರಲಿಲ್ಲ.
ಮೈಸೂರು ಆಸ್ಥಾನದ ಗೌರವಕ್ಕೆ ಪಾತ್ರರಾಗಿದ್ದರು. ತಿರುವಾಡುತ್ತು ಮಠದ
ಪ್ರಮುಖ ವಿದ್ವಾಂಸರಾಗಿದ್ದರು. ತಮ್ಮ ಹಳ್ಳಿಯಾದ ತಿರುಕ್ಕೋಡಿಕಾವಲ್‌ನಲ್ಲಿ
ನ್ಯಾಯಾಧೀಶರಾಗಿದ್ದರು. ಇವರ ಹಿರಿಯ ಮಗ ರಾಮಯ್ಯರ್, ಕುಂಭಕೋಣಂ
ರಾಜಮಾಣಿಕ್ಯಂ ಪಿಳ್ಳೆಯ ಗುರು ರಾಮಸ್ವಾಮಿ ಅಯ್ಯರ್, ಶೆಮ್ಮಂಗುಡಿ ನಾರಾಯಣ
ಸ್ವಾಮಿ ಅಯ್ಯರ್ ಮುಂತಾದವರು ಇವರ ಶಿಷ್ಯರಾಗಿದ್ದರು.
ಇವರು
ತ್ಯಾಗರಾಜರ ಶಿಷ್ಯರು ಮತ್ತು ಶಿಷ್ಯ ಪರಂಪರೆ
ಭಾರತೀಯ
ಸಂಗೀತದ ಇತಿಹಾಸದಲ್ಲಿ ಇತರ ವಾಗ್ಗೇಯಕಾರರಿಗಿಂತ ಹೆಚ್ಚು ಸಂಖ್ಯೆಯಲ್ಲಿ ತ್ಯಾಗ
ರಾಜರಿಗೆ ಶಿಷ್ಯರಿದ್ದರು.
ಈ ಶಿಷ್ಯರೂ ಮತ್ತು ಪರಂಪರೆಯವರೂ ಪ್ರಸಿದ್ಧ ವಾಗ್ಗೇಯ
ಕಾರರೂ, ಸಂಗೀತಗಾರರೂ ಆಗಿದ್ದರು. ತ್ಯಾಗರಾಜರ ಶಿಷ್ಯರಲ್ಲಿ ಹಲವರು ಮೊದಲೇ