This page has not been fully proofread.

ಸಂಗೀತ ಪಾರಿಭಾಷಿಕ ಶ
 
ಯಲ್ಲಿ ಕೃತಿರಚನೆ ಮಾಡಿರುವುದು ಇವರ ಪ್ರತಿಭೆಯ ಪ್ರತೀಕ. ಇವರ ಘನರಾಗ
ಪಂಚರತ್ನಗಳು ಅತ್ಯಂತ ಶ್ರೇಷ್ಠವಾದುವು. ನಾದ ರಚನೆಯು ಇವರ ಕೈಯಲ್ಲಿ
ಔನ್ನತ್ಯವನ್ನು ಪಡೆಯಿತು. ಕೃತಿಗಳ ಸಾಹಿತ್ಯವು ಶಿಷ್ಟ ವ್ಯಾವಹಾರಿಕ ಭಾಷೆಯಲ್ಲಿದೆ.
ಉಪನಿಷತ್ತುಗಳ ಹಲವು ತತ್ವಗಳನ್ನು, ಉತ್ತಮ ಭಾವನೆಗಳನ್ನು ಸರಳ ಸುಂದರವಾಗಿ
ಹೇಳಿದ್ದಾರೆ. ಕೃತಿಗಳು ಬಹುವಾಗಿ ಮಧ್ಯಮ ಕಾಲದಲ್ಲಿವೆ. ಸಂಗೀತದ ಶೈಲಿಯು
ಸುಂದರ, ಲಲಿತ ಹಾಗೂ ಜೀವಂತವಾಗಿದ್ದು ಹೃದಯಸ್ಪರ್ಶಿಯಾಗಿದೆ. ರಾಮಭಕ್ತಿ
ಮತ್ತು ನಾದೋಪಾಸನೆ ಇವರ ಸಂಗೀತದ ಪ್ರಮುಖ ಅಂಶಗಳು
 
೪೭೨
 
ಕೃತಿಗಳು ನಮಗೆ ಬಂದ ರೀತಿ-ತ್ಯಾಗರಾಜರು ಸುಮಾರು ೨೧೧ ರಾಗ
 
ಗಳಲ್ಲಿ ಕೃತಿಗಳನ್ನು ರಚಿಸಿದರು. ೨೪,೦೦೦ ಕೃತಿಗಳನ್ನು ರಚಿಸಿದರೆಂದು ಪ್ರತೀತಿ
ಇದ್ದರೂ ನಮಗೆ ದೊರಕಿರುವುದು ೧೦೦೦ ಕ್ಕಿಂತ ಸ್ವಲ್ಪ ಹೆಚ್ಚಾಗಿವೆ. ಇನ್ನೂ ಹಲವು
ಬೆಳಕಿಗೆ ಬರಬೇಕಾಗಿದೆ. ಭಕ್ತಿಯ ರಸಾವೇಶ ಉಂಟಾದಾಗ ಕೃತಿಗಳನ್ನು ಹಾಡುತ್ತಿ
ದ್ದರು. ಆಶುಕವಿತೆ ಅವರಿಗೆ ಕರತಲಾಮಲಕವಾಗಿತ್ತು. ಏಕಾದಶಿ ಮತ್ತು ಇತರ
ವಿಶೇಷ ದಿನಗಳಲ್ಲಿ ಇಂತಹ ಸಂದರ್ಭಗಳು ಒದಗುತ್ತಿದ್ದುವು ಗುರು ಹಾಡಿದ ಕೃತಿ
ಗಳನ್ನು ಶಿಷ್ಯರು ತಾಳಪತ್ರದ ಮೇಲೆ ಬರೆದುಕೊಳ್ಳುತ್ತಿದ್ದರು. ಒಬ್ಬ ಶಿಷ್ಯನು ಪಲ್ಲವಿಗೆ
ಗಮನಕೊಟ್ಟು ಅದನ್ನು ಸ್ವರಸಹಿತ ಬರೆದು ಕಾವೇರಿ ತೀರಕ್ಕೆ ಹೋಗಿ ಚೆನ್ನಾಗಿ
ಮನದಟ್ಟು ಮಾಡಿಕೊಳ್ಳುತ್ತಿದ್ದನು. ಮತ್ತೊಬ್ಬನು ಅನುಪಲ್ಲವಿಯನ್ನೂ, ಮೂರನೆ
ಯವನು ಚರಣವನ್ನೂ, ತೆಲುಗು ಮತ್ತು ಸಂಸ್ಕೃತದಲ್ಲಿ ಪರಿಣತನಾದ ಮತ್ತೊಬ್ಬನು
ಸಾಹಿತ್ಯವನ್ನು ಮಾತ್ರ ಬರೆದಿಟ್ಟುಕೊಂಡು ಮಾರನೆಯ ದಿನ ನಾಲ್ಕು ಶಿಷ್ಯರೂ ಸೇರಿ
ಕೃತಿಯನ್ನು ಪೂರ್ತಿಯಾಗಿ ಕಲಿತು ಗುರುವಿನ ಮುಂದೆ ಹಾಡುತ್ತಿದ್ದರು. ಹೀಗೆ
ನಾಲ್ಕು ನಾಲ್ಕು ಶಿಷ್ಯರ ತಂಡಗಳು ಬೇರೆಬೇರೆ ಕೃತಿಯನ್ನು ಪಾಠ ಮಾಡಿ ಒಪ್ಪಿಸು
ತ್ತಿದ್ದರು ತ್ಯಾಗರಾಜರ ಕೃತಿಗಳು ನಮಗೆ ಬಂದ ರೀತಿಯಿದು.
 
ಕೃತಿ ಮತ್ತು ಸಂಗತಿ-ಕೃತಿ ಎಂಬ ಈಗಿನ ಸಂಗೀತ ರಚನಾ ವಿಶೇಷವನ್ನು
ಪರಿಪಕ್ವಗೊಳಿಸಿದ ಕೀರ್ತಿ ತ್ಯಾಗರಾಜರಿಗೆ ಸಲ್ಲುತ್ತದೆ. ೧೬ನೆ ಶತಮಾನದಲ್ಲೇ
ಪುರಂದರದಾಸರು ವಾಸುದೇವನ ನಾಮಾವಳಿಯ ಮತ್ತು ಸತತ ಗಣನಾಥ ಎಂಬ
ದೇವರ ನಾಮಗಳಲ್ಲಿ ಕೃತಿ ಎಂಬ ಸಂಗೀತ ರಚನೆಯನ್ನೂ ಕೀರ್ತನೆ ಎಂಬ ಶಬ್ದವನ್ನೂ
ಮೊದಲ ಬಾರಿ ಬಳಸಿದ್ದಾರೆ.
 
ಸುಸ್ವರಂ ಸುರಸಂ ಚೈವ ಸುರಾಗಂ ಮಧುರಾಕ್ಷರಮ್ ।
 
ಸಾಲಂಕಾರಂ ಸುಪ್ರಮಾಣಂ ಷಡ್‌ವರ್ಯಂ ಗೀತಲಕ್ಷಣಮ್ ॥
ತ್ಯಾಗರಾಜರು ಈ ಆರು ಲಕ್ಷಣಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಕೃತಿಗಳನ್ನು
ರಚಿಸಿದರು. ಸೊಗಸುಗಾ ಮೃದಂಗತಾಳಮು ಎಂಬ ಕೃತಿಯಲ್ಲಿ, ಕೃತಿ ಎಂಬ ಪದ
ವನ್ನು ಮೊದಲ ಬಾರಿ ಬಳಸಿದ್ದಾರೆ. * ಯತಿ ವಿಶ್ರಮ ಸದ್ಭಕ್ತಿ ವಿರತಿ ದ್ರಾಕ್ಷಾರಸ
ನವರಸಯುತ ಕೃತಿ ಚೇ " ಎಂದಿದ್ದಾರೆ.