2023-07-05 10:16:32 by jayusudindra
This page has been fully proofread once and needs a second look.
ವೆನ್ಸಾರ್, ವೆಟ್ಟಾರ್, ಕುಡಮುರುಟ್ಟಿ, ಕಾವೇರಿ ಮತ್ತು ಕೋಲರೂನ್ ನದಿಗಳು
ಒಂದಕ್ಕೊಂದು ಸಮಾನಾಂತರವಾಗಿ ಸುಮಾರು ಆರು ಮೈಲಿ ದೂರದ ಪ್ರದೇಶದಲ್ಲಿ
ಹರಿಯುತ್ತವೆ. ಏಪ್ರಿಲ್ ತಿಂಗಳಲ್ಲಿ ನಡೆಯುವ ಸಪ್ತಸ್ಥಾನ ಉತ್ಸವ ಮತ್ತು ಜನವರಿ
ಯಲ್ಲಿ ನಡೆಯುವ ತ್ಯಾಗರಾಜ ಉತ್ಸವಗಳಿಗೆ ಈ ಸ್ಥಳವು ಪ್ರಸಿದ್ಧವಾಗಿದೆ. ಪ್ರತಿ
ವರ್ಷವೂ ಈ ಉತ್ಸವಗಳಿಗೆ ಸಾವಿರಾರು ಮಂದಿ ಯಾತ್ರಿಕರೂ, ಭಕ್ತರೂ
ಬರುತ್ತಾರೆ.
೪೭೦
ತಾವು ಸಿದ್ಧಿ ಪಡೆದ ನಂತರ ಅರವತ್ತು ವರ್ಷಗಳಾದ ಮೇಲೆ ತಮ್ಮ ಹೆಸರು ಎಲ್ಲೆಲ್ಲೂ
ಹರಡುವುದೆಂದು ತ್ಯಾಗರಾಜರು ಹೇಳುತ್ತಿದ್ದರು. ಅವರು ಸಿದ್ಧಿ ಪಡೆದ ನಂತರ ಪ್ರತಿ
ವರ್ಷ ಪುಷ್ಯ ಬಹುಳ ಪಂಚಮಿಯ ದಿನ ಅವರ ಉಮಯಾಳ್ಳುರಂ ಶಿಷ್ಯರು ಮತ್ತು
ಇತರರು ಅವರ ಸಮಾಧಿಯನ್ನು ಪೂಜಿಸಿ, ನಂತರ ಮನೆಗೆ ಬಂದು ಆರಾಧನೆಯನ್ನು
ಮಾಡುತ್ತಿದ್ದರು. ಇಂತಹ ಸಂದರ್ಭಗಳಲ್ಲಿ ಅವರು ಉದ್ವೇಗಭರಿತರಾಗಿ ಕಣ್ಣೀರು
ಸುರಿಸುತ್ತಾ ಹಾಡಲು ಸಾಧ್ಯವಾಗದಷ್ಟು ದುಃಖಪಡುತ್ತಿದ್ದರೆಂದು ತಿಳಿದುಬರುತ್ತದೆ.
೧೯೦೭ ರಿಂದ ಆರಾಧನೋತ್ಸವದ ನೂತನ ಅಧ್ಯಾಯ ಆರಂಭವಾಯಿತು.
ತಿಸ್ಥಾನಂ ಪಂಜು ಭಾಗವತರು, ನರಸಿಂಹ ಭಾಗವತರು ಪ್ರಸಿದ್ಧ ಪಿಟೀಲುವಾದಕ
ತಿರುಚಿ ಗೋವಿಂದಸ್ವಾಮಿ ಪಿಳ್ಳೆಯವರೊಡನೆ ಸೇರಿಕೊಂಡು ಉತ್ಸವವನ್ನು ವಿಜೃಂಭಣೆ
ಯಿಂದ ನಡೆಸಲು ಮೊದಲು ಮಾಡಿದರು. ಬೆಂಗಳೂರು ನಾಗರತ್ನಮ್ಮನವರು ತಮ್ಮ
ಸರ್ವಸ್ವವನ್ನೂ ವಿನಿಯೋಗಿಸಿ ಸಮಾಧಿಯ ಮೇಲೆ ೧೯೨೫ ಸುಂದರವಾದ ದೇವಾಲಯ
ವನ್ನು ಕಟ್ಟಿಸಿ ಅಮರಕೀರ್ತಿಯನ್ನು ಗಳಿಸಿದರು. ಅಲ್ಲಿಂದ ಮುಂದೆ ಇದು ಅಭಿವೃದ್ಧಿ
ಯಾಗುತ್ತ ಬಂದಿದೆ.
ಸಮಾಧಿಯ
ಈ ದೇವಾಲಯವನ್ನು ಕಟ್ಟುವ ಕೆಲಸದ
ಯೂರು ಎಸ್. ಎ. ರಾಮಸ್ವಾಮಿ ಅಯ್ಯರ್‌ರವರ ಪಾಲಿಗೆ ಬಂದಿತು.
ಸುತ್ತಲೂ ಕಟ್ಟಡದ ಅಡಿಪಾಯ ಹಾಕಲು ನೋಡುತ್ತಿದ್ದಾಗ ಒಂದು ಕುತೂಹಲಕರ
ಸಮಾಧಿಯ ಸುತ್ತಲೂ ಎಷ್ಟು ದೂರದವರೆಗೆ ತೋಡ
ಬಹುದೆಂಬುದನ್ನು ನಿರ್ಧರಿಸಲು ಅವರಿಗೆ ಸ್ಥಳದವರಿಂದ ಯಾವ ವಿಧವಾದ ಸಲಹೆ
ದೊರಕಲಿಲ್ಲ ತಾವೇ ಧೈರ್ಯಮಾಡಿ ಕೆಲಸಗಾರರಿಗೆ ತೋಡುವಂತೆ ಹೇಳಿದರು.
ಅವರು ಸ್ವಲ್ಪ ಆಳವಾಗಿ ತೋಡಿದ ನಂತರ ಸ್ಥಳದಿಂದ ಸಾಂಬ್ರಾಣಿ ವಾಸನೆ
ಹೊರಟಿತು. ಇನ್ನು ಹೆಚ್ಚು ಆಳ ತೋಡಬಾರದೆಂದು ಯೋಚಿಸಿ ಅಸ್ತಿಭಾರವನ್ನು
ಹಾಕಿಸಿ ಕಟ್ಟಡದ ನಿರ್ಮಾಣವನ್ನು ಆರಂಭಿಸಿದರು. ದಿವಂಗತ ಸೂಲಮಂಗಲಂ
ವೈದ್ಯನಾಥ ಭಾಗವತರು ತಮ್ಮ ಒಬ್ಬ ಮಿತ್ರರೊಡನೆ ಒಂದು ಸಂಜೆ ಸಮಾಧಿಯ
ಸಮಾಸದಲ್ಲಿ ಕಾವೇರಿಯಲ್ಲಿ ಸಂಧ್ಯಾವಂದನೆ ಮಾಡುತ್ತಿದ್ದರು. ಇದ್ದಕ್ಕಿದ್ದಂತೆ ರಾಮ