This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ತಂಗಿದರು. ಕಳ್ಳರು ಭೀತರಾಗಿ ತಂಡವನ್ನು ದೂರದಿಂದ ಅನುಸರಿಸುತ್ತಾ ಬಂದು

ಬೆಳಗ್ಗೆ ತ್ಯಾಗರಾಜರಿಗೆ ಅಡ್ಡ ಬಿದ್ದು ಬಾಣದ ಮಳೆ ಸುರಿಸಿದ ಆ ತರುಣರು ಯಾರು

ಅವರು ರಾಮಲಕ್ಷ್ಮಣರೇ ಇರಬೇಕೆಂದು ಗ್ರಹಿಸಿ ಆನಂದ ಪರವಶ

ರಾಗಿ ಸಾರಂಗರಾಗದಲ್ಲಿ (ಆದಿ) ಎಂತ ಭಾಗ್ಯಮೋ ಎಂಬ ಕೃತಿಯನ್ನು ಹಾಡಿ, ಕಳ್ಳರ

ಭಾಗ್ಯವನ್ನು ಪ್ರಶಂಸಿಸಿ ಅವರಿಗೆ ರಾಮನಾಮ ಉಪದೇಶವಿತ್ತು, ಅವರು ಒಳ್ಳೆಯ ಜನ
 
ಎಂದು ಕೇಳಿದರು.
 
ರಾಗುವಂತೆ ಮಾಡಿದರು.
 
೪೬೯
 

ಕೊನೆಯ
 
ದಿನಗಳು-೧೮೪೫ರಲ್ಲಿ ತ್ಯಾಗರಾಜರ ಪತ್ನಿ ಯು ಕಾಲವಶ

ರಾದರು. ತ್ಯಾಗರಾಜರಿಗೆ ಅವರು ಸಿದ್ಧಿ ಪಡೆದ ಹಿಂದಿನ ದಶಮಿಯ ರಾತ್ರಿ ಒಂದು

ಸುಂದರಸ್ವಪ್ನವಾಯಿತು. ಅದರ ವಿಷಯವನ್ನು ಸಹಾನಾರಾಗದ ಗಿರಿವೈನೆಲ' ಎಂಬ

ಕೃತಿಯಲ್ಲಿ ಅಮರಗೊಳಿಸಿದ್ದಾರೆ. ಆ ಸ್ವಪ್ನದಲ್ಲಿ ಶ್ರೀರಾಮಚಂದ್ರನು ದರ್ಶನವಿತ್ತು

ಇನ್ನು ಹತ್ತು ದಿನಗಳಲ್ಲಿ ಅವರನ್ನು ತನ್ನ ಸಾನ್ನಿಧ್ಯಕ್ಕೆ ಕರೆದುಕೊಳ್ಳುವುದಾಗಿ ಮಾತು

ಕೊಟ್ಟನು. ಮಾರನೆಯ ದಿನವಾದ ಪುಷ್ಯ ಶುದ್ಧ ಏಕಾದಶಿ ರಾತ್ರಿ ಭಜನಾನಂತರ

ಅಲ್ಲಿದ್ದವರನ್ನು ಕುರಿತು " ಬರುವ ಪುಷ್ಯ ಬಹುಳ ಪಂಚಮಿಯ ದಿನ ಒಂದು ಅದ್ಭುತವು

ನಡೆಯುತ್ತದೆ. ಅಂದು ಎಲ್ಲರೂ ಕೃಪೆ ಮಾಡಿ ಬರಬೇಕು" ಎಂದು ವಿನಂತಿ ಮಾಡಿ

ಕೊಂಡರು. ಚತುರ್ಥಿಯ ದಿನ ಪರಮಹಂಸ ಬ್ರಹ್ಮಾನಂದೇಂದ್ರ ಸ್ವಾಮಿಗಳಿಂದ

ಸನ್ಯಾಸಾಶ್ರಮವನ್ನು ಸ್ವೀಕರಿಸಿ ನಾದಬ್ರಹ್ಮಾನಂದ ಸ್ವಾಮಿಗಳಾದರು. ನಂತರ

ಅಲ್ಲಿದ್ದವರಿಗೆ " ನಾಳೆ ಬೆಳಗ್ಗೆ ಹನ್ನೊಂದು ಗಂಟೆಗೆ ಶ್ರೀರಾಮನು ನನ್ನನ್ನು ಕರೆ

ದೊಯ್ಯುತ್ತಾನೆ. ಈಗಿನಿಂದ ಒಂದೇ ಸಮನಾಗಿ ಭಜನೆ ಮಾಡಿ " ಎಂದರು. ಈ

ಸುದ್ದಿ ಯು ಬಹು ಬೇಗ ಹರಡಿ, ಮಾರನೆಯ ಬೆಳಗ್ಗೆ ದೊಡ್ಡ ಜನಸಂದಣಿ ಸೇರಿತು

ತ್ಯಾಗರಾಜರು ಎತ್ತರವಾದ ಪೀಠದ ಮೇಲೆ ಕುಳಿತರು. ಅವರ

ಉಮಯಾಳ್ಳುರಂ ಕೃಷ್ಣ ಭಾಗವತರು

ವೆಂಕಟಾದ್ರಿ ಸ್ವಾಮಿ, ವಾಲಾಜಪೇಟೆ ಕೃಷ್ಣಸ್ವಾಮಿ ಭಾಗವತರು, ತಿಸ್ಥಾನಂ

ರಾಮಯ್ಯಂಗಾರ್, ಅಯ್ಯಾಭಾಗವತರೂ, ತಹಸೀಲ್ದಾರ್ ಶ್ಯಾಮರಾಯರು ಹಾಜರಿ

ದ್ದ ರು. ಆ ದಿನ ಬೆಳಗ್ಗೆ ತ್ಯಾಗರಾಜರು ವಾಗಧೀಶ್ವರಿರಾಗದ (ಆದಿ) ಪರಮಾತ್ಮುಡು

ಮತ್ತು ಮನೋಹರಿರಾಗದ (ರೂಪಕ) ಪರಿತಾಪಮು ಎಂಬ ಕೃತಿಗಳನ್ನು ರಚಿಸಿ ಹಾಡಿ

ಸಮಯವು ಸಮಪಿಸಿತು. ಅವರು ಯೋಗ ಸಮಾಧಿಯಲ್ಲಿ ಕುಳಿತರು.

ಎಲ್ಲೆಲ್ಲೂ ಮೌನ ಆವರಿಸಿತು. ಹೇಳಿದ್ದ ವೇಳೆಗೆ ಸರಿಯಾಗಿ ಒಂದು ನಾದವು ಅವರ

ಶಿರಸ್ಸಿನಿಂದ ಹೊರಟಿತು.

ಕೂಡಲೇ ಒಂದು ದಿವ್ಯಜ್ಯೋತಿಯು ಹೊರಟು ಎಲ್ಲರೂ

ನೋಡುತ್ತಿದ್ದಂತೆ ಮೇಲಕ್ಕೆ ಉತ್ತರಕ್ಕೆ ಹೋಗಿ ಅದೃಶ್ಯವಾಯಿತು. ನಂತರ ಅವರ

ದೇಹವನ್ನು ಸಕಲಗೌರವ ಮತ್ತು ಸಂಗೀತದೊಡನೆ ಕಾವೇರಿಯ ತೀರಕ್ಕೆ ತೆಗೆದು

ಕೊಂಡು ಹೋಗಿ ಅವರ ಇಚ್ಛೆಯಂತೆ ಗುರು ಸೊಂಟ ವೆಂಕಟರಮಣಯ್ಯನವರ

ಸಮಾಧಿಯ ಪಕ್ಕದಲ್ಲಿ ಸಮಾಧಿ ಮಾಡಲಾಯಿತು.
 
ಶಿಷ್ಯರಲ್ಲಿ
 
ಮತ್ತು
 

ಮತ್ತು
ಸುಂದರಭಾಗವತರು,
 
ಕಾಂಚಿ
 
ದರು.
 
ದರು.