This page has been fully proofread once and needs a second look.

ಸ೦ಗೀತ ಪಾರಿಭಾಷಿಕ ಕೋಶ
 
ರಲ್ಲಿ ಬಾಲಮುರಳಿ ಕೃಷ್ಣರವರ ಕಚೇರಿಗೆ ಹಾರ್ಮೋನಿಯಂ ನುಡಿಸಿದರು. ಇವರ

ವಾದನವು ಕೊಳಲೋ, ಷಹನಾ ವಾದ್ಯವೋ ಅಧವಾ ವಿಶಿಷ್ಟ ತಂತ್ರದ ತಂತಿ

ವಾದ್ಯವೋ ಎನ್ನುವಷ್ಟು ಸೊಗಸಾಗಿದ್ದಿತು. ಹಾರ್ಮೋನಿಯಂ ವಾದ್ಯದ ಯುಗ

ಪುರುಷನಾಗಿದ್ದ ಅರುಣಾಚಲಪ್ಪನವರು ೧೯೬೬ರಲ್ಲಿ ಕಾಲವಾದರು. ಮುನಿರಾಮಯ್ಯ,

ನರಸಿಂಹಯ್ಯ, ಗುಂಡಪ್ಪ, ಪಾಪಯ್ಯ, ಹೊನ್ನಪ್ಪ ಭಾಗವತರು ಮುಂತಾದವರು

ಇವರ ಶಿಷ್ಯರು. ಇವರು ಮಂತ್ರಾಲಯದ ರಾಘವೇಂದ್ರಸ್ವಾಮಿಗಳ ಭಕ್ತರಾಗಿದ್ದರು.

 
ಅರುಣಗಿರಿ-
ಈ ರಾಗವು ೬೪ನೆಯ ಮೇಳಕರ್ತ ವಾಚಸ್ಪತಿಯ ಒಂದು
 

ಜನ್ಯರಾಗ
 

ಆ :
ಸ ರಿ ಗ ಮ ದ ಸ

ಅ :
ಸ ದ ಮ ಗ ರಿ ಸ
 

 
ಅರುಣಗಿರಿನಾಥರ್-
ಅರುಣಗಿರಿನಾಥರು ೧೫ನೆಯ ಶತಮಾನದಲ್ಲಿ

ವಿಜಯನಗರದ ದೊರೆ ೨ನೆಯ ಪ್ರೌಢ ಪ್ರತಾಪದೇವರಾಯನ (೧೪೨೨-೧೪೪೯)

ಕಾಲದಲ್ಲಿದ್ದ ತಮಿಳು ದೇಶದ ಪ್ರಸಿದ್ಧ ಭಕ್ತ ಮತ್ತು ಕವಿ. ತಾಯಿಯ ಹೆಸರು

ಮುತ್ತಮ್ಮೆ ತಿರುವಣ್ಣಾಮಲೆಯು ಜನ್ಮಸ್ಥಳ, ಅಕ್ಕನ ಆರೈಕೆಯಲ್ಲಿ ಬೆಳೆದ

ಅರುಣಗಿರಿ ಚಿಕ್ಕಂದಿನಲ್ಲಿ ದುರ್ವಸನಗಳಿಗೆ ಬಲಿಯಾಗಿ, ಸೋದರಿಯ ಬಿರುನುಡಿ

ಗಳಿಂದ ನೊಂದು ಆತ್ಮಹತ್ಯೆಗೆ ಪ್ರಯತ್ನಿಸಿದಾಗ ತಿರುವಣ್ಣಾ ಮಲೆಯ ದೇವಾಲಯದ

ಸನ್ಯಾಸಿಯು ಇವರನ್ನು ರಕ್ಷಿಸಿ ಜ್ಞಾನೋಪದೇಶ ಮಾಡಿದನು. ನಂತರ ಷಣ್ಮುಖನ

ಭಕ್ತನಾಗಿ ತಿರುಪ್ಪುಗಳ್ ಎಂಬ ಪ್ರಸಿದ್ಧವಾದ ಸ್ತೋತ್ರಗಳನ್ನು ಹಾಡಿದರು. ಇವು

೧೦೦೦ಕ್ಕಿಂತಲೂ ಹೆಚ್ಚು ಸಿಕ್ಕಿವೆ. ಇವು ನೂತನ ಶೈಲಿ, ಪದಲಾಲಿತ್ಯ ಮತ್ತು

ಬಂಧಗಳಿಗೆ ಪ್ರಸಿದ್ಧವಾಗಿವೆ. ಅರುಣಗಿರಿನಾಥರಿಗೆ ಸಂಸ್ಕೃತ ಮತ್ತು ತಮಿಳಿನಲ್ಲಿ

ಅಪಾರ ವಾಂಡಿತ್ಯವಿತ್ತು. ಚಂಡವಾವಳಪ್ಪೆರುಮಾನ್ ಎಂಬ ಬಿರುದಿತ್ತು. ಇವರು

ಅನೇಕ ವೃತ್ತಗಳಲ್ಲಿ ಕವಿತೆಗಳನ್ನು ರಚಿಸಿದ್ದರು. ಇತರ : ತೇವಾರಂ ' ಕವಿಗಳಂತೆ,

ಅನೇಕ ಕ್ಷೇತ್ರಗಳನ್ನು ಸಂದರ್ಶಿಸಿ ಅಲ್ಲಿಯ ಅಧಿದೇವತೆಗಳನ್ನು ಕುರಿತು

ಸ್ತೋತ್ರಗಳನ್ನು ಹಾಡಿದರು. ಇವರ ಕೃತಿಗಳು ಷಣ್ಮುಖಭಕ್ತಿಯಿಂದ ಕೂಡಿವೆ.

ಮತ್ತು ಹಲವು ನೂತನ ಅಥವಾ ಅಪರಿಚಿತ ತಾಳಗಳಿಗೆ ಲಕ್ಷಗಳಾಗಿವೆ. ೩೫, ೧೭೫,

ಮತ್ತು ೧೦೮ ತಾಳಗಳ ವರ್ಗಕ್ಕೆ ಸೇರಿದ ಹಲವು ತಾಳಗಳಲ್ಲಿ ಇವರ ಕೃತಿಗಳಿರುವುದಲ್ಲದೆ

ಸಂಕೀರ್ಣತಾಳಗಳಲ್ಲಿ ಹಲವು ರಚನೆಗಳಿವೆ. ಇವರು ಸುಮಾರು ೧೬೦೦೦ ಕೃತಿಗಳನ್ನು

ರಚಿಸಿದರೆಂದು ಪ್ರತೀತಿ

ಅವುಗಳಲ್ಲಿ ಈಗ ಸುಮಾರು ೨೦೦೦ ಕೃತಿಗಳು ದೊರಕಿವೆ.

ಇವರು ಸಾಹಿತ್ಯ ಸ್ಪರ್ಧೆಯೊಂದರಲ್ಲಿ ತಮಿಳು ಕವಿ ವಿಲ್ಲಿಸುತ್ತೂರರ್ ಎಂಬುವರನ್ನು

ಸೋಲಿಸಿದರು. ಬೂತವೇತಾಳವಗುಪ್ಪು ಎಂಬ ಕೃತಿಯಲ್ಲಿ ಕೆಲವು ಪುರಾತನರಾಗಗಳು,

೧೦೮ ತಾಳಗಳು, ತಮಿಳು ಪಣಗಳು ಮತ್ತು ಅವನದ್ಧ ವಾದ್ಯಗಳು ಉಕ್ತವಾಗಿವೆ.

ಇವರು ರಚಿಸಿರುವ ಇತರ ಗ್ರಂಧಗಳು-ಕಂದರ್ ಅನುಭೂತಿ, ಕಂದರ್ ಅಂದಾದಿ,
 
ಇವರು
 

 
ಇವರು