This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ಮೊದಲ ಆರು
 
ಮದ್ರಾಸ್-ತ್ಯಾಗರಾಜರು ಉಪನಿಷತ್ ಬ್ರಹ್ಮರ ಸಲಹೆಯಂತೆ ಕೋವೂರು
ಸುಂದರೇಶ ಮುದಲಿಯಾರ್ ಮತ್ತು ಶಿಷ್ಯ ಕುಪ್ಪಯ್ಯರ್‌ರವರ ಆಹ್ವಾನವನ್ನು ಮನ್ನಿಸಿ
ಮದ್ರಾಸಿಗೆ ಬಂದು ಮುದಲಿಯಾರರ ಅತಿಧಿಗಳಾಗಿ ಸ್ವಲ್ಪ ಕಾಲ ಇದ್ದರು ಈ ಕಾಲ
ದಲ್ಲಿ ಎಂಟು ದಿನಗಳ ಕಾಲ ದೇವಗಾಂಧಾರಿ ರಾಗವನ್ನು ಹಾಡಿದರು.
ದಿನಗಳಲ್ಲಿ ಆಲಾಪನೆಯ ಪ್ರತಿ ಹಂತದ ಕೊನೆಯಲ್ಲಿ ತಮ್ಮ ಒಂದೊಂದು ಆ ರಾಗದ
ಕೃತಿಯನ್ನು ಹಾಡಿ, ಅದೇ ರಾಗದಲ್ಲಿ ಏಳು ಮತ್ತು ಎಂಟನೆಯ ದಿನ ಪಲ್ಲವಿ,
ನೆರವಲ್ ಮತ್ತು ಕಲ್ಪನಾ ಸ್ವರಗಳನ್ನು ಹಾಡಿದರು. ಇದು ಸಂಗೀತ ವಿದ್ವಾಂಸ
ರಿಗೂ, ರಸಿಕರಿಗೂ ಕರ್ಣರಸಾಯನವಾಗಿತ್ತು. ಇದೇ ಕಾಲದಲ್ಲಿ ತಿರುವಲ್ಲಿ ಕ್ಕೇಣಿ
ಯಲ್ಲಿರುವ ಪಾರ್ಥಸಾರಧಿಸ್ವಾಮಿ ಸನ್ನಿಧಿಗೆ ಹೋಗಿ ತೋಡಿರಾಗದ ಸಾರಿ ವೆಡಲಿನ
ಪಾರ್ಧಸಾರಧಿನಿ ಗನರೇ (ರಂಪ) ಎಂಬ ಕೃತಿಯನ್ನು ಹಾಡಿದರು.
 
೪೬೭
 
ಕೋವೂರು-ಮದ್ರಾಸಿನಿಂದ ಪಶ್ಚಿಮಕ್ಕೆ ೧೪ ಮೈಲಿ ದೂರದಲ್ಲಿರುವ
ಸುಂದರ ಗ್ರಾಮವಾದ ಕೋವೂರಿಗೆ ಹೋಗಿ ಅಲ್ಲಿಯ ಸುಂದರೇಶ್ವರ ಸ್ವಾಮಿಯ
ದೇವಾಲಯವನ್ನು ಸಂದರ್ಶಿಸಿ ಕೋವೂರು ಪಂಚರತ್ನವೆಂದು ಪ್ರಸಿದ್ಧವಾಗಿರುವ ಐದು
ಕೃತಿಗಳನ್ನು ಹಾಡಿದರು. ಅವು ಯಾವುವೆಂದರೆ :
 
ಪಂತುವರಾಳಿ
 
ಸಹಾನಾ
 
ಖರಹರಪ್ರಿಯ
ಕಲ್ಯಾಣಿ
 
ಶಂಕರಾಭರಣ
 
ಶಂಭೋ ಮಹಾದೇವ
ಈ ವಸುಧಾ ನೀ ವಂಟ
ಕೋರಿ ಸೇವಿಂಪರಾರೆ
ನಮ್ಮಿ ವಚ್ಚಿನ
ಸುಂದರೇಶ್ವರುನಿ
 
ಇದೆ.
 
ಪಂತುವರಾಳಿ ಮತ್ತು ಶಂಕರಾಭರಣ ರಾಗದ ಕೃತಿಗಳಲ್ಲಿ 'ಗೋಪುರ' ಎಂಬ ಕ್ಷೇತ್ರ
ಮುದ್ರೆಯೂ, ಇತರ ಕೃತಿಗಳಲ್ಲಿ ಕೋವೂರು ಸುಂದರೇಶ' ಎಂಬ ಕ್ಷೇತ್ರಮುದ್ರೆಯೂ
ಪಂತುವರಾಳಿ ರಾಗವು ಶಿವನಿಗೆ ಪ್ರಿಯವಾದ ರಾಗ, ಈ ರಾಗದ ಹಾಡು
ಕೈಲಾಸದ ಚಿತ್ರವನ್ನು ಕೊಡುತ್ತದೆ. ಇಂತಹ ವರ್ಣನೆಯು ಆದಿಶಂಕರಾಚಾರ್ಯರ
ಸೌಂದರ್ಯಲಹರಿ' ಯಲ್ಲಿದೆ. ಕೋರಿ ಸೇವಿಂಪ ಎಂಬ ಕೃತಿಯು ತಾನದ ಶೈಲಿ
ಯಲ್ಲಿದೆ. ಸುಂದರೇಶ್ವರುನಿ ಎಂಬ ಕೃತಿಯಲ್ಲಿ ಯಮಕ ಪ್ರಯೋಗವಿದೆ.
ತಿರುವೋಟ್ಟಿಯೂರು-ವೀಣಾ ಕುಪ್ಪಯ್ಯರ್‌ರವರ ಪ್ರಾರ್ಥನೆಯಂತೆ
ಮದ್ರಾಸಿನಿಂದ ಆರು ಮೈಲಿ ದೂರದಲ್ಲಿರುವ ಅವರ ಊರಿಗೆ ಭೇಟಿ ಇತ್ತರು.
ಸ್ಥಳವು ಆದಿಶಂಕರಾಚಾರ, ತಿರುಜ್ಞಾನ ಸಂಬಂಧರ್, ಅಪ್ಪರ್, ಸುಂದರಮೂರ್ತಿ
ಮತ್ತು ಪಟ್ಟಿನತ್ತಾರ್‌ರವರ ಭೇಟಿಯಿಂದ ಪವಿತ್ರವಾದ ಕ್ಷೇತ್ರ, ತ್ಯಾಗರಾಜರು
ಇಲ್ಲಿಯ ತ್ರಿಪುರಸುಂದರಿ ಅಮ್ಮನ ದೇವಾಲಯಕ್ಕೆ ಬಂದಾಗ ಅಲ್ಲಿಯ ಸಾನ್ನಿಧ್ಯದಿಂದ
ಆನಂದಪುಳಕಿತರಾಗಿ ತಿರುವೋಟ್ಟಿಯೂರು ಪಂಚರತ್ನವೆಂದು ಪ್ರಸಿದ್ಧವಾಗಿರುವ ಐದು
ಕೃತಿಗಳನ್ನು ಹಾಡಿದರು. ಅವು :
 
-