This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ಕೃತಿಗಳಿಗೆ ಸಂಗತಿಗಳನ್ನು ಸೂಕ್ತವಾಗಿ ಅಳವಡಿಸಿರುವುದು ಅವರ ಮತ್ತೊಂದು
ಅಮೂಲ್ಯ ಕೊಡುಗೆ.
ಇದು ಅವರು ಸಾಧಿಸಿದ ಕ್ರಾಂತಿಕಾರಕ ಮತ್ತು ಪ್ರತಿಭಾನ್ವಿತ
ಸುಧಾರಣೆ. ಇದರಿಂದ ಕರ್ಣಾಟಕ ಸಂಗೀತವು ಸ್ತೋತ್ರರೂಪದಿಂದ ಕಲೆಯ
ಔನ್ನತ್ಯವನ್ನು ಪಡೆಯಿತು.
ಸಂಗತಿಗಳ ಸಂಯೋಜನೆಯಿಂದ ಸಂಗೀತವು ಮನ
ಮೋಹಕ ಹಾಗೂ ಆನಂದದಾಯಕವಾಯಿತು. ಬೇಸರಹೋಗಿ ಕುತೂಹಲವು
ಆವಿರ್ಭಾವವಾಯಿತು. ಮಾನವನಿಗೆ ಬದಲಾವಣೆಯಿಂದ ಮೋಹ ಪ್ರಬಲವಾಗಿದೆ
ಎಂಬುದನ್ನರಿತು ಸಂಗತಿಗಳ ಸಂಯೋಜನೆಯಿಂದ ಸಾಹಿತ್ಯ ಭಾವ ಮತ್ತು ರಸಭಾವ
ಗಳು ಪ್ರಕಾಶಗೊಳ್ಳುವಂತಹ ಬದಲಾವಣೆಯಿಂದ ಸಂಗೀತವನ್ನು ರಮ್ಯಗೊಳಿ
 
ಸಿದರು.
 
೪೭೩
 
ರಾಗದ ತರಂಗಗಳು.
 
ಪೂರ್ವದಲ್ಲಿ ಸಂಗತಿಗೆ ಪ್ರಯೋಗ ಅಥವಾ ಗಮಕಾಲ~ ಎಂಬ ಹೆಸರಿತ್ತು.
ಸಂಗತಿಗಳು ಕೃತಿಗೆ ಸೌಂದರ್ಯ ನೀಡುವ ಮುಖ್ಯಾಂಶಗಳು. ಇವು ತರಂಗಗಳಿದ್ದಂತೆ
ಪ್ರತಿಯೊಂದು ಸಂಗತಿಯೂ ಒಂದು ಅಲೆ ಅಥವಾ ಮೆಟ್ಟಲಿ
ನಂತಿದ್ದು ಒಂದು ಇನ್ನೊಂದರ ಮುಂದುವರಿದ ರೂಪವಾಗಿರುತ್ತದೆ. ರಾಗ ಭಾವ
ಮತ್ತು ಸಾಹಿತ್ಯ ಭಾವಗಳೆರಡೂ ಮಿಳಿತವಾಗಿ, ರಾಗಭಾವದ ವಿವಿಧ ಸ್ವರೂಪಗಳು
ಮತ್ತು ಸಾಹಿತ್ಯದಲ್ಲಿ ಅಂತರ್ಗತವಾಗಿರುವ ವಿಶೇಷಾರ್ಥಗಳು ಸಂಗತಿಗಳಿಂದ ಪ್ರಕಾಶಕ್ಕೆ
ಬರುತ್ತವೆ. ಇವು ತಾಳದ ಚೌಕಟ್ಟಿನಲ್ಲಿ ಬರುವ ವಿವಿಧ ತರಂಗಗಳು. ಇವುಗಳಲ್ಲಿ
ರಾಗಭಾವ ಸಂಗತಿಗಳು ಮತ್ತು ಸಾಹಿತ್ಯ ಭಾವ ಸಂಗತಿಗಳೆಂದು ಎರಡು ವಿಧ.
ತೋಡಿರಾಗದ ಕೊಲುವ ಮರಗದಾ ಎಂಬ ಕೃತಿಯ ಲಲಿತಕು ಸೀತಕು ಎಂಬುದರ
ಸಂಗತಿಗಳು ರಾಗಭಾವ ಸಂಗತಿಗಳಿಗೆ ನಿದರ್ಶನ. ಮಾರುಬಲ್ಕ (ಶ್ರೀರಂಜನಿ)
ಎಂಬ ಕೃತಿಯ ಪಲ್ಲವಿಯ ಸಂಗತಿಗಳು ಸಾಹಿತ್ಯಭಾವ ಸಂಗತಿಗಳಿಗೆ ನಿದರ್ಶನ.
ಸಂಗತಿಗಳು ಒಂದರಿಂದ ಇನ್ನೊಂದು ವಿಕಾಸಗೊಂಡು ಮುಂದುವರಿದು ಕೊನೆಯ
ಸಂಗತಿಯು ರಾಗದ ಸೌಂದರ್ಯದ ಪರಮಾವಧಿ ಸ್ವರೂಪವನ್ನು ಹೊಂದಿರುತ್ತದೆ.
ಸಾಹಿತ್ಯ ಭಾವ ಸಂಗತಿಗಳನ್ನು ಸಂಗೀತಶಾಸ್ತ್ರಕ್ಕೆ ಅನುಗುಣವಾಗಿ ಬಳಸಿರುವ
ವಾಗ್ಗೇಯಕಾರರೆಂದರೆ ತ್ಯಾಗರಾಜರೊಬ್ಬರೇ. ಅವರ ಕೃತಿಗಳಲ್ಲಿ ಸಮಕಾಲ ಸಂಗತಿ
ಗಳು, ಮಧ್ಯಮಕಾಲ ಸಂಗತಿಗಳು ಮತ್ತು ದ್ರುತಕಾಲ ಸಂಗತಿಗಳಿವೆ. ಸುಲಭ
ವಾದುವೂ ಕಷ್ಟಕರವಾದುವೂ ಇವೆ. ಇವುಗಳನ್ನು ಹಾಡಲು ಉತ್ತಮವಾದ ರವೆ
ಜಾತಿ ಶಾರೀರವಿರಬೇಕು. ತ್ಯಾಗರಾಜರ ಸಂಗೀತದ ಸುಧಾರಣೆಗೆ ಚಕ್ಕನಿರಾಜ
ಮಾರ್ಗಮು ಎಂಬ ಕೃತಿಯ ಪಲ್ಲವಿ (ಖರಹರಪ್ರಿಯ), ಮಾಜಾನಕಿ ಚೆಡಪೆಟ್ಟಕ
(ಕಾಂಭೋಜಿ), ಶ್ರೀರಘುವರ (ಭೈರವಿ), ಜೇಸಿನದೆಲ್ಲ ಮರಚಿತವೋ (ತೋಡಿ),
ದಾರಿ ತೆಲುಸುಕೊಂಟಿ (ಶುದ್ಧ ಸಾವೇರಿ) ಮುಂತಾದ ಕೃತಿಗಳು ನಿದರ್ಶನ. ಈ
ಸುಧಾರಣೆ ಒಂದೇ ಸಂಗೀತ ಕ್ಷೇತ್ರದಲ್ಲಿ ತ್ಯಾಗರಾಜರಿಗೆ ಅತ್ಯುನ್ನತ ಸ್ಥಾನ
 
ದೊರಕಿಸಿದೆ.