This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ದೊರಕಿತು.
 
ತಮ್ಮ ೧೬ನೆ ವಯಸ್ಸಿನಲ್ಲಿ ತಿರುವೈಯಾರಿನ ತ್ಯಾಗರಾಜ
ಆರಾಧನೋತ್ಸವದಲ್ಲಿ ಪಾಪಾ ವೆಂಕಟರಾಮಯ್ಯ ಮತ್ತು ತಂಜಾವೂರು ವೈದ್ಯನಾಥ
ಅಯ್ಯರ್‌ರವರ ಪಕ್ಕವಾದ್ಯಗಳೊಡನೆ ಒಂದು ಗಂಟೆ ಕಾಲ ಹಾಡಿದರು. ೧೯೨೪ರಲ್ಲಿ
ಮೈಸೂರಿನ ಆಸ್ಥಾನ ವಿದ್ವಾಂಸರಾದರು ಮತ್ತು ಬೆಳಗಾಂ ಕಾಂಗ್ರೆಸ್ಸಿನಲ್ಲಿ ಮೈಸೂರು
ವಿದ್ವತ್‌ಗೋಷ್ಠಿ ಯೊಡನೆ ಭಾಗವಹಿಸಿದರು ಮತ್ತು ಮಹಾತ್ಮ ಗಾಂಧೀಜಿಯವರ
ಪ್ರಶಂಸೆ ಪಡೆದರು. ೧೯೪೬ರಲ್ಲಿ ಜಯಚಾಮರಾಜ ಒಡೆಯರು ಇವರಿಗೆ ಗಾನವಿಶಾರದ
ಎಂಬ ಬಿರುದನ್ನಿತ್ತು ಗೌರವಿಸಿದರು. ೧೯೬೫ರಲ್ಲಿ ರಾಜ್ಯದ ಸಂಗೀತ ನಾಟಕ
ಅಕಾಡೆಮಿ ಪ್ರಶಸ್ತಿ, ೧೯೬೬ರಲ್ಲಿ ಮೈಸೂರಿನ ಬಿಡಾರಂ ಪ್ರಸನ್ನ ಸೀತಾರಾಮ ಮಂದಿರ
ದಲ್ಲಿ ನಡೆದ ಸಂಗೀತ ಸಮ್ಮೇಳನದಲ್ಲಿ : ಗಾನಕಲಾಸಿಂಧು " ಎಂಬ ಬಿರುದು, ಗೌರವ
ಇವರು ದಕ್ಷಿಣ ಭಾರತದಲ್ಲೆಲ್ಲಾ ಅನೇಕ ಸ್ಥಳಗಳಲ್ಲಿ ಕಚೇರಿ ಗಾಯನ
ಮಾಡಿದ್ದಾರೆ. ಸಂಪ್ರದಾಯಬದ್ಧವಾದ, ಸತ್ವಪೂರ್ಣವಾದ ಹಾಡುಗಾರಿಕೆ
 
ಸಂದಿತು.
 
ಇವರದು.
 
೪೭೬
 
ತಿನ್ನಿ ಯಂ ವೆಂಕಟರಾಮಯ್ಯರ್-ಇವರು ತಮಿಳುನಾಡಿನ ತಿರುಚಿ
ಜಿಲ್ಲೆಯ ತಿನ್ನಿ ಯಂ ಎಂಬಲ್ಲಿ ವೇದಾಧ್ಯಯನ ಮತ್ತು ತಮಿಳು ಪಾಂಡಿತ್ಯಕ್ಕೆ
ಹೆಸರಾಗಿದ್ದ ಮನೆತನಕ್ಕೆ ಸೇರಿದ ವೈದ್ಯನಾಥಶಾಸ್ತ್ರಿಗಳ ಮಗನಾಗಿ ೧೯೦೦ರಲ್ಲಿ ಜನಿಸಿ
ದರು. ನೇತುರಾಮಯ್ಯರ್‌ರವರಲ್ಲಿ ಮೃದಂಗವಾದನ ಮತ್ತು ಗಾಯನದಲ್ಲಿ
ಪ್ರಾರಂಭದಲ್ಲಿ ಶಿಕ್ಷಣ ಪಡೆದರು. ತಿರುವೈಯ್ಯಾರ್ ಸುಬ್ರಹ್ಮಣ್ಯ ಅಯ್ಯರ್‌ರವರಲ್ಲಿ
ಉನ್ನತ ಶಿಕ್ಷಣವನ್ನು ಪಡೆದು
ಕಚೇರಿ ಮಾಡಿದರು. ಇವರು
ಅನೇಕ ಗಾಯಕರನ್ನೂ, ಮೃದಂಗ ವಿದ್ವಾಂಸರನ್ನೂ ಸಿದ್ಧಗೊಳಿಸಿದ್ದಾರೆ.
 
೧೯೧೨ರಲ್ಲಿ ತಮ್ಮ
 
ತಿರುಕ್ಕೋಡಿಕ್ಕಾವಲ್ ಕೃಷ್ಣಯ್ಯರ್ (೧೮೫೭-೧೯೧೩)-ಕರ್ಣಾಟಕ
ಸಂಗೀತ ಕಚೇರಿಗಳಲ್ಲಿ ಪಿಟೀಲು ಒಂದು ಮುಖ್ಯ ಪಕ್ಕವಾದ್ಯವಾಗಿರಲು ತೊಡಗಿದ್ದು
ಸುಮಾರು ೧೮೦೦ ರಿಂದ ಎನ್ನಬಹುದು. ಇದು ಸಂಗೀತದ ಇತಿಹಾಸದಲ್ಲಿ ಒಂದು
ಮುಖ್ಯ ಘಟನೆ.
ಈ ವಾದ್ಯದ ನಾದಪುಷ್ಟಿ, ಕಮಾನಿನ ಸಹಾಯದಿಂದ ಸ್ವರಗಳನ್ನು
ದೀರ್ಘವಾಗಿ ನುಡಿಸುವ ಸೌಲಭ್ಯ, ಹಗುರವಾಗಿರುವಿಕೆ ಮುಂತಾದ ಗುಣಗಳಿಂದ ಇದು
ಸಂಗೀತ ಕಚೇರಿಗಳ ಒಂದು ಮುಖ್ಯ ಪಕ್ಕವಾದ್ಯವಾಗಿದೆ. ಬಾಲುಸ್ವಾಮಿದೀಕ್ಷಿತ
ರಿಂದ (೧೭೮೬-೧೮೫೮) ಮೊದಲಾಗಿ ಹಲವು ಉತ್ಸಾಹಿ ವಿದ್ವಾಂಸರು ಈ ವಾದ್ಯವನ್ನು
ಬಹು ತಾಳ್ಮೆಯಿಂದ ಸಾಧಕ ಮಾಡಿದರು. ಕರ್ಣಾಟಕ ಸಂಗೀತದ ಹಿರಿಮೆಗೆ ತಕ್ಕಂತೆ
ಇದನ್ನು ನುಡಿಸುವ ತಂತ್ರ ಮತ್ತು ನೈಪುಣ್ಯವು ಕ್ರಮೇಣ ರೂಪುಗೊಂಡುವು.
ಹಿಂದಿನ ತಲೆಮಾರಿನ ಪಿಟೀಲು ವಾದಕರಲ್ಲಿ ಕೃಷ್ಣಯ್ಯರ್‌ರವರ ಸ್ಥಾನ ಹಿರಿದಾದುದು.
 
ಕೃಷ್ಣಯ್ಯರ್ ತಮಿಳುನಾಡಿನ ತಂಜಾವೂರು ಜಿಲ್ಲೆಯ ಮರುತ್ತುರೈ ಎಂಬ
ಗ್ರಾಮದಲ್ಲಿ ೧೮೫೭ರಲ್ಲಿ ಜನಿಸಿದರು. ಇವರ ತಂದೆ ಕುಪ್ಪು ಸ್ವಾಮಿ ಭಾಗವತರು ಹರಿ
ಕಥಾ ಕಾಲಕ್ಷೇಪದಲ್ಲಿ ಪ್ರಸಿದ್ಧರಾಗಿದ್ದು ತಮಿಳು, ಮರಾಠಿ, ಸಂಸ್ಕೃತ, ತೆಲುಗು ಮತ್ತು